ETV Bharat / sports

ಆಲ್​ ಇಂಗ್ಲೆಂಡ್ ಓಪನ್: ಸೋತು ಹೊರಬಿದ್ದ ಸೈನಾ, ಸಿಂಧು, ಕ್ವಾರ್ಟರ್‌ಗೆ​ ಸಾತ್ವಿಕ್-ಚಿರಾಗ್

author img

By

Published : Mar 17, 2022, 10:13 PM IST

ಟೂರ್ನಿಯಲ್ಲಿ 6ನೇ ಶ್ರೇಯಾಂಕ ಪಡೆದುಕೊಂಡಿದ್ದ 2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಗುರುವಾರ ಜಪಾನ್​ ಸಯಾಕ ತಕಹಶಿ ವಿರುದ್ಧ 19-21,21-16, 17-21ರಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು. ಸಿಂಧು ಸತತ 2ನೇ ಟೂರ್ನಮೆಂಟ್​ನಲ್ಲಿ 2ನೇ ಸುತ್ತಿನಲ್ಲಿ ನಿರ್ಗಮಿಸಿದಂತಾಗಿದೆ. ಕಳೆದ ವಾರ ಜರ್ಮನ್​ ಓಪನ್​ನಲ್ಲಿ ಚೀನಾದ ಜಾಂಗ್ ಯಿ ಮನ್​ ವಿರುದ್ಧ 14-21, 21-15, 14-21ರಲ್ಲಿ ಸೋಲು ಕಂಡಿದ್ದರು.

Sindhu, saina lost second round match
2ನೇ ಸುತ್ತಿನಲ್ಲಿ ಸೋತು ಹೊರಬಿದ್ದ ಸೈನಾ, ಸಿಂಧು

ಬರ್ಮಿಂಗ್​ಹ್ಯಾಮ್​: ಭಾರತ ಅನುಭವಿ ಶಟ್ಲರ್​ಗಳಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಓಪನ್​ ಮಹಿಳೆಯರ ಸಿಂಗಲ್ಸ್​ನಲ್ಲಿ ಸೋಲು ಕಂಡು 2ನೇ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಟೂರ್ನಿಯಲ್ಲಿ 6ನೇ ಶ್ರೇಯಾಂಕ ಪಡೆದುಕೊಂಡಿದ್ದ 2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಗುರುವಾರ ಜಪಾನ್​ ಸಯಾಕ ತಕಹಶಿ ವಿರುದ್ಧ 19-21,21-16, 17-21ರಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು. ಸಿಂಧು ಸತತ 2ನೇ ಟೂರ್ನಮೆಂಟ್​ನಲ್ಲಿ 2ನೇ ಸುತ್ತಿನಲ್ಲಿ ನಿರ್ಗಮಿಸಿದಂತಾಗಿದೆ. ಕಳೆದ ವಾರ ಜರ್ಮನ್​ ಓಪನ್​ನಲ್ಲಿ ಚೀನಾದ ಜಾಂಗ್ ಯಿ ಮನ್​ ವಿರುದ್ಧ 14-21, 21-15, 14-21ರಲ್ಲಿ ಸೋಲು ಕಂಡಿದ್ದರು.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಹಿರಿಯ ಶಟ್ಲರ್ ಸೈನಾ ನೆಹ್ವಾಲ್ 2ನೇ ಶ್ರೇಯಾಂಕದ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ 14-21, 21-17,17-21ರಲ್ಲಿ ಸೋಲು ಕಂಡಿದ್ದರು. ಇವರಿಬ್ಬರ ಸೋಲಿನೊಂದಿಗೆ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಭಾರತೀಯರ ಸವಾಲು ಅಂತ್ಯವಾಗಿದೆ.

ಪುರುಷರ ಸಿಂಗಲ್ಸ್​ನಲ್ಲಿ 20 ವರ್ಷದ ಲಕ್ಷ್ಯ ಸೇನ್ 21-16, 21-18ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆ್ಯಂಡರ್ಸ್​ ಆ್ಯಂಟನ್ಸೆನ್​ ವಿರುದ್ಧ ಗೆದ್ದು ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ. ಮತ್ತೊಬ್ಬ ಸ್ಟಾರ್​ ಕಿಡಂಬಿ ಶ್ರೀಕಾಂತ್​ 2ನೇ ಸುತ್ತಿನಲ್ಲಿ ಇಂದು ಕಣಕ್ಕಿಳಿಯಲಿದ್ದಾರೆ.

ಕ್ವಾರ್ಟರ್ ಫೈನಲ್​ಗೆ ಸಾತ್ವಿಕ್-ಚಿರಾಗ್​

ಇನ್ನು ಡಬಲ್ಸ್​ನಲ್ಲಿ ಸಾತ್ವಿಕ್ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಜೋಡಿ ಜರ್ಮನ್​ನ ಮಾರ್ಕ್​ ಲ್ಯಾಮ್ಸ್​ಫುಸ್​ ಮತ್ತು ಮರ್ವಿನ್ ಸೀಡೆಲ್ ವಿರುದ್ಧ 21-7,21-7 ರ ಅಂತರದಲ್ಲಿ ಸುಲಭ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಈ ಜೋಡಿ 8ರ ಘಟ್ಟದಲ್ಲಿ ನಂಬರ್ 1 ಜೋಡಿಯಾಗಿರುವ ಇಂಡೋನೆಷ್ಯಾದ ಮಾರ್ಕಸ್​ ಫರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ:ಆಲ್​ ಇಂಗ್ಲೆಂಡ್ ಓಪನ್: 3ನೇ ಶ್ರೇಯಾಂಕದ ಸ್ಪರ್ಧಿಯ ಮಣಿಸಿ ಕ್ವಾ.ಫೈನಲ್​ ಪ್ರವೇಶಿಸಿದ ಲಕ್ಷ್ಯ ಸೇನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.