ETV Bharat / sports

ತನ್ನ ರಕ್ಷಣೆಗೆ ಹಾಕಿ ತಂಡ ಕೆಲಸ ಮಾಡಬೇಕು: ಕೋಚ್​ ಗ್ರಹಾಂ ರೀಡ್

author img

By

Published : Mar 10, 2021, 9:19 AM IST

coach Reid
ಭಾರತದ ಪುರುಷರ ಹಾಕಿ ತಂಡ

ಎದುರಾಳಿಗಳಿಗೆ ಆಟದ ಮಧ್ಯದಲ್ಲಿ ಚೇತರಿಸಿಕೊಳ್ಳಲು ಅವಕಾಶ ನೀಡುತ್ತೇವೆ. ಆ ರೀತಿ ಮಾಡದೇ, ನಮ್ಮ ರಕ್ಷಣೆ ಮಾಡಬೇಕು ಎಂದು ಭಾರತದ ಪುರುಷರ ಹಾಕಿ ತಂಡದ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.

ಹೈದರಾಬಾದ್: ಭಾರತದ ಪುರುಷರ ಹಾಕಿ ತಂಡವು ತನ್ನ ರಕ್ಷಣೆಗೆ ಕೆಲಸ ಮಾಡಬೇಕಾಗಿದೆ ಎಂದು ಕೋಚ್ ಗ್ರಹಾಂ ರೀಡ್ ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಯುರೋಪ್ ಪ್ರವಾಸದಿಂದ ಆಗಮಿಸಿದ ಬಳಿಕ ಮಾತನಾಡಿದ ಅವರು, ತಮ್ಮ ಎದುರಾಳಿಗಳಿಗೆ ಆಟದ ಮಧ್ಯದಲ್ಲಿ ಚೇತರಿಸಿಕೊಳ್ಳಲು ಅವಕಾಶ ನೀಡುತ್ತೇವೆ. ಆ ರೀತಿ ಮಾಡದೇ, ನಮ್ಮ ರಕ್ಷಣೆ ಮಾಡಬೇಕು ಎಂದು ನನಗೆ ಈ ಪ್ರವಾಸದಲ್ಲಿ ತಿಳಿಯಿತು ಎಂದಿದ್ದಾರೆ.

ಇದನ್ನು ಓದಿ: ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗ ನೀಡಿದ ಅನುದಾನದ ವರದಿ

"ನಾವು ಬೆಂಗಳೂರಿನ ಎಸ್‌ಎಐಗೆ ಹಿಂದಿರುಗಿದ ನಂತರ ಈ ಪ್ರವಾಸದ ಬಗ್ಗೆ ಅವಲೋಕನ ಮಾಡಿದೆವು ಎಂದರು. ಮುಂಬರುವ ಅರ್ಜೆಂಟೀನಾ ಮತ್ತು ಟೋಕಿಯೊ ಒಲಿಂಪಿಕ್ಸ್​ನಲ್ಲೂ ಉತ್ತಮ ಆಟ ಆಡಲು ಮುಂದಾಗುತ್ತೇವೆ. ನಮಗೆ ಅಗತ್ಯವಿರುವ ವಿಚಾರಗಳನ್ನು ಪಡೆದುಕೊಂಡು ಕೆಲಸ ಮಾಡುತ್ತೇವೆ. ಒಲಿಂಪಿಕ್ ವರ್ಷವು ಈಗ ನಮಗೆ ನಿಜವಾಗಿಯೂ ಪ್ರಾರಂಭವಾಗಿದೆ ಮತ್ತು ನಮ್ಮ ಕಲಿಕೆಗಳನ್ನು ವೇಗಗೊಳಿಸಬೇಕಾಗಿದೆ "ಎಂದು ಅವರು ಹೇಳಿದರು.

ಜರ್ಮನಿಯ ಕ್ರೆಫೆಲ್ಡ್​ನಲ್ಲಿ ಭಾರತ ಜರ್ಮನಿ ವಿರುದ್ಧ 6-1 ಜಯ ಮತ್ತು 1-1 ಡ್ರಾ ಸಾಧಿಸಿತು ಇನ್ನು ಬೆಲ್ಜಿಯಂನ ಆಂಟ್ವೆರ್ಪ್​ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 1-1 ಡ್ರಾ ಮತ್ತು 3-2 ಅಂತರದಿಂದ ಗೆಲುವು ಸಾಧಿಸುವಲ್ಲಿ ಟೀಂ ಇಂಡಿಯಾ ಹಾಕಿ ಯಶ ಸಾಧಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.