ETV Bharat / sports

ಪದೇ ಪದೇ ಕೆಣಕಿದ ಆಂಗ್ಲರಿಗೆ ಬ್ಯಾಟ್​ನಿಂದಲೇ ಉತ್ತರಿಸಿದ ಶಮಿ-ಬುಮ್ರಾ

author img

By

Published : Aug 16, 2021, 7:32 PM IST

Updated : Aug 16, 2021, 8:00 PM IST

ಭಾನುವಾರ ವಿರಾಟ್​ ಕೊಹ್ಲಿಯೊಂದಿಗೆ ವಾಕ್ಸಮರ ನಡೆಸಿದ್ದ ಆಂಗ್ಲರು ಇಂದು ಜಸ್ಪ್ರೀತ್​ ಬುಮ್ರಾ ಅವರೊಡನೆ ಪದೇ ಪದೇ ಸ್ಲೆಡ್ಜಿಂಗ್ ಮೂಲಕ ಏಕಾಗ್ರತೆ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಬುಮ್ರಾ ಮಾತಿನ ಮೂಲಕ ಉತ್ತರ ಕೊಟ್ಟರೆ ಶಮಿ ಸೈಲೆಂಟಾಗಿ ತಮ್ಮ ಬ್ಯಾಟಿಂಗ್​ ಮೂಲಕ ತಿರುಗೇಟು ನೀಡಿದ್ದಾರೆ.

India vs England 2nd test
ಬುಮ್ರಾ- ಮಾರ್ಕ್​ವುಡ್​ ಕಾಳಗ

ಲಂಡನ್​: ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಕ್ರಿಕೆಟಿಗರು ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಪದೇ ಪದೇ ಸ್ಲೆಡ್ಜಿಂಗ್ ಮಾಡಿದರೂ, ಅದನ್ನು ಲೆಕ್ಕಿಸದೇ ಬ್ಯಾಟ್​ ಮೂಲಕವೇ ಮೊಹಮ್ಮದ್​ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ತಕ್ಕ ಉತ್ತರ ನೀಡಿದ್ದಾರೆ.

ಭಾನುವಾರ ವಿರಾಟ್​ ಕೊಹ್ಲಿಯೊಂದಿಗೆ ವಾಕ್ಸಮರ ನಡೆಸಿದ್ದ ಆಂಗ್ಲರು ಇಂದು ಜಸ್ಪ್ರೀತ್​ ಬುಮ್ರಾ ಅವರೊಡನೆ ಪದೇ ಪದೇ ಸ್ಲೆಡ್ಜಿಂಗ್ ಮೂಲಕ ಏಕಾಗ್ರತೆ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಬುಮ್ರಾ ಮಾತಿನ ಮೂಲಕ ಉತ್ತರ ಕೊಟ್ಟರೆ, ಶಮಿ ಸೈಲೆಂಟಾಗಿ ತಮ್ಮ ಬ್ಯಾಟಿಂಗ್​ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.

ಬುಮ್ರಾ ಬ್ಯಾಟಿಂಗ್​ಗೆ ಬರುತ್ತಿದ್ದಂತೆಯೇ 91 ಓವರ್​​ನಲ್ಲಿ ಇಂಗ್ಲೆಂಡ್​ ವೇಗಿ ಮಾರ್ಕ್​ವುಡ್​ ಮೊದಲು ಕಾಲು ಕೆರೆದು ಜಗಳಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಬುಮ್ರಾ ಅಂಪೈರ್​ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಿಕೆಟ್ ಕೀಪರ್​ ಜೋಸ್ ಬಟ್ಲರ್ ಕೂಡ ಬುಮ್ರಾ ಜೊತೆ ವಾಗ್ವಾದ ನಡೆಸಿದರು.

ನಂತರದ ಎಸೆತವನ್ನು ಬುಮ್ರಾ ಬೌಂಡರಿ ಸಿಡಿಸಿ ತಕ್ಕ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಭಾರತೀಯ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಕೊಹ್ಲಿ ಎಂದಿನಂತೆ ಆಕ್ರಮಣಕಾರಿ ರೀತಿ ಕುಣಿದು-ಕುಪ್ಪಳಿಸಿ ಇಬ್ಬರು ಬ್ಯಾಟ್ಸ್​ಮನ್​ಗಳನ್ನು ಹುರಿದುಂಬಿಸುತ್ತಿದ್ದರು.

ಆದರೆ ಇದು ಇಷ್ಟಕ್ಕೆ ನಿಲ್ಲಲಿಲ್ಲ, 93ನೇ ಓವರ್​ನಲ್ಲಿ ಮತ್ತೆ ಬುಮ್ರಾಗೆ ಬೌನ್ಸರ್ ಎಸೆದರು, ಚೆಂಡು ಬುಮ್ರಾ ಹೆಲ್ಮೆಟ್​ಗೆ ಬಡಿಯಿತು. ತಕ್ಷಣ ಪಿಸಿಯೋ ಮೈದಾನಕ್ಕೆ ಆಗಮಿಸಿ ಪರಿಶೀಲಿಸಿದರು. ವುಡ್​ ನಂತರ ಜೇಮ್ಸ್​ ಅ್ಯಂಡರ್ಸನ್​ ಕೂಡ ಸ್ಲೆಡ್ಜಿಂಗ್​ಗೆ ಯತ್ನಿಸಿದರಾದರೂ ಅದಕ್ಕೆ ಭಾರತೀಯ ಜೋಡಿ ತಕ್ಕ ಉತ್ತರವನ್ನೇ ನೀಡಿದರು.

ಕೊನೆಗೆ ಈ ಜೋಡಿ 9ನೇ ವಿಕೆಟ್​ ಜೊತೆಯಾಟದಲ್ಲಿ 88 ರನ್​ ಸೇರಿಸಿದರು. ಭಾರತ 298ಕ್ಕೆ8 ವಿಕೆಟ್ ಕಳೆದುಕೊಂಡಿದ್ದ ವೇಳೆ ಡಿಕ್ಲೇರ್​ ಘೋಷಿಸಿಕೊಂಡು ಆಂಗ್ಲರಿಗೆ 272 ರನ್​ಗಳ ಗುರಿ ನೀಡಿದರು.

ಇದನ್ನು ಓದಿ:ಬುಮ್ರಾ-ಶಮಿ ಭರ್ಜರಿ ಬ್ಯಾಟಿಂಗ್ .. ಆಂಗ್ಲರಿಗೆ 260ರನ್​ಗಳ ಗುರಿ ನೀಡಿದ ಭಾರತ

Last Updated : Aug 16, 2021, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.