ETV Bharat / sports

ವಿಶ್ವಕಪ್​ ಕ್ರಿಕೆಟ್​: 9 ವರ್ಷದ ನಂತರ ವಿರಾಟ್​ಗೆ ವಿಕೆಟ್​; ಅನುಷ್ಕಾ ಸಂಭ್ರಮದ ಕ್ಷಣ ಹೇಗಿತ್ತು ನೋಡಿ

author img

By ETV Bharat Karnataka Team

Published : Nov 12, 2023, 9:41 PM IST

Updated : Nov 13, 2023, 6:39 AM IST

ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಬೌಲಿಂಗ್​ ಮಾಡಿದ್ದಲ್ಲದೇ ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆದರು.

Virat Kohli
Virat Kohli

ಬೆಂಗಳೂರು: ವಿಶ್ವಕಪ್​ನ ಕೊನೆಯ ಲೀಗ್ ಪಂದ್ಯದಲ್ಲಿ ವಿರಾಟ್​ ಅಭಿಮಾನಿಗಳ ಆಸೆಯನ್ನು ನಾಯಕ ರೋಹಿತ್​ ಶರ್ಮಾ ಈಡೇರಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಹಾರ್ದಿಕ್​ ಪಾಂಡ್ಯ ಗಾಯಗೊಂಡಾಗ ಅವರ ಓವರ್​​ನ್ನು ವಿರಾಟ್​ ಕೊಹ್ಲಿ ಪೂರ್ಣಗೊಳಿಸಿದ್ದರು. ನಂತರ ಅವರ ಬೌಲಿಂಗ್​ಗೆ ಅಭಿಮಾನಿಗಳು ಎಲ್ಲೆಡೆ ಮೈದಾನಗಳಲ್ಲಿ ಬೇಡಿಕೆ ಇಟ್ಟಿದ್ದರು. ಲೀಗ್​ನ ಕೊನೆಯ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ ಬೌಲಿಂಗ್​ ಕೊಟ್ಟಿದ್ದು, ವಿರಾಟ್​ ಏಕದಿನ ಕ್ರಿಕೆಟ್​ನಲ್ಲಿ 5ನೇ ವಿಕೆಟ್​ನ್ನು ಪಡೆದರು.

ಬೆಂಗಳೂರಿನಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ಅನುಷ್ಕಾ ಶರ್ಮಾ ಪತಿಗೆ ವಿಕೆಟ್​ ಸಿಕ್ಕಿದ್ದಕ್ಕೆ ಎದ್ದುನಿಂತು ಚಪ್ಪಾಳೆ ತಟ್ಟಿದರು. ಸ್ಟಾಂಡ್​ನಿಂದ ಕ್ರಿಕೆಟ್​ ನೋಡುತ್ತಿದ್ದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದರೆ ತಪ್ಪಾಗದು. ಮೊದಲ ಇನ್ನಿಂಗ್ಸ್​ನಲ್ಲಿ 51 ರನ್​ಗಳಿಸಿ ವಿರಾಟ್ ಔಟ್​ ಆದಾಗ ಅನುಷ್ಕಾ ಬೇಸರ ಮಾಡಿಕೊಂಡಿದ್ದರು. ವಿರಾಟ್​ ಅವರ ದಾಖಲೆಯ ಶತಕ ತಪ್ಪಿದ್ದು ಅವರ ಭಾವನೆಯಿಂದ ವ್ಯಕ್ತವಾಗುತ್ತಿತ್ತು.

9 ವರ್ಷದ ನಂತರ ವಿರಾಟ್​ಗೆ ವಿಕೆಟ್​: ವಿರಾಟ್​ ಕೊಹ್ಲಿ ಬೌಲಿಂಗ್ ಮಾಡುವುದು ಅಪರೂಪ. 2023ರ ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಕ್ಕೆ ತುತ್ತಾದಾಗ ಓವರ್​ನ ಉಳಿದ ಮೂರು ಬಾಲ್​ ಮಾಡಿದ್ದರು. ಅಂದು ವಿರಾಟ್​ 6 ವರ್ಷಗಳ ನಂತರ ಪಂದ್ಯದಲ್ಲಿ ಮತ್ತೆ ಬೌಲಿಂಗ್​ಗೆ ಇಳಿದಿದ್ದರು. ಈಗ 9 ವರ್ಷದ ನಂತರ ಅವರಿಗೆ 5ನೇ ಏಕದಿನ ವಿಕೆಟ್​ ಬಿದ್ದಿದೆ.

