ETV Bharat / sports

Yuzvendra Chahal: ವಿಶ್ವಕಪ್​ ತಂಡದಿಂದ ಚಹಾಲ್​ ಕೈಬಿಡಲು ಕಾರಣ ಏನು? ಇಲ್ಲಿದೆ ಉತ್ತರ..

author img

By ETV Bharat Karnataka Team

Published : Sep 6, 2023, 6:12 PM IST

Yuzvendra Chahal
Yuzvendra Chahal

Why Yuzvendra Singh Chahal Missing From World Cup Team :ಭಾರತ ತಂಡದಲ್ಲಿ ಈ ಹಿಂದೆ ಸ್ಟಾರ್​ ಸ್ಪಿನ್ನರ್​ ಆಗಿದ್ದ ಯಜುವೇಂದ್ರ ಚಹಾಲ್​ಗೆ ಈ ವರ್ಷದ ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಅವರು ತೆರೆಮರೆಗೆ ಸರಿಯಲು ಕಾರಣ ಏನು ಎಂಬುದಕ್ಕೆ ಇಲ್ಲಿದೆ ಕಾರಣ..

ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಲೆಗ್ ಬ್ರೇಕ್ ಮತ್ತು ಗೂಗ್ಲಿ ಸ್ಪೆಷಲಿಸ್ಟ್ ಯಜುವೇಂದ್ರ ಚಹಾಲ್ ಅವರನ್ನು ವಿಶ್ವಕಪ್​ಗೆ ಏಕೆ ಆಯ್ಕೆ ಮಾಡಿಲ್ಲ ಎಂಬುದರ ಬಗ್ಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ, ತಂಡದಲ್ಲಿ ಇತ್ತೀಚಿನ ಸಂಯೋಜನೆಯನ್ನು ನೋಡಿದರೆ ಹೆಚ್ಚು ಆಲ್​ರೌಂಡರ್​​ಗಳಿಗೆ ಮಣೆ ಹಾಕಲಾಗುತ್ತಿರುವ ಕಾರಣ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ನ ಬ್ಯಾಟಿಂಗ್​ ಕಾಂಬಿನೇಷನ್​ನಲ್ಲಿ 8 ಮತ್ತು 9ನೇ ವಿಕೆಟ್​ವರೆಗೂ ಬ್ಯಾಟಿಂಗ್​ ಸಾಮರ್ಥ್ಯ ಇರುವುದನ್ನು ಕಾಣುತ್ತೇವೆ. ಇತ್ತೀಚೆಗೆ ಹೆಚ್ಚಿನ ತಂಡಗಳು ಡೆತ್​ ಓವರ್​ಗಳಲ್ಲಿ ಟೇಲ್​ ಎಂಡ್​ ಬ್ಯಾಟರ್​ಗಳು ಕನಿಷ್ಠ 20 ರನ್​ ಗಳಿಸ ಬೇಕು ಎಂದು ಆಪೇಕ್ಷಿಸಲಾಗುತ್ತಿದೆ. ಹೀಗಾಗಿ ಅಕ್ಷರ್​ ಪಟೇಲ್​ ಮತ್ತು ಜಡೇಜಾ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ ಸ್ಪಿನ್ ವಿಭಾಗದಲ್ಲಿ ಕುಲದೀಪ್​ ಯಾದವ್​ ಸ್ಥಾನ ಪಡೆದಿದ್ದಾರೆ. ವೇಗದ ವಿಭಾಗದಲ್ಲಿ ಹಾರ್ದಿಕ್​ ಪಾಂಡ್ಯ ಮತ್ತು ಶಾರ್ದೂಲ್​ ಠಾಕೂರ್​ ಅವರನ್ನು ಆಲ್​ರೌಂಡರ್​ಗಳಾಗಿ ಆಯ್ಕೆ ಮಾಡಲಾಗಿದೆ.

Yuzvendra Chahal
2016 ರಿಂದ ಈ ವರೆಗೆ ಚಹಾಲ್​ ಏಕದಿನ ಬೌಲಿಂಗ್​ ರೆಕಾರ್ಡ್​

ಯುಜ್ವೇಂದ್ರ ಚಹಾಲ್ ಅವರ ಏಕದಿನ ವೃತ್ತಿಜೀವನದ ಅಂಕಿ - ಅಂಶಗಳನ್ನು ಗಮನಿಸಿದರೆ 2017 ರಿಂದ 2019ರ ವರೆಗೆ ಪೀಕ್ ಟೈಮ್​ ಎಂದು ಪರಿಗಣಿಸಬಹುದಾಗಿದೆ. 2020 ಮತ್ತು 21 ರಲ್ಲಿ ಕೊವಿಡ್​ ಕಾರಣಕ್ಕೆ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಆಟಗಾರರಿಗೆ ದೊರೆತಿಲ್ಲ. ಇದಾದ ನಂತರ ಚಹಾಲ್​ ತಂಡದ ಆಯ್ಕೆಯ ವಿಚಾರದಲ್ಲಿ ತೆರೆಮರೆಗೆ ಹೋದರು. ಈ ವೇಳೆ, ಅಕ್ಷರ್​ ಪಟೇಲ್​ ಆಲ್​ರೌಂಡರ್​​ ಮತ್ತು ಸ್ಪಿನ್ನರ್​ ಆಗಿ ತಂಡದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಂಡರು. ಆದರೆ 2022 ರಲ್ಲಿ ಚಹಾಲ್​ಗೆ ಹೆಚ್ಚಿನ ಅವಕಾಶ ಸಿಕ್ಕಿ ಉತ್ತಮ ಪ್ರರ್ದನ ನೀಡಿದರು.

