ಪ್ರೊ ಕಬಡ್ಡಿ ಲೀಗ್​​​ 9ನೇ ಆವೃತ್ತಿ.. ಹರಾಜು ಪ್ರಕ್ರಿಯೆಗೆ ದಿನಾಂಕ ಪ್ರಕಟ

author img

By

Published : Jul 22, 2022, 4:16 PM IST

Vivo Pro Kabaddi League

ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್​​ಗೋಸ್ಕರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕೋಸ್ಕರ ದಿನಾಂಕ ಪ್ರಕಟಗೊಂಡಿದೆ.

ಮುಂಬೈ: ಪ್ರೊ ಕಬಡ್ಡಿ ಲೀಗ್​​ನ 9ನೇ ಆವೃತ್ತಿಗೋಸ್ಕರ ಹರಾಜು ಪ್ರಕ್ರಿಯೆ ನಡೆಯಲಿದ್ದು, ದಿನಾಂಕ ಪ್ರಕಟಗೊಂಡಿದೆ. ಆಗಸ್ಟ್​​ 5 ಮತ್ತು 6ರಂದು ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಪಿಕೆಎಲ್​​ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಮುಂಬೈನಲ್ಲಿ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜು ಪ್ರಕ್ರಿಯೆಯಲ್ಲಿ 500ಕ್ಕೂ ಅಧಿಕ ಪ್ಲೇಯರ್ಸ್​ ಭಾಗಿಯಾಗುವ ಸಾಧ್ಯತೆ ಇದ್ದು, ಪ್ರತಿ ತಂಡ 24 ಆಟಗಾರರ ಖರೀದಿ ಮಾಡುವ ಅವಕಾಶವಿದೆ. ಹರಾಜು ಪ್ರಕ್ರಿಯೆಯಲ್ಲಿ ದೇಶೀಯ, ಸಾಗರೋತ್ತರ ಮತ್ತು ಹೊಸ ಯುವ ಆಟಗಾರರು ಎಂಬ ನಾಲ್ಕು ವಿಭಾಗ ಮಾಡಲಾಗಿದೆ.

ಆಲ್​ರೌಂಡರ್​​, ಡಿಫೆಂಡರ್​, ರೈಡರ್​​ ಎಂದು ವಿಂಗಡನೆ ಮಾಡಲಾಗಿದೆ. A,B,C,D ಎಂಬ ವಿಭಾಗ ಮಾಡಲಾಗಿದೆ. A ವಿಭಾಗಕ್ಕೆ 30 ಲಕ್ಷ ರೂ. B ವಿಭಾಗದಲ್ಲಿ 20 ಲಕ್ಷ ರೂ. C ವಿಭಾಗದಲ್ಲಿ 10 ಲಕ್ಷ ರೂ ಹಾಗೂ D ಕೆಟಗರಿಯಲ್ಲಿ 6 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಪ್ರತಿ ಫ್ರಾಂಚೈಸಿಗಳು ಒಟ್ಟು 4.4 ಕೋಟಿ ಹಣ ಹೊಂದಿವೆ.

ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ನ ಯುವ ಪ್ರತಿಭೆ ಭಾಗಿಯಾಗಲಿದ್ದು, ತಮ್ಮ ಪ್ರದರ್ಶನ ಹೊರಹಾಕಲು ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ. ಪಿಕೆಎಲ್​ ಲೀಗ್ ನೀತಿ ಪ್ರಕಾರ ಪ್ರತಿ ಫ್ರಾಂಚೈಸಿ 8 ಆಟಗಾರರನ್ನ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿರಿ: ಪ್ರೊ ಕಬಡ್ಡಿ ಫೈನಲ್​: ರೋಚಕ ಹಣಾಹಣಿಯಲ್ಲಿ ಪಾಟ್ನಾ ವಿರುದ್ಧ ಗೆದ್ದು ಚಾಂಪಿಯನ್​​ ಆದ ಡೆಲ್ಲಿ ದಬಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.