ETV Bharat / sports

ಧನಂ'ಜಯ' ಆಟ: ರೋಚಕ ಹೋರಾಟದಲ್ಲಿ ಲಂಕಾಗೆ ಮಣಿದ ಭಾರತ

author img

By

Published : Jul 29, 2021, 12:00 AM IST

Updated : Jul 29, 2021, 7:19 AM IST

ಭಾರತ vs ಶ್ರೀಲಂಕಾ 2ನೇ ಟಿ20
ಭಾರತ vs ಶ್ರೀಲಂಕಾ 2ನೇ ಟಿ20

ಕೊರೊನಾ ಸೋಂಕಿತ ಕೃನಾಲ್​ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್​, ಚಹಲ್​, ದೀಪಕ್​ ಚಹರ್​, ಮನೀಶ್ ಪಾಂಡೆ, ಇಶಾನ್ ಕಿಶನ್​ ಈ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಅನನುಭವಿಗಳ ತಂಡ ಶ್ರೀಲಂಕಾ ಬೌಲರ್​ಗಳ ಎದುರು ರನ್​ಗಳಿಸಲು ಪರದಾಟಿತು.

ಕೊಲಂಬೊ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಕೇವಲ 133 ರನ್​ಗಳ ಸಾಧಾರಣ ಗುರಿ ನೀಡಿಯೂ ಬೌಲರ್​ಗಳ ಚಾಣಕ್ಷ್ಯ ಪ್ರದರ್ಶನದ ನೆರವಿನಿಂದ ಕೊನೆಯ ಓವರ್​ ವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಿ 4 ವಿಕೆಟ್​ಗಳ ರೋಚಕ ಸೋಲು ಕಂಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅನಾನುಭವಿಗಳ ಭಾರತ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 132 ರನ್​ಗಳಿಸಲಷ್ಟೇ ಶಕ್ತವಾಯಿತು.

ನಾಯಕ ಶಿಖರ್​ ಧವನ್​ 42 ಎಸೆತಗಳನ್ನೆದುರಿಸಿ 5 ಬೌಂಡರಿ ಸಹಿತ 40 ರನ್​ಗಳಿಸಿದರೆ, ಪದಾರ್ಪಣೆ ಮಾಡಿದ್ದ ರುತುರಾಜ್ ಗಾಯಕ್ವಾಡ್​18 ಎಸೆತಗಳಲ್ಲಿ 21, ದೇವದತ್​ ಪಡಿಕ್ಕಲ್ 23 ಎಸೆತಗಳಲ್ಲಿ 29 ರನ್​ಗಳಿಸಿದರು.

ಕೊರೊನಾ ಸೋಂಕಿತ ಕೃನಾಲ್​ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್​, ಚಹಲ್​, ದೀಪಕ್​ ಚಹರ್​, ಮನೀಶ್ ಪಾಂಡೆ, ಇಶಾನ್ ಕಿಶನ್​ ಈ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಹಾಗಾಗಿ ಅನನುಭವಿಗಳ ತಂಡ ಶ್ರೀಲಂಕಾ ಬೌಲರ್​ಗಳ ಎದುರು ರನ್​ಗಳಿಸಲು ಪರದಾಟಿತು.

ಶ್ರೀಲಂಕಾ ಪರ ಧನಂಜಯ 29ಕ್ಕೆ 2, ಶನಕ 14ಕ್ಕೆ 1, ಚಮೀರಾ 23ಕ್ಕೆ 1 ವಿಕೆಟ್​ ಪಡೆದು ಭಾರತೀಯರ ರನ್​ಗತಿಗೆ ಕಡಿವಾಣವಾಕಿದರು.

ಇನ್ನು 133 ರನ್​ಗಳ ಸಾಧಾರಣ ಗುರಿ ಪಡೆದ ಶ್ರೀಲಂಕಾ ಕೂಡ ಚೇಸಿಂಗ್ ವೇಳೆ ರನ್​ಗಳಿಸಲು ಪರದಾಡಿ 6 ವಿಕೆಟ್​ ಕಳೆದುಕೊಂಡಿತ್ತು. ಆದರೆ ಧನಂಜಯ ಡಿ ಸಿಲ್ವಾ ಕೊನೆಯ ಓವರ್​ವರೆಗೂ ಬ್ಯಾಟಿಂಗ್ ನಡೆಸಿ ಅಜೇಯ 40 ರನ್​ಗಳಿಸುವ ಮೂಲಕ ಇನ್ನು 2 ಎಸೆತಗಳಿರುವಂತೆಯೇ 4 ವಿಕೆಟ್​ಗಳ ರೋಚಕ ಜಯಕ್ಕೆ ಕಾರಣರಾದರು.

ಇವರಿಗೆ ಸಾಥ್​​ ನೀಡಿದ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಮಿನೋದ್ ಭನುಕ 31 ಎಸೆತಗಳಲ್ಲಿ 36, ಹಸರಂಗ 15 ರನ್​ಗಳಿಸಿದರು. ಕೊನೆಯಲ್ಲಿ ಕೇವಲ 6 ಎಸೆತಗಳಲ್ಲಿ ಅಜೇಯ 12 ರನ್​ಗಳಿಸಿದ ಚಮಿಕ ಕರುಣರತ್ನೆ ಧನಂಜಯ ಜೊತೆಗೂಡಿ ಭಾರತದ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡರು.

ಭಾರತದ ಪರ ಕುಲದೀಪ್ ಯಾದವ್​ 30ಕ್ಕೆ 2, ರಾಹುಲ್ ಚಹರ್​ 27ಕ್ಕೆ1, ವರುಣ್ ಚಕ್ರವರ್ತಿ 18ಕ್ಕೆ 1, ಸಕಾರಿಯಾ 34 ರನ್​ಗಳಿಗೆ2 ಮತ್ತು ಭುವನೇಶ್ವರ್​ ಕುಮಾರ್​ 21ಕ್ಕೆ1 ವಿಕೆಟ್​ ಪಡೆದರಾದರು. ಆದರೆ ಕಡಿಮೆ ಗುರಿ ನೀಡಿದ್ದರಿಂದ ಬೌಲರ್​ಗಳ ನಡೆಸಿದ ಹೋರಾಟ ವ್ಯರ್ಥವಾಯಿತು.

ಇದನ್ನು ಓದಿ:ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂ. ಬಹುಮಾನ: ಭಾರತೀಯ ರೈಲ್ವೆ

Last Updated :Jul 29, 2021, 7:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.