ETV Bharat / sports

WTC Final 2023: ಜೈಸ್ವಾಲ್​ಗೆ ಯಶಸ್ವಿ ತಂತ್ರಗಳನ್ನು ಹೇಳಿಕೊಡುತ್ತಿರುವ ಕಿಂಗ್​ ಕೊಹ್ಲಿ..

author img

By

Published : May 31, 2023, 4:24 PM IST

WTC Final 2023: ಜೈಸ್ವಾಲ್​ಗೆ ಯಶಸ್ವಿ ತಂತ್ರಗಳನ್ನು ಹೇಳಿಕೊಡುತ್ತಿರುವ ಕಿಂಗ್​ ಕೊಹ್ಲಿ..
Virat Kohli batting tips to Young batsman Yashasvi Jaiswal WTC Final 2023

16ನೇ ಆವೃತ್ತಿಯ ಐಪಿಎಲ್​ನಲ್ಲಿ ಆರಂಭಿಕ ಬ್ಯಾಟರ್​ ಆಗಿ ಉತ್ತಮ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್​ಗೆ ವಿರಾಟ್​ ಕೊಹ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಅಭ್ಯಾಸದ ವೇಳೆ ಸಲಹೆ ನೀಡುತ್ತಿರುವ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡುತ್ತಿದೆ.

ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಮುನ್ನ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಹುರುಪಿನಿಂದ ತಯಾರಿ ನಡೆಸುತ್ತಿದ್ದು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ, ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಕಾಲಕಾಲಕ್ಕೆ ಬ್ಯಾಟಿಂಗ್‌ಗೆ ಅಗತ್ಯವಾದ ಸಲಹೆಗಳನ್ನು ಸಹ ನೀಡುತ್ತಿದ್ದಾರೆ.

  • Virat Kohli giving tips to Yashasvi Jaiswal in the practice session.

    King Kohli always there for youngsters! pic.twitter.com/LGMPqX29NW

    — CricketMAN2 (@ImTanujSingh) May 31, 2023 " class="align-text-top noRightClick twitterSection" data=" ">

ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಪೂಜಾರ ಭಾರತ ತಂಡದಲ್ಲಿ ಅನುಭವಿ ಬ್ಯಾಟರ್​ಗಳಾಗಿದ್ದಾರೆ. ಇವರ ಜೊತೆ ಈಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಕೆಲ ಯುವಕರು ಸೇರಿದ್ದು, ಯುವಕರು ಅನುಭವಿಗಳ ಅಡಿ ಅಭ್ಯಾಸದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ಇಶಾನ್​ ಕಿಶನ್, ಶುಭಮನ್ ಗಿಲ್ ಮತ್ತು ಕೆ.ಎಸ್.ಭರತ್​ಗೆ ವಿದೇಶಿ ಪಿಚ್​ಗಳಲ್ಲಿನ ಬ್ಯಾಟಿಂಗ್​ ಅನುಭವ ಕಲಿಯಲು ಸಹಕಾರಿಯಾಗಲಿದೆ.

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ಅನುಭವದ ಲಾಭವನ್ನು ತಂಡದ ಯುವ ಆಟಗಾರರಿಗೆ ನೀಡಲು ಪ್ರಯತ್ನಿಸುತ್ತಾರೆ ಮತ್ತು ಅವರಿಗೆ ಬ್ಯಾಟಿಂಗ್ ಸಲಹೆಗಳನ್ನು ನೀಡುವ ಮೂಲಕ ಅವರ ಆಟವನ್ನು ಇನ್ನಷ್ಟು ಉತ್ತಮ ಮಾಡಲು ಸಲಹೆ ನೀಡುತ್ತಾರೆ. ಐಪಿಎಲ್​ನಲ್ಲಿ ಪಂದ್ಯ ಮುಗಿದ ನಂತರ ಯುವ ಆಟಗಾರರ ಜೊತೆ ವಿರಾಟ್​ ಕೊಹ್ಲಿ ಸಂಭಾಷಣೆ ನಡೆಸುತ್ತಿದ್ದರು. ಬ್ಯಾಟಿಂಗ್​ ಸಲಹೆಗಳನ್ನು ಕೊಡುತ್ತಿದ್ದರು.

  • Yashasvi Jaiswal in the batting practice session ahead of WTC Final.

