ETV Bharat / sports

U19 ವಿಶ್ವಕಪ್ ಫೈನಲ್: ಭಾರತದ ವಿರುದ್ಧ ಟಾಸ್​ ಗೆದ್ದ ಇಂಗ್ಲೆಂಡ್​ ಬ್ಯಾಟಿಂಗ್ ಆಯ್ಕೆ

author img

By

Published : Feb 5, 2022, 6:23 PM IST

1998ರಲ್ಲಿ ಅಂಡರ್​ 19 ವಿಶ್ವಕಪ್​ ಮರಳಿದಾಗ ವಿಶ್ವಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡ ಬರೋಬ್ಬರಿ 24 ವರ್ಷಗಳ ಬಳಿಕ ಫೈನಲ್ ಪ್ರವೇಶ ಮಾಡಿದೆ. ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿ ಫೈನಲ್​ಗೆ ಎಂಟ್ರಿಕೊಟ್ಟಿದೆ.

U19 world cup final
ಭಾರತ vs ಇಂಗ್ಲೆಂಡ್​ U19 ವಿಶ್ವಕಪ್ ಫೈನಲ್

ಆಂಟಿಗುವಾ: 2ನೇ ವಿಶ್ವಕಪ್​ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್​ ತಂಡ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಮತ್ತು ಬಲಿಷ್ಠ ತಂಡವಾಗಿರುವ ಭಾರತದ ವಿರುದ್ಧ ಫೈನಲ್​ನಲ್ಲಿ ಸೆಣಸುತ್ತಿದ್ದು, ಟಾಸ್​ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

1998ರಲ್ಲಿ ಅಂಡರ್​ 19 ವಿಶ್ವಕಪ್​ ಮರಳಿದಾಗ ವಿಶ್ವಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡ ಬರೋಬ್ಬರಿ 24 ವರ್ಷಗಳ ಬಳಿಕ ಫೈನಲ್ ಪ್ರವೇಶ ಮಾಡಿದೆ. ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿ ಫೈನಲ್​ಗೆ ಎಂಟ್ರಿಕೊಟ್ಟಿದೆ.

  • 📰 Toss news from Sir Vivian Richards Stadium
    🏴󠁧󠁢󠁥󠁮󠁧󠁿 England have opted to bat first against India

    Which team are you supporting? Tell us in the comments below 👇#ENGvIND | #U19CWC Final pic.twitter.com/KxSn7HCXxq

    — ICC (@ICC) February 5, 2022 " class="align-text-top noRightClick twitterSection" data=" ">

ಇತ್ತ 5ನೇ ವಿಶ್ವಕಪ್​ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ತಂಡ ಕೂಡ ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಆದರೆ ವಿಶ್ವಕಪ್​ಗೆ ಸೂಕ್ತ ತರಬೇತಿಯಿಲ್ಲದೆ ಕಾಲಿಟ್ಟಿದ್ದ ಭಾರತ ಕೇವಲ ಒಂದು ಪಂದ್ಯವನ್ನಾಡಿ ನಂತರ ಕೋವಿಡ್​ಗೆ ಹೊಡೆತಕ್ಕೂ ಸಿಲುಕಿತು. ಆದರೆ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಉಳಿದ ತಂಡ

ಎರಡೂ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ಭಾರತ 6 ಮತ್ತು ಇಂಗ್ಲೆಂಡ್​ 2ರಲ್ಲಿ ಜಯ ಸಾಧಿಸಿದೆ, ಆದರೆ ಕೊನೆಯ ಮೂರು ವಿಶ್ವಕಪ್​ ಮುಖಾಮುಖಿಯಲ್ಲಿ ಇಂಗ್ಲೆಂಡ್​​ 2ರಲ್ಲಿ ಜಯ ಸಾಧಿಸಿದೆ.

ಭಾರತ U19 ತಂಡ: ಅಂಗ್​ಕೃಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್(ನಾಯಕ), ರಾಜವರ್ಧನ್ ಹಂಗರ್ಗೇಕರ್, ನಿಶಾಂತ್ ಸಿಂಧು, ದಿನೇಶ್ ಬಾನಾ(ವಿಕೆಟ್ ಕೀಪರ್​), ರಾಜ್ ಬಾವಾ, ಕೌಶಲ್ ತಾಂಬೆ, ವಿಕ್ಕಿ ಓಸ್ತ್ವಾಲ್, ರವಿಕುಮಾರ್

ಇಂಗ್ಲೆಂಡ್ U19 ತಂಡ: ಜಾರ್ಜ್ ಥಾಮಸ್, ಜಾಕೋಬ್ ಬೆಥೆಲ್, ಟಾಮ್ ಪ್ರೆಸ್ಟ್(ನಾಯಕ), ಜೇಮ್ಸ್ ರೆವ್, ವಿಲಿಯಂ ಲಕ್ಸ್ಟನ್, ಜಾರ್ಜ್ ಬೆಲ್, ರೆಹಾನ್ ಅಹ್ಮದ್, ಅಲೆಕ್ಸ್ ಹಾರ್ಟನ್(ವಿಕೆಟ್ ಕೀಪರ್), ಜೇಮ್ಸ್ ಸೇಲ್ಸ್, ಥಾಮಸ್ ಆಸ್ಪಿನ್‌ವಾಲ್, ಜೋಶುವಾ ಬೋಡೆನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.