ETV Bharat / sports

ಚೆಪಾಕ್ ಕ್ರಿಡಾಂಗಣದಲ್ಲಿ ಕೊಹ್ಲಿ ದಾಖಲೆ: ಮೂರನೇ ಪಂದ್ಯಕ್ಕೆ "ವಿರಾಟ" ಭರವಸೆ

author img

By

Published : Mar 20, 2023, 7:23 PM IST

ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಮೂರನೇ ಏಕದಿನ - ಚೆಪಾಕ್​ ಸ್ಟೇಡಿಯಂನಲ್ಲಿ ವಿರಾಟ್​ ಅದ್ಭುತ ದಾಖಲೆ - ಸೂರ್ಯ ಕುಮಾರ್​ ಯಾದವ್​ಗೆ ಸಿಗುತ್ತಾ ಕೋಕ್​​

Virat Kohli record at Chepauk Stadium
ಚೆಪಾಕ್ ಕ್ರಿಡಾಂಗಣದಲ್ಲಿ ಕೊಹ್ಲಿ ದಾಖಲೆ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಬುಧವಾರ ಮಾರ್ಚ್ 22 ರಂದು ನಡೆಯಲಿದೆ. ವಿಸಾಪಟ್ಟಣಂನಲ್ಲಿ ಭಾರತದ ಹೀನಾಯ ಸೋಲಿನ ನಂತರ ಸರಣಿ 1-1ರಲ್ಲಿ ಸಮಬಲವಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಸರಣಿ ನಿರ್ಣಾಯಕವಾಗಲಿದೆ.

ಫೈನಲ್​ನಲ್ಲಿ ಭರ್ಜರಿ ಫೈಟ್​ ನಿರೀಕ್ಷೆ ಇದೆ. ಎರಡೂ ತಂಡಕ್ಕೆ ಸರಣಿ ಮುಖ್ಯವಾಗಿದೆ. ಹೀಗಾಗಿ ಟಾಸ್​ ಮತ್ತು ಪಿಚ್ ಪಂದ್ಯದ ಫಲಿತಾಂಶಕ್ಕೆ ಹೆಚ್ಚು ಪರಿಣಾಕಾರಿಯಾಗಿರಲಿದೆ. ಕೊನೆಯ ಟೆಸ್ಟ್​ ಪಂದ್ಯದಲ್ಲಿ ಶತಕ ಗಳಿಸಿರುವ ವಿರಾಟ್​ ಕೊಹ್ಲಿ ಬ್ಯಾಟ್​ನಿಂದ ಹೆಚ್ಚು ರನ್​ನ ನಿರೀಕ್ಷೆ ಇದೆ. ಇದಕ್ಕೆ ಕಾರಣ ವಿರಾಟ್​ ಆಸ್ಟ್ರೇಲಿಯಾ ಮೇಲೆ ಹಾಗೂ ಚೆಪಾಕ್​ನಲ್ಲಿ ಹೊಂದಿರುವ ದಾಖಲೆಗಳು.

ಗೆಲುವು ವಿರಾಟ್ ಕೊಹ್ಲಿ ಮೇಲೆ ಅವಲಂಬಿತ: ಮೂರನೇ ಟೆಸ್ಟ್​ ಡ್ರಾ ಆಗುವಲ್ಲಿ ವಿರಾಟ್​ ಬ್ಯಾಟಿಂಗ್​ ಪ್ರಮುಖವಾಗಿತ್ತು. ಎರಡನೇ ಪಂದ್ಯದಲ್ಲೂ ವಿರಾಟ್​ 31 ರನ್ನೇ ಅತಿ ಹೆಚ್ಚಿನ ಮೊತ್ತವಾಗಿತ್ತು. ವಿರಾಟ್​ ಫಾರ್ಮ್​ನಲ್ಲಿದ್ದು, ದೊಡ್ಡ ಮೊತ್ತ ಅವರ ಬ್ಯಾಟ್​ನಿಂದ ಬರಬೇಕಿದೆ. ಚೆನ್ನೈನ ಚೆಪಾಕ್​ ಅವರ ನೆಚ್ಚಿನ ಕ್ರಿಡಾಂಗಣಗಳಲ್ಲಿ ಒಂದು ಹೀಗಾಗಿ ಇಲ್ಲಿ ಅವರ ಬ್ಯಾಟ್​ ಘರ್ಜಿಸುವ ಸಾಧ್ಯತೆ ಹೆಚ್ಚಿದೆ.

