ಎಎಫ್​ಸಿ ಕಪ್​ನ ಮೂವರು ಬೆಸ್ಟ್​ ಆಟಗಾರರ ಆಯ್ಕೆಗೆ ಘೋಷಿಸಿರುವ 13 ಸ್ಟ್ರೈಕರ್​ಗಳ ಪಟ್ಟಿಯಲ್ಲಿ ಚೆಟ್ರಿ ಹೆಸರು

author img

By

Published : Mar 27, 2021, 10:22 PM IST

ಸುನೀಲ್ ಚೆಟ್ರಿ
ಸುನೀಲ್ ಚೆಟ್ರಿ ()

36 ವರ್ಷದ ಚೆಟ್ರಿ 2013ರಿಂದ ಎಎಫ್​ಸಿ ಕಪ್​ನಲ್ಲಿ 4 ಆವೃತ್ತಿಗಳಲ್ಲಿ ಭಾಗವಹಿಸಿ 18 ಗೋಲು ಬಾರಿಸಿದ್ದಾರೆ. ಚರ್ಚಿಲ್​ ಬ್ರದರ್ಸ್​ ನಂತರ 2016, 2017 ಮತ್ತು 2018ರ ಆವೃತ್ತಿಯಲ್ಲಿ ಪ್ರತಿಷ್ಠಿತ ಏಷ್ಯನ್​ ಲೀಗ್​ನಲ್ಲಿ ಬೆಂಗಳೂರು ಎಫ್​ಸಿ ಪರ ಸುನೀಲ್​ ಚೆಟ್ರಿ ಆಡಿದ್ದರು. ಇದೀಗ ಎಎಫ್​ಸಿ ಕಪ್​ನ ಮೂವರು ಬೆಸ್ಟ್​ ಆಟಗಾರರ ಆಯ್ಕೆಗೆ ಘೋಷಿಸಿರುವ 13 ಸ್ಟ್ರೈಕರ್​ಗಳ ಪಟ್ಟಿಯಲ್ಲಿ ಚೆಟ್ರಿ ಹೆಸರು ಇರುವುದು ಹೆಮ್ಮೆಯ ವಿಷಯ.

ನವದೆಹಲಿ: ಭಾರತ ಫುಟ್​ಬಾಲ್​ ತಂಡದ ನಾಯಕ ಸುನೀಲ್ ಚೆಟ್ರಿ ಎಎಫ್​ಸಿಯಲ್ಲಿನ ಅತ್ಯುತ್ತಮ ಮೂವರು ಸ್ಟ್ರೈಕರ್ಸ್​ ಆಯ್ಕೆಗಾಗಿ ಘೋಷಣೆ ಮಾಡಿರುವ 13 ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

36 ವರ್ಷದ ಚೆಟ್ರಿ 2013ರಿಂದ ಎಎಫ್​ಸಿ ಕಪ್​ನಲ್ಲಿ 4 ಆವೃತ್ತಿಗಳಲ್ಲಿ ಭಾಗವಹಿಸಿ 18 ಗೋಲು ಬಾರಿಸಿದ್ದಾರೆ. ಚರ್ಚಿಲ್​ ಬ್ರದರ್ಸ್​ ನಂತರ 2016,2017 ಮತ್ತು 2018ರ ಆವೃತ್ತಿಯಲ್ಲಿ ಪ್ರತಿಷ್ಠಿತ ಏಷ್ಯನ್​ ಲೀಗ್​ನಲ್ಲಿ ಬೆಂಗಳೂರು ಎಫ್​ಸಿ ಪರ ಆಡಿದ್ದರು.

2016ರ ಫೈನಲ್‌ನಲ್ಲಿ ಇರಾಕ್​ನ ಏರ್​ಫೋರ್ಸ್ ಕ್ಲಬ್ ಆಫ್ ವಿರುದ್ಧ ಫೈನಲ್​ನಲ್ಲಿ ಆಡಿ, ಸೋಲು ಕಂಡು ಬೆಂಗಳೂರು ಎಫ್‌ಸಿಯನ್ನು ರನ್ನರ್ಸ್ ಅಪ್ ಸ್ಥಾನಕ್ಕೆ ತಂದಿದ್ದು ಚೆಟ್ರಿಯವರ ಅತ್ಯುತ್ತಮ ಸಾಧನೆಯಾಗಿದೆ.

"ಆಧುನಿಕ ಭಾರತದ ಫುಟ್​ಬಾಲ್​ನ ಐಕಾನಿಕ್​ ಆಟಗಾರ ಮತ್ತು 72 ರಾಷ್ಟ್ರೀಯ ತಂಡದ ಗೋಲುಗಳು ಚೆಟ್ರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗುರುತು ನೀಡಿವೆ. ಜೊತೆಗೆ ಸುನೀಲ್ ಎಎಫ್‌ಸಿ ಕಪ್‌ನ ಕಾಂಟಿನೆಂಟಲ್ ಕ್ಲಬ್ ಸ್ಟೇಜ್​ನಲ್ಲಿ ನಿಯಮಿತವಾಗಿ ತಮ್ಮ ಗುಣಮಟ್ಟವನ್ನು ತೋರಿಸಿದ್ದಾರೆ" ಎಂದು ಎಎಫ್‌ಸಿ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಿಳಿಸಿದೆ.

"ಅವರು 2016ರ ಫೈನಲ್‌ ಪ್ರವೇಶಿಸಿದ್ದ ಬೆಂಗಳೂರು ಎಫ್​ಸಿಯ ನಾಯಕತ್ವ ವಹಿಸಿದ್ದರು. ಹಾಲಿ ಚಾಂಪಿಯನ್ ಆಗಿರುವ ಜೊಹೋರ್ ದಾರುಲ್ ತಾಜಿಮ್ ತಂಡವನ್ನು ಅಂದು ಸೆಮಿಫೈನಲ್​​ನಲ್ಲಿ ಬಗ್ಗುಬಡಿಯುವಲ್ಲಿ ಇವರ ಎರಡು ವೈಯಕ್ತಿಕ ಗೋಲುಗಳು ಪ್ರಮುಖ ಪಾತ್ರವಹಿಸಿದ್ದವು. ಅವರ ಈ ದಶಕದಲ್ಲಿ ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರು" ಎಂದು ಎಎಫ್​ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಚೆಟ್ರಿ 115 ಪಂದ್ಯಗಳಲ್ಲಿ 72 ಗೋಲುಗಳೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತ ಸಕ್ರಿಯ ಆಟಗಾರರಲ್ಲಿ ಹೆಚ್ಚು ಗೋಲು ಗಳಿಸಿರುವ ಪಟ್ಟಿಯಲ್ಲಿ ಪೋರ್ಚುಗಲ್ ನಾಯಕ ಕ್ರಿಸ್ಚಿಯಾನೋ ರೊನಾಲ್ಡೊ(102) ನಂತರದ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ಸ್ಟೋಕ್ಸ್ ಐಪಿಎಲ್​ನಲ್ಲೂ ಬೌಲರ್​ಗಳನ್ನು ಇದೇ ರೀತಿ ಹೆದರಿಸಲಿದ್ದಾರೆಂದು ಭಾವಿಸುವೆ : ಜೋಸ್ ಬಟ್ಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.