ETV Bharat / sports

ಫುಟ್ಬಾಲ್ ಪಂದ್ಯ ಸೋತಿದ್ದಕ್ಕೆ ಮೈದಾನದಲ್ಲೇ ಹಿಂಸಾಚಾರ.. ಅಭಿಮಾನಿಗಳ ಸಾವಿನ ಸಂಖ್ಯೆ 174ಕ್ಕೆ ಏರಿಕೆ

author img

By

Published : Oct 2, 2022, 7:00 AM IST

Updated : Oct 2, 2022, 1:08 PM IST

ಇಂಡೋನೇಷಿಯಾದಲ್ಲಿ ನಡೆದ ಫುಟ್ಬಾಲ್​ ಪಂದ್ಯದಲ್ಲಿ ಹಿಂಸಾಚಾರ ಉಂಟಾಗಿ ನೂರಾರು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಘೋರ ಹಿಂಸಾಚಾರದಿಂದ ಟೂರ್ನಿಯನ್ನು ಮುಂದೂಡಲಾಗಿದೆ.

riot-at-football-match-in-indonesia
ಇಂಡೋನೇಷಿಯಾ ಫುಟ್ಬಾಲ್​ ಟೂರ್ನಿಯಲ್ಲಿ ಹಿಂಸಾಚಾರ

ಇಂಡೋನೇಷಿಯಾ: ಫುಟ್ಬಾಲ್​ ಪಂದ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿಗಳ ಮಧ್ಯೆ ನಡೆದ ಕಾದಾಟದಲ್ಲಿ 174 ಮಂದಿ ಮೃತಪಟ್ಟು, 150 ಕ್ಕೂ ಅಧಿಕ ಜನರು ಗಾಯಗೊಂಡ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ನಡೆದಿದೆ. ಪೂರ್ವ ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಬಿಆರ್​​ಐ ಲಿಗಾ 1 ಫುಟ್ಬಾಲ್ ಪಂದ್ಯದ ವೇಳೆ ಈ ಹಿಂಸಾಚಾರ ಸಂಭವಿಸಿದೆ.

ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವೆ ಪಂದ್ಯ ನಡೆದಿದೆ. ಇದರಲ್ಲಿ ಅರೆಮಾ ಎಫ್​ಸಿ ತಂಡ ಸೋಲು ಅನುಭವಿಸಿದೆ. ಇದರಿಂದ ರೊಚ್ಚಿಗೆದ್ದ ಸಾವಿರಾರು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡು, ಮೈದಾನಕ್ಕೂ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಇದನ್ನು ತಡೆಯಲು ಪೊಲೀಸರು ಅಶ್ರುವಾಯು, ರಬ್ಬರ್​ ಬುಲೆಟ್​, ಲಾಠಿ ಚಾರ್ಜ್​ ಮಾಡಿದ್ದಾರೆ.

  • #WATCH | At least 127 people died after violence at a football match in Indonesia, last night. The deaths occurred when angry fans invaded a football pitch after a match in East Java

    (Video source: Reuters) pic.twitter.com/j7Bet6f9mE

    — ANI (@ANI) October 2, 2022 " class="align-text-top noRightClick twitterSection" data=" ">

ಅಭಿಮಾನಿಗಳ ಮಧ್ಯೆ ನಡೆದ ಹೊಡೆದಾಟದಲ್ಲಿ 174 ಜನರು ಮೃತಪಟ್ಟಿದ್ದು, ಇದರಲ್ಲಿ ಇಬ್ಬರು ಪೊಲೀಸರೂ ಇದ್ದಾರೆ. 34 ಜನರು ಕ್ರೀಡಾಂಗಣದಲ್ಲೇ ಕೊಲ್ಲಲ್ಪಟ್ಟರೆ, ಉಳಿದವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ. ಅಭಿಮಾನಿಗಳ ನಡುವಿನ ಹಿಂಸಾಚಾರ ತಡೆಯಲು ಪೊಲೀಸರು ಲಾಠಿ ಚಾರ್ಜ್​ ಮಾಡಿದರು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಫುಟ್ಬಾಲ್​ ಅಭಿಮಾನಿಗಳು ಸೋತ ಕಿಚ್ಚಿನಿಂದ ಮೈದಾನದಲ್ಲಿ ಹೊಡೆದಾಡಿಕೊಳ್ಳುತ್ತಿರುವ ಮತ್ತು ಗುಂಡು ಹಾರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಅರೆಮಾ ಎಫ್​ಸಿ ತಂಡದ ಅಭಿಮಾನಿಗಳ ದಾಂಧಲೆಗೆ ನೂರಾರು ನೂರಾರು ಪ್ರಾಣ ಕಳೆದುಕೊಂಡಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ ತಂಡವನ್ನು ನಿಷೇಧಿಸಲಾಗಿದೆ. ಅಲ್ಲದೇ ಟೂರ್ನಿಯನ್ನು ಒಂದು ವಾರ ಮುಂದೂಡಲಾಗಿದೆ. ಘಟನೆ ಸಂಬಂಧ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.

ಓದಿ: ICC ODI and T20 rankings: ಭಾರತ ವನಿತೆಯರ ತಂಡ ಏಕದಿನ, ಚುಟುಕು ಕ್ರಿಕೆಟ್​ನಲ್ಲಿ 4ನೇ ಸ್ಥಾನದಲ್ಲಿ ಭದ್ರ

Last Updated : Oct 2, 2022, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.