ETV Bharat / sports

India vs NZ test : ಭೋಜನ ವಿರಾಮಕ್ಕೆ ಮುನ್ನ ವಿಲಿಯಮ್ಸನ್​ ವಿಕೆಟ್​ ಪಡೆದ ಭಾರತ, ಕಿವೀಸ್​ 197ಕ್ಕೆ 2

author img

By

Published : Nov 27, 2021, 12:10 PM IST

India vs NZ test
ನ್ಯೂಜಿಲ್ಯಾಂಡ್​ ಭಾರತ ಟೆಸ್ಟ್​

ನ್ಯೂಜಿಲ್ಯಾಂಡ್ ಪರ 2ನೇ ದಿನ​ ಮೊದಲ ವಿಕೆಟ್ ನಷ್ಟವಿಲ್ಲದೆ 129 ರನ್​ಗಳಿಸಿದ್ದ ವಿಲ್​ ಯಂಗ್ ಮತ್ತು ಟಾಮ್ ಲೇಥಮ್ ಇಂದು ಅ ಮೊತ್ತಕ್ಕೆ 22ರನ್​ ಸೇರಿಸಿದರು. ಅನುಭವಿ ಸ್ಪಿನ್ನರ್ ಅಶ್ವಿನ್​ 214 ಎಸೆತಗಳಲ್ಲಿ 89 ರನ್​ಗಳಿಸಿದ್ದ ವಿಲ್ ಯಂಗ್​ ವಿಕೆಟ್​ ಪಡೆದು ಅತಿಥೇಯರಿಗೆ ಮೊದಲ ಬ್ರೇಕ್ ಒದಗಿಸಿಕೊಟ್ಟರು.​

ಕಾನ್ಪುರ: ಮೊದಲ ಟೆಸ್ಟ್​ನ ಮೂರನೇ ಭಾರತೀಯ ಬೌಲರ್​ಗಳು ನ್ಯೂಜಿಲ್ಯಾಂಡ್​ ತಂಡದ 2 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಿವೀಸ್​ ಭೋಜನ ವಿರಾಮಕ್ಕೆ ಮುನ್ನ 197 ರನ್​ಗಳಿಸಿದೆ.

ನ್ಯೂಜಿಲ್ಯಾಂಡ್ ಪರ 2ನೇ ದಿನ​ ಮೊದಲ ವಿಕೆಟ್​ಗೆ 129 ರನ್​ಗಳಿಸಿ ಅಜೇಯರಾಗುಳಿದಿದ್ದ ವಿಲ್​ ಯಂಗ್ ಮತ್ತು ಟಾಮ್ ಲೇಥಮ್ ಇಂದು ಅ ಮೊತ್ತಕ್ಕೆ 22ರನ್​ ಸೇರಿಸಿದರು. ಅನುಭವಿ ಸ್ಪಿನ್ನರ್ ಅಶ್ವಿನ್​ 214 ಎಸೆತಗಳಲ್ಲಿ 89 ರನ್​ಗಳಿಸಿದ್ದ ವಿಲ್ ಯಂಗ್​ ವಿಕೆಟ್​ ಪಡೆದು ಅತಿಥೇಯರಿಗೆ ಮೊದಲ ಬ್ರೇಕ್ ಒದಗಿಸಿಕೊಟ್ಟರು.​

ನಂತರ ಲೇಥಮ್​ ಜೊತೆಗೂಡಿದ ನಾಯಕ ಕೇನ್​ ವಿಲಿಯಮ್ಸನ್​ 2ನೇ ವಿಕೆಟ್​ಗೆ 46 ರನ್​ ಸೇರಿಸಿದರು. 64 ಎಸೆತಗಳಲ್ಲಿ 18 ರನ್​ಗಳಿಸಿದ್ದ ವಿಲಿಯಮ್ಸನ್​ರನ್ನು ಉಮೇಶ್​ ಯಾದವ್​ ಎಲ್​ಬಿ ಡಬ್ಲ್ಯೂ ಬಲೆಗೆ ಬೀಳಿಸಿದರು.

ಪ್ರಸ್ತುತ ನ್ಯೂಜಿಲ್ಯಾಂಡ್​ 85.3 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 197 ರನ್​ಗಳಿಸಿದ್ದು, 148 ರನ್​ಗಳ ಹಿನ್ನಡೆಯನುಭವಿಸಿದೆ. ಟಾಮ್​ ಲೇಥಮ್​ ಅಜೇಯ 82 ರನ್​​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 345 ರನ್​ಗಳಳಿಸಿತ್ತು. ಪದಾರ್ಪಣೆ ಆಟಗಾರ ಶ್ರೇಯಸ್​ ಅಯ್ಯರ್​(105) ಶತಕ, ಶುಬ್ಮನ್​ ಗಿಲ್​ 52 ಮತ್ತು ರವೀಂದ್ರ ಜಡೇಜಾ 50 ರನ್​​ಗಳಿಸಿದ್ದರು.

ಇದನ್ನೂ ಓದಿ:New Covid variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೋವಿಡ್‌ ಕರಿನೆರಳು, ಮುಂದೂಡಿಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.