ETV Bharat / sports

ಪವನ್ ಶೇರಾವತ್​ ಆರ್ಭಟ: ಬೆಂಗಾಲ್​ ವಾರಿಯರ್ಸ್ ವಿರುದ್ಧ​ ಬುಲ್ಸ್​ಗೆ ರೋಚಕ ಜಯ

author img

By

Published : Dec 26, 2021, 10:25 PM IST

ಬೆಂಗಳೂರಿನ ವೈಟ್​ಫೀಲ್ಸ್​ನ ಶೆರಾಟನ್ ಗ್ರ್ಯಾಂಡ್​ ಹೋಟೆಲ್​ ಮತ್ತು ಕನ್ವೆನ್ಷನ್​ ಸೆಂಟರ್​ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ 35-34 ಅಂಕಗಳ ಅಂತರದಲ್ಲಿ ರೋಚಕ ಜಯ ಸಾಧಿಸಿತು.

Bengaluru Bulls Beat Bengal Warriors 36-35
ಬೆಂಗಾಲ್​ ವಾರಿಯರ್ಸ್ ವಿರುದ್ಧ​ ಬುಲ್ಸ್​ಗೆ ರೋಚಕ ಜಯ

ಬೆಂಗಳೂರು: ಪ್ರೋ ಕಬ್ಬಡಿ ಲೀಗ್​ನ 14ನೇ ಪಂದ್ಯದಲ್ಲಿ ನಾಯಕ ಪವನ್​ ಶೆರಾವತ್​ ಅವರ ಅಬ್ಬರದ ನೆರವಿನಿಂದ ಬೆಂಗಳೂರು ಬುಲ್ಸ್​ ತಂಡ ಒಂದು ಅಂಕದ ಅಂತರದಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.

ಬೆಂಗಳೂರಿನ ವೈಟ್​ಫೀಲ್ಸ್​ನ ಶೆರಾಟನ್ ಗ್ರ್ಯಾಂಡ್​ ಹೋಟೆಲ್​ ಮತ್ತು ಕನ್ವೆನ್ಷನ್​ ಸೆಂಟರ್​ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ 36-35 ಅಂಕದ ಅಂತರದಲ್ಲಿ ರೋಚಕ ಜಯ ಸಾಧಿಸಿತು.

ಪಂದ್ಯದ ಮೊದಲ 5 ನಿಮಿಷಗಳಲ್ಲೇ ಬೆಂಗಳೂರು ತಂಡ ಆಲೌಟ್ ಆಗುವ ಮೂಲಕ ಭಾರಿ ಹಿನ್ನಡೆ ಅನುಭವಿಸಿತು. ಆದರೆ ಆಲೌಟ್ ಆದರ ನಂತರ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿದ ಪವನ್​ ಶೆರಾವತ್​ ಮೊದಲಾರ್ಧದ ವೇಳೆಗೆ 18-18ರಲ್ಲಿ ಸಮಬಲಕ್ಕೆ ತಂದು ನಿಲ್ಲಿಸಿದರು. ದ್ವಿತೀಯಾರ್ಧದಲ್ಲಿ ಕೊನೆಯ ನಿಮಿಷದ ವರೆಗೂ ಈ ಪೈಪೋಟಿ ಹೀಗೆ ಮುಂದುವರಿದಿತ್ತು.

ಕೊನೆಯ ನಿಮಿಷದಲ್ಲಿ 33-33 ಅಂಕಗಳ ಸಮಬಲ ಇದ್ದಾಗ ಡಾಂಗ್​ ಜಿಯೋನ್​ ಲೀ 2 ಅಂಕ ಪಡೆದು ಬುಲ್ಸ್​ ಮುನ್ನಡೆಯನ್ನು 35-33ಕ್ಕೆ ಹೆಚ್ಚಿಸಿ ಬುಲ್ಸ್​ಗೆ ಟರ್ನಿಂಗ್ ಪಾಯಿಂಟ್​ ತಂದುಕೊಟ್ಟರು. ನಂತರ ಬೆಂಗಾಲ್​ ಮಣೀಂದರ್ ಸಿಂಗ್​​ ಒಂದು ಅಂಕ ಪಡೆದು 35-34ಕ್ಕೆ ಅಂತರವನ್ನು ತಗ್ಗಿಸಿದರೆ, ಮತ್ತೆ ಪವನ್​ ಒಂದು ಅಂಕ ಪಡೆದು 2 ಅಂಕ ಲೀಡ್​ಗೆ ತಂದು ನಿಲ್ಲಿಸಿದರು. ಪಂದ್ಯದ ಕೊನೆಯ ರೈಡಿಂಗ್​ನಲ್ಲಿ ಬೆಂಗಳೂರಿನ ಅನುಭವಿ ಡಿಫೆಂಡರ್​ ಮಹೇಂದರ್​ ಸಿಂಗ್ ತಾವಾಗಿಯೇ ಶರಣಾಗಿ ಒಂದು ಅಂಕವನ್ನು ಮಾತ್ರ ಬಿಟ್ಟುಕೊಟ್ಟು 36-35ರಲ್ಲಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಬೆಂಗಳೂರು ಪರ ರೈಡಿಂಗ್​ನಲ್ಲಿ ನಾಯಕ ಪವನ್ ಕುಮಾರ್ ಶೆರಾವತ್​ 15, ಚಂದ್ರನ್ ರಂಜಿತ್​ 6 ಅಂಕ ಪಡೆದರೆ, ಡಿಫೆಂಡಿಂಗ್​ನಲ್ಲಿ ಮಹೇಂದರ್​ ಸಿಂಗ್ , ಅಮನ್​ ತಲಾ 2 ಅಂಕ ಪಡೆದು ಉತ್ತಮ ಪ್ರದರ್ಶನ ತೋರಿದರು. ಬೆಂಗಾಲ್​ ವಾರಿಯರ್​ ಪರ ರೈಡರ್​ ಮಣೀಂದರ್​ ಸಿಂಗ್ 17, ಆಲ್​ರೌಂಡರ್​ ಇಸ್ಮಾಯಿಲ್ ನಬೀಬಕ್ಷ್​ 8 ಅಂಕ ಪಡೆದು ಮಿಂಚಿದರು.

ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಗುಜರಾತ್ ಜೈಂಟ್ಸ್​ 24-24 ರಲ್ಲಿ ಸಮಬಲ ಸಾಧಿಸಿತು.

ಇದನ್ನೂ ಓದಿ:Ind vs SA Test: ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಕನ್ನಡಿಗ ರಾಹುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.