ಕೊಹ್ಲಿ ಕೊ ಬೌಲಿಂಗ್​ ದೋ: ಬಾಂಗ್ಲಾ ವಿರುದ್ಧ ವಿರಾಟ್​ ಬೌಲಿಂಗ್​ ಮಾಡಿದ ನಂತರ ಎಲ್ಲಾ ಮೈದಾನಗಳಲ್ಲೂ 'ಕೊಹ್ಲಿ ಕೊ ಬೌಲಿಂಗ್​ ದೋ' ಎಂದು ಅಭಿಮಾನಿಗಳು ಒತ್ತಡ ಹಾಕಿದ್ದರು. ಹಾರ್ದಿಕ್​ ಅನುಪಸ್ಥಿತಿಯ ನಂತರ ವಿರಾಟ್​, ಸೂರ್ಯಕುಮಾರ್​ ಯಾದವ್​ ಮತ್ತು ಶುಭಮನ್​ ಗಿಲ್ ನೆಟ್ಸ್​ನಲ್ಲಿ ಬೌಲಿಂಗ್​ ಮಾಡಿದ್ದರು. ಅಲ್ಲದೇ ಕೋಚ್ ರಾಹುಲ್​ ದ್ರಾವಿಡ್​ 6ನೇ ಬೌಲರ್​ಗಳಾಗಿ ವಿರಾಟ್​, ಸೂರ್ಯ ಮತ್ತು ಗಿಲ್ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದರು. ​

ವಿರಾಟ್​ ಬೌಲಿಂಗ್​: ವಿರಾಟ್ 111 ಟೆಸ್ಟ್​​ನಲ್ಲಿ 11 ಇನ್ನಿಂಗ್ಸ್ ಬೌಲಿಂಗ್​ ಮಾಡಿದ್ದು, 2.88 ಎಕಾನಮಿಯಲ್ಲಿ 84 ರನ್​ ಬಿಟ್ಟುಕೊಟ್ಟರೆ ಯಾವುದೇ ವಿಕೆಟ್​ ಪಡೆದಿಲ್ಲ. ಏಕದಿನ ಕ್ರಿಕೆಟ್​ನಲ್ಲಿ 50 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್​ ಮಾಡಿದ್ದು 6.18ರ ಎಕಾನಮಿಯಲ್ಲಿ 5 ವಿಕೆಟ್​ ಪಡೆದಿದ್ದಾರೆ. ಟಿ20ಯಲ್ಲಿ 13 ಇನ್ನಿಂಗ್ಸ್​ ಬೌಲಿಂಗ್​ ಮಾಡಿರುವ ವಿರಾಟ್​ 4 ವಿಕೆಟ್ ಪಡೆದರೆ, ಐಪಿಎಲ್​ನಲ್ಲಿ 26 ಇನ್ನಿಂಗ್ಸ್​ನಿಂದ 4 ವಿಕೆಟ್​ ಪಡೆದಿದ್ದಾರೆ.

ಸೂರ್ಯ, ಗಿಲ್​ ಬೌಲಿಂಗ್​: ಹಾರ್ದಿಕ್​ ಅನುಪಸ್ಥಿತಿಯಲ್ಲಿ ಆರನೇ ಬೌಲರ್​ ಕೊರತೆ ತಂಡಕ್ಕೆ ಮುಂದಿನ ಹಂತದಲ್ಲಿ ಕಾಡಬಾರದು ಎಂಬ ಕಾರಣಕ್ಕೆ ನಾಯಕ ರೋಹಿತ್​ ಶರ್ಮಾ ಹೆಚ್ಚಿಗೆ ಮೂವರ ಬಳಿ ಬೌಲಿಂಗ್​ ಮಾಡಿಸಿದ್ದಾರೆ. ವಿರಾಟ್​ ಮಧ್ಯಮ ವೇಗದ ಬೌಲರ್​ ಆದರೆ, ಸೂರ್ಯಕುಮಾರ್​ ಯಾದವ್​ ಮತ್ತು ಶುಭಮನ್​ ಗಿಲ್​ ಸ್ಪಿನ್​ ಬೌಲಿಂಗ್​ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್​: ಚಿನ್ನಸ್ವಾಮಿ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್​; ರೆಕಾರ್ಡ್​ಗಳ ಸುರಿಮಳೆ

Last Updated : Nov 13, 2023, 6:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.