    What a inspiring journey of Jaiswal - The future of Indian cricket. All the best, Yashasvi. pic.twitter.com/ME3RNPm6Gf

    — CricketMAN2 (@ImTanujSingh) May 31, 2023 " class="align-text-top noRightClick twitterSection" data=" ">

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಮೊದಲ ಮತ್ತು ಎರಡನೇ ಬ್ಯಾಚ್​ನಲ್ಲಿ ಲಂಡನ್​ ತೆರಳಿದ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ವಿರಾಟ್​, ಅಶ್ವಿನ್,​ ಸಿರಾಜ್​, ಉಮೇಶ್​ ಯಾದವ್​ ಮತ್ತು ತಂಡದ ಕೊಚ್​ ಹಾಗೂ ಸಹಾಯಕ ಸಿಬ್ಬಂದಿ ಮೊದಲ ಯುಕೆಗೆ ಹಾರಿದ್ದರು. ಪ್ಲೇ ಆಫ್​ನಲ್ಲಿ ಮುಂಬೈ ಸೋತ ನಂತರ ರೋಹಿತ್​ ಶರ್ಮಾ, ಇಶಾನ್​ ಕಿಶನ್​ ಮತ್ತು ಜೈಸ್ವಾಲ್​ ಒಟ್ಟಿಗೆ ಲಂಡನ್​ಗೆ ತೆರಳಿದ್ದರು. ಸದ್ಯ ಆಟಗಾರರು ಇಲ್ಲಿನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

ಅಭ್ಯಾಸದ ಸಮಯ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಕೊಹ್ಲಿ ಮತ್ತು ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ, ಇದರಲ್ಲಿ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಸಲಹೆಗಳನ್ನು ನೀಡುತ್ತಿರುವುದು ಕಂಡು ಬಂದಿದೆ. ಈ ಸಮಯದಲ್ಲಿ, ವಿರಾಟ್ ಕೊಹ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಫ್ರಂಟ್ ಫೂಟ್ ಮತ್ತು ಬ್ಯಾಕ್ ಫುಟ್ ಬ್ಯಾಟಿಂಗ್‌ನ ಕೆಲವು ತಂತ್ರಗಳನ್ನು ಹೇಳುತ್ತಿರುವುದು ಕಂಡು ಬರುತ್ತದೆ. ಇದರಿಂದ ವಿದೇಶಿ ಪಿಚ್‌ಗಳಲ್ಲಿ ವೇಗದ ಬೌಲರ್‌ಗಳನ್ನು ಉತ್ತಮವಾಗಿ ಎದುರಿಸಬಹುದು.

ಗಾಯಕ್ವಾಡ್​ ಬದಲಿಗೆ ಜೈಸ್ವಾಲ್​: ಜೂನ್​ 3 ರಂದು ಮದುವೆ ಇರುವ ಕಾರಣ ಗಾಯಕ್ವಾಡ್​ 5ನೇ ತಾರೀಕಿನ ನಂತರ ಲಂಡನ್​ ತೆರಳುವುದಾಗಿ ಹೇಳಿದ್ದರಿಂದ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಿಂದ ಅವರಿಗೆ ಕೊಕ್​ ನೀಡಿ ಜೈಸ್ವಾಲ್​ ಅವರನ್ನು ಆಯ್ಕೆ ಮಾಡಲಾಗಿದೆ. ಜೈಸ್ವಾಲ್​ ಈ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಈ ಆವೃತ್ತಿಯಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದಾರೆ. ಯಶಸ್ವಿ 16ನೇ ಐಪಿಎಲ್​ ಸೀಸನ್​ನಲ್ಲಿ 5ನೇ ಅತಿ ಹೆಚ್ಚು ರನ್​ ಗಳಿಸಿದ ಬ್ಯಾಟರ್​ ಆಗಿದ್ದಾರೆ.

ಭಾರತದ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್​ ಕಿಶನ್​, ಕೆ.ಎಸ್.ಭರತ್ (ವಿಕೆಟ್​ ಕೀಪರ್​​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.

ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್​​, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್

ಇದನ್ನೂ ಓದಿ: ಐಪಿಎಲ್​ ಟ್ರೋಫಿಗೆ ವಿಶೇಷ ಪೂಜೆ ಮಾಡಿಸಿದ ಸಿಎಸ್​ಕೆ ಮಾಲೀಕ ಎನ್​ ಶ್ರೀನಿವಾಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.