Durand Cup 2022.. ಮುಂಬೈ ಸಿಟಿ ಎಫ್​​ಸಿ ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟ ಬೆಂಗಳೂರು ತಂಡ

author img

By

Published : Sep 19, 2022, 1:46 PM IST

Bengaluru FC win maiden Durand Cup title

ಡುರಾಂಡ್​​ ಕಪ್​ ಫುಟ್ಬಾಲ್​ ಟೂರ್ನಿಯಲ್ಲಿ ಸುನಿಲ್​ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್​​ಸಿ ತಂಡ ಭರ್ಜರಿ ಗೆಲುವು ದಾಖಲು ಮಾಡಿದ್ದು, ಪ್ರಶಸ್ತಿಗೆ ಮುತ್ತಿಕ್ಕಿದೆ.

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾದ ಸಾಲ್ಟ್ ಲೇಕ್​ ಸ್ಟೇಡಿಯಂನಲ್ಲಿ ನಡೆದ ಡುರಾಂಡ್ ಕಫ್ ಪುಟ್ಭಾಲ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಬೆಂಗಳೂರು ಎಫ್​ಸಿ ತಂಡ ಗೆಲುವಿನ ನಗೆ ಬೀರಿದೆ. ಈ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ.

  • 𝑫𝑼𝑹𝑨𝑵𝑫 𝑪𝑼𝑷 𝑪𝑯𝑨𝑴𝑷𝑰𝑶𝑵🏆
    From the first game of this tournament, we wanted to win the 131st Durand Cup for our captain, who has been our inspiration for this team. Thank you to all our supporters and team management💙.@bengalurufc pic.twitter.com/k3meoeMPij

    — Hira Mondal (@Hira_Mondal20) September 19, 2022 " class="align-text-top noRightClick twitterSection" data=" ">

ರೋಚಕ ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್​ಸಿ ತಂಡದ ವಿರುದ್ಧ 2-1 ಅಂತರದಿಂದ ಗೆಲುವು ದಾಖಲಿಸಿದೆ. ಭಾನುವಾರ ಪಂದ್ಯದಲ್ಲಿ ಬೆಂಗಳೂರು ತಂಡದ ಯುವ ಆಟಗಾರ ಎನ್​​ ಶಿವಶಕ್ತಿ ಹಾಗೂ ಅಲನ್ ಕೋಸ್ಟಾ ಗೋಲು ಗಳಿಸಿದರು. ಡುರಾಂಡ್ ಕಫ್​ ಫುಟ್ಬಾಲ್ ಟೂರ್ನಿಯಲ್ಲಿ 38 ವರ್ಷದ ಸುನಿಲ್ ಚೆಟ್ರಿ ಇದೇ ಮೊದಲ ಸಲ ಬೆಂಗಳೂರು ಎಫ್​ಸಿ ತಂಡವನ್ನು ಮುನ್ನಡೆಸಿದ್ದರು. ಈ ಟೂರ್ನಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ಇದನ್ನೂ ಓದಿ: ಎಎಫ್​ಸಿ ಕಪ್​ನ ಮೂವರು ಬೆಸ್ಟ್​ ಆಟಗಾರರ ಆಯ್ಕೆಗೆ ಘೋಷಿಸಿರುವ 13 ಸ್ಟ್ರೈಕರ್​ಗಳ ಪಟ್ಟಿಯಲ್ಲಿ ಚೆಟ್ರಿ ಹೆಸರು

ಸುನಿಲ್​ ಚೆಟ್ರಿ ಪಕ್ಕಕ್ಕೆ ಸರಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ: ಇನ್ನು, ಪ್ರಶಸ್ತಿ ನೀಡುತ್ತಿದ್ದ ವೇಳೆ ಬಂಗಾಳ ಗವರ್ನರ್​ ಲಾ. ಗಣೇಶನ್​​ ಅವರು ಪೋಟೋಗೋಸ್ಕರ ಸುನೀಲ್​​ ಚೆಟ್ರಿ ಅವರನ್ನ ಪಕ್ಕಕ್ಕೆ ಸರಿಸಿದ್ದಾರೆ ಎನ್ನಲಾಗಿರುವ ವಿಡಿಯೋ ವೈರಲ್​ ಆಗ್ತಿದೆ. ಇದಕ್ಕೆ ಫುಟ್ಬಾಲ್​ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸೀರೆಯುಟ್ಟು ಮೈದಾನದಲ್ಲಿ ಫುಟ್ಬಾಲ್ ಆಡಿದ ಟಿಎಂಸಿ ಸಂಸದೆ ಮಹುವಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.