ಚೆನ್ನೈನಲ್ಲಿ ನಡೆದ 7 ಏಕದಿನ ಪಂದ್ಯಗಳಲ್ಲಿ ವಿರಾಟ್ 283 ರನ್ ಗಳಿಸಿದ್ದಾರೆ. ಇದರಲ್ಲಿ ಅದ್ಭುತ ಶತಕವೂ ಸೇರಿದೆ. ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಏಕದಿನ ಪಂದ್ಯದಲ್ಲಿ ವಿರಾಟ್‌ನಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದೊಡ್ಡ ಸ್ಕೋರ್ ನಿರೀಕ್ಷಿಸುತ್ತಿದ್ದಾರೆ. ಇಲ್ಲಿಯವರೆಗಿನ ಅಂಕಿ ಅಂಶಗಳ ಪ್ರಕಾರ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಬೀಸಿದರೆ ಆಸ್ಟ್ರೇಲಿಯಾ ಸೋಲು ಖಚಿತ ಎನ್ನಲಾಗುತ್ತಿದೆ.

ಕೊನೆಯ ಪಂದ್ಯದಲ್ಲಿ ಭಾರತ ಗೆದ್ದಿತ್ತು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಏಕದಿನ ಪಂದ್ಯ 2017 ರಲ್ಲಿ ಚೆನ್ನೈನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ 26 ರನ್‌ಗಳಿಂದ ಜಯ ಸಾಧಿಸಿತ್ತು. ಭಾರತ ನೀಡಿದ 282 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತ್ತು.

ಈ ಪಂದ್ಯದಲ್ಲಿ 83 ರನ್ ಗಳಿಸುವುದರೊಂದಿಗೆ 2 ವಿಕೆಟ್ ಪಡೆದ ಭಾರತದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೈದಾನದಲ್ಲಿ ಭಾರತದ ಗರಿಷ್ಠ ಸ್ಕೋರ್ 299 ರನ್. ಭಾರತ ವಿರುದ್ಧ ಆಡಿದ ಕೊನೆಯ 10 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 5 ಬಾರಿ ಗೆದ್ದಿದ್ದರೆ, ಟೀಂ ಇಂಡಿಯಾ 5 ಬಾರಿ ಗೆದ್ದಿದೆ.

ತಂಡದಲ್ಲಿ ಬದಲಾವಣೆ ಸಾದ್ಯತೆ: ಎರಡು ಪಂದ್ಯದಲ್ಲಿ ಹೊಡಿಬಡಿ ದಾಂಡಿಗ ಸೂರ್ಯ ಕುಮಾರ್ ಯಾದವ್​ ಶೂನ್ಯ ಸುತ್ತಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಇಶನ್​ ಕಿಶನ್​ ಆಡುವ ಅವಕಾಶ ಇದೆ. ಕ್ರಿಕೆಟ್​ ಅಭಿಮಾನಿಗಳು ಸಂಜು ಸ್ಯಾಮ್ಸನ್​ಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಬೆನ್ನು ನೋವಿನ ಕಾರಣ ಅಯ್ಯರ್​ ಹೊರಗುಳಿದಿರುವುದರಿಂದ ಮಧ್ಯಮ ​ಕ್ರಮಾಂಕದಲ್ಲಿ ಬದಲಿ ಆಟಗಾರನ್ನು ಬಿಸಿಸಿಐ ಘೋಷಿಸಿಲ್ಲ. ಸ್ಯಾಮ್ಸನ್​ಗೆ ಈ ಅವಕಾಶ ಕೊಡಬಹುದಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಐಪಿಎಲ್​ ಮಾದರಿಯ ಲೀಗ್​: ಭಾರತೀಯ ಪ್ರಾಂಚೈಸಿಗಳದ್ದೇ ಕಾರುಬಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.