ETV Bharat / sports

ನಾಳೆ ಆಂಗ್ಲರ ವಿರುದ್ಧ ಅಂಡರ್‌ 19 ವಿಶ್ವಕಪ್‌ ಫೈನಲ್‌: ಟೀಂ ಇಂಡಿಯಾ ಯುವ ಆಟಗಾರರನ್ನ ಹುರಿದುಂಬಿಸಿದ ವಿರಾಟ್‌

author img

By

Published : Feb 4, 2022, 10:46 AM IST

ಅಂಡರ್‌ 19 ವಿಶ್ವಕಪ್‌ ಸಮರದಲ್ಲಿ ಫೈನಲ್‌ ಪ್ರವೇಶಿರುವ ಟೀಂ ಇಂಡಿಯಾದ ಯುವ ಆಟಗಾರರಿಗೆ ಕರೆ ಮಾಡಿರುವ ಕ್ರಿಕೆಟ್‌ ಐಕಾನ್ ವಿರಾಟ್‌ ಕೊಹ್ಲಿ ಪಂದ್ಯದ ಬಗ್ಗೆ ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ. ಇದಕ್ಕೆ ಭಾರತ ತಂಡದ ನಾಯಕ ಯಶ್‌ ದುಳ್‌ ಸೇರಿ ಆಟಗಾರರು ಫುಲ್‌ ಖುಷಿಯಾಗಿದ್ದಾರೆ.

virat kohli interacts with indian team ahead of u19 world cup final
ನಾಳೆ ಆಂಗ್ಲರ ವಿರುದ್ಧ ಅಂಡರ್‌ 19 ವಿಶ್ವಕಪ್‌ ಫೈನಲ್‌; ಟೀಂ ಇಂಡಿಯಾ ಯುವ ಆಟಗಾರರನ್ನ ಹುರಿದುಂಬಿಸಿ ವಿರಾಟ್‌

ನವದೆಹಲಿ: 19 ವರ್ಷದೊಳಗಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 96ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದು, ನಾಳೆ ಇಂಗ್ಲೆಂಡ್‌ ವಿರುದ್ಧ ಚಾಂಪಿಯನ್‌ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ.

ಆಸೀಸ್‌ ವಿರುದ್ಧ ಸೆಮಿಫೈನಲ್‌ ಗೆದ್ದ ಖುಷಿಯಲ್ಲಿದ್ದ ಭಾರತ ತಂಡದ ಆಟಗಾರರಿಗೆ ಕರೆ ಮಾಡಿರುವ ಹಿರಿಯರ ತಂಡದ ಆಟಗಾರ, ಕ್ರಿಕೆಟ್‌ ಐಕಾನ್‌ ವಿರಾಟ್‌ ಕೊಹ್ಲಿ ಕೆಲವು ಟಿಪ್ಸ್‌ಗಳನ್ನು ನೀಡಿ ಫೈನಲ್‌ಗೆ ಯುವ ಪ್ರತಿಭೆಗಳನ್ನು ಹುರಿದುಂಬಿಸಿದ್ದಾರೆ.

virat kohli interacts with indian team ahead of u19 world cup final
ನಾಳೆ ಆಂಗ್ಲರ ವಿರುದ್ಧ ಅಂಡರ್‌ 19 ವಿಶ್ವಕಪ್‌ ಫೈನಲ್‌; ಟೀಂ ಇಂಡಿಯಾ ಯುವ ಆಟಗಾರರನ್ನ ಹುರಿದುಂಬಿಸಿ ವಿರಾಟ್‌

ಜೂಮ್ ಕಾಲ್ ಮೂಲಕ ಮಾತನಾಡಿರುವ ವಿರಾಟ್, ಫೈನಲ್ ಪಂದ್ಯದಲ್ಲಿ ಹೇಗೆ ಆಡಬೇಕು ಎಂಬುದರ ಕುರಿತು ಯುವ ಆಟಗಾರರೊಂದಿಗೆ ಚರ್ಚಿಸಿ ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ. ವಿರಾಟ್ ಭಾಯ್ ಜೊತೆ ಮಾತನಾಡಿದ್ದು, ತುಂಬಾ ಸಂತೋಷವಾಯಿತು. ಅವರು ಕ್ರಿಕೆಟ್ ಬಗ್ಗೆ ಮಾತ್ರವಲ್ಲದೇ ಜೀವನದ ಬಗ್ಗೆ ಹೇಳಿದ ಪ್ರಮುಖ ವಿಷಯಗಳು ತುಂಬಾ ಸಹಾಯಕವಾಗಿವೆ ಎಂದು ನಾಯಕ ಯಶ್ ಧುಳ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಯಶ್ ಧುಳ್‌, ರಾಜವರ್ಧನ್, ಕೌಶಲ್ ತಾಂಬೆ ಹಾಗೂ ಇತರ ಆಟಗಾರರು ಕ್ರಿಕೆಟ್ ಐಕಾನ್‌ ವಿರಾಟ್‌ರಿಂದ ಟಿಪ್ಸ್‌ ಪಡೆಯುವ ಅವಕಾಶವನ್ನು ಪಡೆದರು. ಸ್ಪಿನ್ನರ್ ಕೌಶಲ್ ತಾಂಬೆ, ವಿಶ್ವಕಪ್ ಫೈನಲ್‌ಗೂ ಮುನ್ನ ದಿಗ್ಗಜ ಆಟಗಾರ ಅಮೂಲ್ಯ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.

2008ರಲ್ಲಿ ಕೌಲಾಲಂಪುರದಲ್ಲಿ ನಡೆದ ಅಂಡರ್‌-19 ವಿಶ್ವಕಪ್‌ ಫೈನಲ್‌ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಚಾಪಿಯನ್‌ ಆಗಿತ್ತು. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಯಶ್ ಧುಳ್‌ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್‌ನಲ್ಲಿ ಯಶ್‌ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿರಾಟ್‌ ಕೊಹ್ಲಿ (2008), ಉನ್ಮುಕ್ತ್ ಚಂದ್ (2012) ಶತಕದ ಸಾಧನೆ ಮಾಡಿದ್ದರು.

ಇದನ್ನೂ ಓದಿ: ರಣಜಿ ಟ್ರೋಫಿಗೆ ಮುಹೂರ್ತ ಫಿಕ್ಸ್​: ಫೆಬ್ರವರಿ 10ರಿಂದ ಮೊದಲ ಹಂತ ಆರಂಭ, ಐಪಿಎಲ್ ನಂತರ ನೌಕೌಟ್​

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.