ETV Bharat / sports

ಟೆನ್ನಿಸ್​ ರ‍್ಯಾಂಕಿಂಗ್​ನಲ್ಲಿ ಭಾರೀ ಏರಿಕೆ ಕಂಡ ಭಾರತದ ಸುಮಿತ್ ನಾಗಲ್​​

author img

By

Published : Sep 30, 2019, 12:16 PM IST

ATP rankings

ಭಾರತದ​ ಹೊಸ ಟೆನ್ನಿಸ್ ಪ್ರತಿಭೆ ಸುಮಿತ್ ನಾಗಲ್​ ನೂತನ ಎಟಿಪಿ ಟೆನ್ನಿಸ್​ ರ‍್ಯಾಂಕಿಂಗ್​ನಲ್ಲಿ 26 ಸ್ಥಾನ ಜಿಗಿತ ಕಂಡು ವೃತ್ತಿಜೀವನದಲ್ಲೇ ಶ್ರೇಷ್ಠ ರ‍್ಯಾಂಕಿಂಗ್ ಪಡೆದಿದ್ದಾರೆ.

ಲಂಡನ್​: ಭಾರತದ ಟೆನ್ನಿಸ್​ ಜಗತ್ತಿನಲ್ಲಿ ಉದಯಿಸುತ್ತಿರುವ ಹೊಸ ಪ್ರತಿಭೆ ಸುಮಿತ್​ ಎಟಿಪಿ ಟೆನ್ನಿಸ್​ ರ‍್ಯಾಂಕಿಂಗ್​ನಲ್ಲಿ 26 ಸ್ಥಾನ ಜಿಗಿತಕಂಡು ವೃತ್ತಿಜೀವನದಲ್ಲೇ ಅತ್ಯುತ್ತಮ ರ‍್ಯಾಂಕಿಂಗ್ ಕಾಯ್ದುಕೊಂಡಿದ್ದಾರೆ.

ಅಮೆರಿಕನ್​ ಓಪನ್​ನಲ್ಲಿ ಅರ್ಹತೆಗಿಟ್ಟಿಸಿಕೊಂಡಿದ್ದ ಸುಮಿತ್​ ನಾಗಲ್ ನಿನ್ನೆಯಷ್ಟೇ ಬ್ಯೂನಸ್​ ಏರ್ಸ್​ ಎಟಿಪಿ ಚಾಲೆಂಜ್​ ಟೂರ್ನಿ ಗೆಲ್ಲುವ ಮೂಲಕ​ ಭಾನುವಾರ ಬಿಡುಗಡೆಯಾದ ನೂತನ ಟೆನ್ನಿಸ್​ ರ‍್ಯಾಂಕಿಂಗ್​ನಲ್ಲಿ 26 ಸ್ಥಾನ ಜಿಗಿತ ಕಂಡಿದ್ದಾರೆ.

ATP rankings
ಸುಮಿತ್ ನಾಗಲ್ ನೂತನ ಶ್ರೇಯಾಂಕ

ಈ ಟೂರ್ನಿಗೂ ಮೊದಲೆ 161ನೇ ಸ್ಥಾನದಲ್ಲಿದ್ದ ಸುಮಿತ್​ ಇದೀಗ 26 ಸ್ಥಾನ ಜಿಗಿತ ಕಂಡಿದ್ದು 135 ನೇ ಸ್ಥಾನಕ್ಕೇರಿದ್ದಾರೆ. ಸುಮಿತ್ ಬ್ಯೂನಸ್​ ಓಪನ್​ ಫೈನಲ್​ನಲ್ಲಿ ಅರ್ಜೆಂಟೈನಾದ ಫಕುಂಡೊ ಬ್ಯಾಗಿನ್ಸ್ ಅವರನ್ನು 6-4, 6-2 ರಲ್ಲಿ ಮಣಿಸಿ ಪ್ರಶಸ್ತಿ ಜಯಿಸಿದ್ದರು.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.