ETV Bharat / sports

ಬುಮ್ರಾ-ಶಮಿ ಭರ್ಜರಿ ಬ್ಯಾಟಿಂಗ್ .. ಆಂಗ್ಲರಿಗೆ 272ರನ್​ಗಳ ಗುರಿ ನೀಡಿದ ಭಾರತ

author img

By

Published : Aug 16, 2021, 5:59 PM IST

Updated : Aug 16, 2021, 7:59 PM IST

ಶಮಿ 70 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 56ರನ್​ಗಳಿಸಿದರೆ, ಬುಮ್ರಾ 58 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 34 ರನ್​ಗಳಿಸಿ ಕ್ರೀಸ್​​​ನಲ್ಲಿದ್ದಾರೆ.

India tour of England 2021
ಮೊಹಮ್ಮದ್ ಶಮಿ ಅರ್ಧಶತಕ

ಲಂಡನ್​: ಎರಡನೇ ಟೆಸ್ಟ್​ನ ಕೊನೆಯ ದಿನ ಮೊಹಮ್ಮದ್ ಶಮಿ ಅರ್ಧಶತಕ ಸಿಡಿಸುವ ಮೂಲಕ ಸೋಲುವ ಭೀತಿಯಲ್ಲಿದ್ದ ಭಾರತ ತಂಡಕ್ಕೆ ಚೇತರಿಕೆ ತಂದುಕೊಟ್ಟಿದ್ದಲ್ಲದೇ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದಾರೆ.

ನಾಲ್ಕನೇ ದಿನ 6 ವಿಕೆಟ್​ ಕಳೆದುಕೊಂಡು 181ರನ್​ಗಳಿಸಿದ್ದ ಭಾರತ ತಂಡ ಇಂದು 298 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿತು. ಶಮಿ 56 ಮತ್ತು ಬುಮ್ರಾ 34 ರನ್​ಗಳಿಸಿ 272ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಲು ಕಾರಣರಾದರು.

ಇನ್ನು 5ನೇ ಬ್ಯಾಟಿಂಗ್ ಆರಂಭಿಸಿದ ಭಾರತ ಕೇವಲ 13 ರನ್​ಗಳಿಸುವಷ್ಟರಲ್ಲಿ ಆಪತ್ಪಾಂಧವನಾಗಿದ್ದ ರಿಷಭ್ ಪಂತ್(22) ವಿಕೆಟ್ ಕಳೆದುಕೊಂಡಿತು. ಅವರು ರಾಬಿನ್ಸನ್​ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಸ್ ಬಟ್ಲರ್​ಗೆ ಕ್ಯಾಚ್​ ನೀಡಿ ಔಟಾಗುವ ಮೂಲಕ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ನಿನ್ನೆ 4 ರನ್​ಗಳಿಸಿ ಔಟಾಗದೇ ಉಳಿದಿದ್ದ ಇಶಾಂತ್ ಶರ್ಮಾ 16 ರನ್​ಗಳಿಸಿ ರಾಬಿನ್ಸನ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಆದರೆ, 9ನೇ ವಿಕೆಟ್​ಗೆ ಒಂದಾದ ಬುಮ್ರಾ(34) ಮತ್ತು ಶಮಿ(56) ಪಂದ್ಯದ ಗತಿಯನ್ನೇ ಬದಲಾಯಿಸಿದರು. ಈ ಜೋಡಿ 9ನೇ ವಿಕೆಟ್​ ಜೊತೆಯಾಟದಲ್ಲಿ 77 ರನ್​ಗಳ ಜೊತೆಯಾಟ ನೀಡಿ ಮುನ್ನಡೆಯನ್ನು 259ಕ್ಕೆ ಕೊಂಡೊಯ್ದಿತು. ಶಮಿ 70 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 52 ರನ್​ಗಳಿಸಿದರೆ, ಬುಮ್ರಾ 58 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 30 ರನ್​ಗಳಿಸಿದರು.

ನಾಲ್ಕನೇ ದಿನ 27 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 55 ರನ್​ಗಳಾಗುವಷ್ಟರಲ್ಲಿ ರೋಹಿತ್ (21), ಕೆ.ಎಲ್ ರಾಹುಲ್ ​(5) ಮತ್ತು ನಾಯಕ ವಿರಾಟ್​ ಕೊಹ್ಲಿ (20) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ 49.3 ಓವರ್​ಗಳ ಬ್ಯಾಟಿಂಗ್ ಮಾಡಿದ್ದ ಚೇತೇಶ್ವರ ಪೂಜಾರಾ (45) ಹಾಗೂ ಉಪನಾಯಕ ರಹಾನೆ (61) ರನ್​ಗಳ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಸ್ವಲ್ಪ ನೆರವಾಗಿದ್ದರು.

ಇದನ್ನು ಓದಿ:ನೀವು ನನ್ನ ಕೊಂದರೂ ಸರಿ, ಇಂಗ್ಲೆಂಡ್ ಗೆಲ್ಲಲಿದೆ: ಆಕಾಶ್ ಚೋಪ್ರಾ ಭವಿಷ್ಯ

Last Updated : Aug 16, 2021, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.