ETV Bharat / sports

ಆಲ್​ ಇಂಗ್ಲೆಂಡ್ ಓಪನ್: 3ನೇ ಶ್ರೇಯಾಂಕದ ಸ್ಪರ್ಧಿಯ ಮಣಿಸಿ ಕ್ವಾ.ಫೈನಲ್​ ಪ್ರವೇಶಿಸಿದ ಲಕ್ಷ್ಯ ಸೇನ್

author img

By

Published : Mar 17, 2022, 8:38 PM IST

ಗುರುವಾರ ನಡೆದ ಆಲ್​ ಇಂಗ್ಲೆಂಡ್​ ಓಪನ್​ ಚಾಂಪಿಯನ್​ಶಿಪ್​ನ 2ನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ 21-16, 21-18ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರನನ್ನು ಮಣಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದರು.

All England Open 2022
ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಲಕ್ಷ್ಯ ಸೇನ್

ಬರ್ಮಿಂಗ್​ಹ್ಯಾಮ್: ಭಾರತದ ಯುವ ಶಟ್ಲರ್​​ ಲಕ್ಷ್ಯ ಸೇನ್ ದಿನದಂದ ದಿನಕ್ಕೆ ಅಗ್ರ ಶ್ರೇಯಾಂಕದ ಸ್ಟಾರ್​ ಶಟ್ಲರ್​ಗಳಿಗೆ ಸೋಲುಣಿಸುವ ಮೂಲಕ ಬ್ಯಾಡ್ಮಿಂಟನ್​​ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ.

ಕಳೆದ ವಾರ ಜರ್ಮನ್ ಓಪನ್​ನಲ್ಲಿ ಅಗ್ರ ಶ್ರೇಯಾಂಕದ ಡೆನ್ಮಾರ್ಕ್ ಶಟ್ಲರ್ ವಿಕ್ಟರ್ ಅಕ್ಸೆಲ್ಸನ್​ ವಿರುದ್ಧ ಗೆಲುವು ಸಾಧಿಸಿದ್ದ ಲಕ್ಷ್ಯ ಇಂದು, ಮತ್ತೊಬ್ಬ ಡ್ಯಾನಿಶ್​ ಶಟ್ಲರ್​ ಆ್ಯಂಡರ್ಸ್​ ಆ್ಯಂಟನ್ಸೆನ್​ ವಿರುದ್ಧ ವಿಜಯ ಸಾಧಿಸಿದರು.

ಗುರುವಾರ ನಡೆದ ಆಲ್​ ಇಂಗ್ಲೆಂಡ್​ ಓಪನ್​ ಚಾಂಪಿಯನ್​ಶಿಪ್​ನ 2ನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ 21-16, 21-18ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರನನ್ನು ಮಣಿಸಿ ಕ್ವಾರ್ಟರ್​ ಫೈನಲ್ ತಲುಪಿದರು.

ಮೊದಲ ಗೇಮ್​ನಲ್ಲಿ 13-13 ಅಂಕಗಳವರೆಗೂ ತೀವ್ರ ಪೈಪೋಟಿ ಎದುರಿಸಿದ ಲಕ್ಷ್ಯ ನಂತರ ಆಕ್ರಮಣಕಾರಿ ಆಟ ಪ್ರದರ್ಶಿಸಿ 5 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆದರು. 2ನೇ ಗೇಮ್​ನಲ್ಲಿ ಇಬ್ಬರು ಸ್ಟಾರ್ ಆಟಗಾರರು ರೋಚಕ ಹೋರಾಟ ನಡೆಸಿದರು. ಒಂದು ಹಂತದಲ್ಲಿ ಆ್ಯಂಟನ್ಸೆನ್​ 17-16ರಲ್ಲಿ ಮುನ್ನಡೆ ಪಡೆದುಕೊಂಡಿದ್ದರು. ಆದರೆ ಲಕ್ಷ್ಯ ಸ್ಟಾರ್​ ಆಟಗಾರನಿಗೆ ಆಘಾತ ನೀಡಿ 3 ಅಂಕಗಳ ಅಂತರದಲ್ಲಿ ಜಯ ಸಾಧಿಸಿ 8ರ ಘಟ್ಟಕ್ಕೆ ತೇರ್ಗಡೆಯಾದರು.

20 ವರ್ಷದ ಲಕ್ಷ್ಯ ಮುಂದಿನ ಸುತ್ತಿನಲ್ಲಿ ಚೀನಾದ ಲು ಗುವಾಂಗ್ ಜು ಅಥವಾ ಹಾಂಕಾಂಗ್​ನ ಆ್ಯಂಗುಸ್ ಎಂಗ್ ಕಾ ಲಾಂಗ್ ವಿರುದ್ಧ ಸೆಣಸಾಡಲಿದ್ದಾರೆ.

ಇದನ್ನೂ ಓದಿ:ನಾಯಕತ್ವ ತ್ಯಜಿಸಿ ಒತ್ತಡಮುಕ್ತ ಕೊಹ್ಲಿ ಎದುರಾಳಿಗಳಿಗೆ ಅಪಾಯಕಾರಿ: ಮ್ಯಾಕ್ಸ್​ವೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.