ಆದರೆ 2023 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಚಹಾಲ್​ ಅವರನ್ನು ಏಷ್ಯಾ ಕಪ್ ಮತ್ತು ವಿಶ್ವಕಪ್ ತಂಡಗಳಿಂದ ಕೈಬಿಡಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. 2023 ರಲ್ಲಿ ಅವರು ಕೇವಲ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಶ್ರೀಲಂಕಾ ವಿರುದ್ಧ ಗುವಾಹಟಿಯಲ್ಲಿ ಒಂದು ಪಂದ್ಯ ಮತ್ತು ಇಂದೋರ್‌ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಆಡಿದ್ದು ಅವರ ಕೊನೆಯ ಪಂದ್ಯವಾಗಿದೆ.

ಯುಜುವೇಂದ್ರ ಚಾಹಲ್ ಅವರ ವೃತ್ತಿಜೀವನ: 2016ರಲ್ಲಿ ಭಾರತದ ಏಕದಿನ ತಂಡದಲ್ಲಿ ಮೊದಲ ಬಾರಿಗೆ ಚಹಾಲ್​ ಕಾಣಿಸಿಕೊಂಡರು. ಆ ವರ್ಷ ಅವರು 3 ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 6 ವಿಕೆಟ್‌ಗಳನ್ನು ಪಡೆದರು. ಇದರ ನಂತರ, 2017 ರಲ್ಲಿ ಅವರು 14 ಪಂದ್ಯಗಳಲ್ಲಿ 21 ವಿಕೆಟ್​ ಪಡೆದರೆ, 2018 ರಲ್ಲಿ ಅವರು 17 ಪಂದ್ಯಗಳಲ್ಲಿ 29 ವಿಕೆಟ್​ ಕಬಳಿಸಿದ್ದಾರೆ. 2019 ರಲ್ಲಿ 16 ಪಂದ್ಯಗಳಿಂದ 29 ವಿಕೆಟ್​, 2020 ರಲ್ಲಿ ಕೇವಲ 4 ಏಕದಿನ ಆಡಿದ್ದು, ಇದರಲ್ಲಿ ಚಹಾಲ್ 7 ವಿಕೆಟ್​ ಪಡೆದಿದ್ದಾರೆ. 2021 ರಲ್ಲಿ 2 ಪಂದ್ಯದಿಂದ ಐದು ವಿಕೆಟ್​, 2022 ರಲ್ಲಿ 14 ಮ್ಯಾಚ್​​ನಿಂದ 12 ಇನ್ನಿಂಗ್ಸ್‌ಗಳಲ್ಲಿ 21 ವಿಕೆಟ್‌, 2023ರ ಎರಡು ಪಂದ್ಯದಿಂದ 3 ವಿಕೆಟ್​ ಉರುಳಿಸಿದ್ದಾರೆ.

ವಿರಾಟ್​ ನಾಯಕತ್ವದಲ್ಲಿ ಚಹಾಲ್​ ಹೆಚ್ಚು ಅವಕಾಶ: ಚಹಾಲ್​ ಐಪಿಎಲ್​ನಲ್ಲಿ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ವಿರಾಟ್​ ಟೀಮ್​ ಇಂಡಿಯಾಕ್ಕೆ ಅವಕಾಶ ಮಾಡಿಸಿಕೊಟ್ಟಿದ್ದರು. ಹೀಗಾಗಿ ವಿರಾಟ್​ ನಾಯತಕ್ವದಲ್ಲಿ ಚಹಾಲ್​ ಹೆಚ್ಚು ಅವಕಾಶಗಳು ದೊರೆಯುತ್ತಿದ್ದವು. ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಚಹಾಲ್​ 2017 ಮತ್ತು 2020ರ ನಡುವೆ 41 ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 2017 ಮತ್ತು 2023 ರ ನಡುವೆ ಕೇವಲ 17 ಪಂದ್ಯಗಳನ್ನು ಆಡಿದ್ದು, 30 ವಿಕೆಟ್​ ತೆಗೆದಿದ್ದಾರೆ. ಇದಲ್ಲದೇ ಧೋನಿ ನಾಯಕತ್ವದಲ್ಲಿ 3 ಪಂದ್ಯ, ಧವನ್ ನಾಯಕತ್ವದಲ್ಲಿ 8 ಹಾಗೂ ಕೆಎಲ್ ರಾಹುಲ್ ನಾಯಕತ್ವದಲ್ಲಿ 3 ಪಂದ್ಯಗಳನ್ನು ಆಡಿದ್ದಾರೆ. ವಿರಾಟ್​ ನಾಯಕತ್ವದಲ್ಲಿ ಚಹಾಲ್​ ಹೆಚ್ಚು ಅವಕಾಶಗಳನ್ನು ಮಾಡಿಕೊಡಲಾಗುತ್ತಿತ್ತು. ಆದರೆ, ರೋಹಿತ್​ ಕ್ಯಾಪ್ಟಂನ್ಸಿಯಲ್ಲಿ ಚಹಾಲ್​ ತೆರೆಮರೆಗೆ ಸರಿದಿದ್ದಾರೆ.

ಇದನ್ನೂ ಓದಿ: ICC ODI Rankings: ಏಷ್ಯಾಕಪ್​ನಲ್ಲಿ ಭರ್ಜರಿ ಬ್ಯಾಟಿಂಗ್​... ಶ್ರೇಯಾಂಕದಲ್ಲಿ ಏರಿಕೆ ಕಂಡ ಭಾರತದ ಯುವ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.