ETV Bharat / sports

ಹಾಕಿ..IHF ವಾರ್ಷಿಕ ಪ್ರಶಸ್ತಿಗಳೆಲ್ಲವನ್ನು ಬಾಚಿಕೊಂಡ ಭಾರತ: ಬೆಲ್ಜಿಯಂ ಅಸಮಾಧಾನ

author img

By

Published : Oct 6, 2021, 4:27 PM IST

Updated : Oct 7, 2021, 3:26 PM IST

ಹರ್ಮನ್​ ಪ್ರೀತ್ ಸಿಂಗ್​ ವರ್ಷದ ಆಟಗಾರ, ಗುರ್ಜೀತ್ ಕೌರ್​ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರೆ, ​ ಪಿಆರ್​ ಶ್ರೀಜೇಶ್​​ ಮತ್ತು ಸವಿತಾ ಪೂನಿಯಾ ಅತ್ಯುತ್ತಮ ಗೋಲ್​ ಕೀಪರ್​ ಪ್ರಶಸ್ತಿ ಮತ್ತು ಶರ್ಮಿಳಾ ದೇವಿ(ಮಹಿಳೆಯರ ವಿಭಾಗ) ಹಾಗೂ ವಿವೇಕ್ ಸಾಗರ್​ ಪ್ರಸಾದ್​(ಪುರುಷ) ವಿಭಾಗದ ಅತ್ಯುತ್ತಮ ಉದಯೋನ್ಮುಖ ಪ್ರತಿಭೆ ಪ್ರಶಸ್ತಿಗಳನ್ನು ಪಡೆದರು.

India sweeps FIH annual awards
ಹರ್ಮನ್​ ಪ್ರೀತ್ ಸಿಂಗ್​

ಲೌಸಾನ್ನೆ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್​(IHF) ಮಂಗಳವಾರ ಘೋಷಿಸಿದ ಎಲ್ಲಾ ವಿಭಾಗದ ವಾರ್ಷಿಕ ಪ್ರಶಸ್ತಿಗಳನ್ನು ಭಾರತೀಯ ಆಟಗಾರರೇ ಪಡೆದು ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ, ಒಲಿಂಪಿಕ್ಸ್​ ಚಾಂಪಿಯನ್​ ಆಗಿರುವ ಬೆಲ್ಜಿಯಂ ಒಂದೇ ಒಂದು ಪ್ರಶಸ್ತಿ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ಮತದಾನದ ವ್ಯವಸ್ಥೆಯನ್ನು ಕುರಿತು ಕಿಡಿಕಾರಿದೆ.

ಭಾರತದ 5 ಆಟಗಾರರು ಮತ್ತು ಪುರುಷ ಮತ್ತು ಮಹಿಳಾ ತಂಡದ ಕೋಚ್​ಗಳು ಗರಿಷ್ಠ ಮತವನ್ನು ಪಡೆದು ಪ್ರತ್ಯೇಕ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತ ಪುರುಷ ತಂಡ ಟೋಕಿಯೋದಲ್ಲಿ 41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಇನ್ನು ಮಹಿಳಾ ತಂಡ 4ನೇ ಸ್ಥಾನಗಳಿಸಿಕೊಂಡಿತ್ತು.

ಹರ್ಮನ್​ ಪ್ರೀತ್ ಸಿಂಗ್​ ವರ್ಷದ ಆಟಗಾರ, ಗುರ್ಜೀತ್ ಕೌರ್​ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರೆ, ​ ಪಿಆರ್​ ಶ್ರೀಜೇಶ್​​ ಮತ್ತು ಸವಿತಾ ಪೂನಿಯಾ ಅತ್ಯುತ್ತಮ ಗೋಲ್​ ಕೀಪರ್​ ಪ್ರಶಸ್ತಿ ಮತ್ತು ಶರ್ಮಿಳಾ ದೇವಿ(ಮಹಿಳೆಯರ ವಿಭಾಗ) ಹಾಗೂ ವಿವೇಕ್ ಸಾಗರ್​ ಪ್ರಸಾದ್​(ಪುರುಷ) ವಿಭಾಗದ ಅತ್ಯುತ್ತಮ ಉದಯೋನ್ಮುಖ ಪ್ರತಿಭೆ ಪ್ರಶಸ್ತಿಗಳನ್ನು ಪಡೆದರು.

ಪುರುಷ ತಂಡದ ಕೋಚ್​ ಗ್ರಹಂ ರೀಡ್​ ಮತ್ತು ಮಹಿಳಾ ತಂಡದ ಕೋಚ್​ ಕೋಚ್ ಶೋರ್ಡ್‌ ಮರೈನ್(Sjoerd Marijne) ಪುರುಷ ಮತ್ತು ಮಹಿಳಾ ತಂಡಗಳ ಅತ್ಯುತ್ತಮ ಕೋಚ್​ ಪ್ರಶಸ್ತಿ ಪಡೆದರು.

ಹಾಕಿ ಬೆಲ್ಜಿಯಂ ಅಸಮಾಧಾನ

ಎಫ್​ಐಹೆಚ್​ ವಾರ್ಷಿಕ ಪ್ರಶಸ್ತಿ ಘೋಷಿಸುತ್ತಿದ್ದಂತೆ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆದಿದ್ದ ಬೆಲ್ಜಿಯಂ ಅಸಮಾಧಾನ ವ್ಯಕ್ತಪಡಿಸಿದ್ದು, ಒಲಿಂಪಿಕ್ಸ್ ಚಾಂಪಿಯನ್​ ತಂಡ ಯಾವುದೇ ಒಂದೇ ಒಂದು ಪ್ರಶಸ್ತಿ ಪಡೆಯದಿದ್ದಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದೆ.

" ನಾವು ಸಂಪೂರ್ಣವಾಗಿ ಒಪ್ಪುತ್ತೇವೆ! ಆದರೆ ಇದು ಸರಿಯಾದದ್ದಲ್ಲ! ನಮ್ಮ ಕ್ರೀಡೆಯ ವಿಶ್ವಾಸಾರ್ಹತೆ ಮತ್ತು ಚಿತ್ರಣವು ಮತ್ತೊಮ್ಮೆ ಕಷ್ಟದ ಸಮಯವನ್ನು ಎದುರಿಸುತ್ತಿದೆ " ಎಂದು ಬೆಲ್ಜಿಯಂ ಹಾಕಿ ಮಂಡಳಿ ಟ್ವಿಟರ್​ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನು ಓದಿ:ಏಷ್ಯನ್​ ಗೇಮ್ಸ್​​ ಮೇಲೆ ಕಣ್ಣು.. ಕಾಮನ್​ವೆಲ್ತ್​​ ಕ್ರೀಡೆಯಿಂದ ಹಿಂದೆ ಸರಿದ ಭಾರತದ ಹಾಕಿ!

Last Updated : Oct 7, 2021, 3:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.