ETV Bharat / sports

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಿಂದ ಹೊರಬಂದ ಮೊಹಮ್ಮದ್ ಸಿರಾಜ್‌: ಆರಂಭಕ್ಕೂ ಮುನ್ನ ಆಘಾತ!

author img

By

Published : Jul 27, 2023, 5:27 PM IST

ಭಾರತದ ವೇಗಿ ಮೊಹಮ್ಮದ್ ಸಿರಾಜ್‌ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದು ತವರಿಗೆ ಮರಳಿದ್ದಾರೆ.

Siraj rested for ODIs against West Indies as precautionary measure, flies back home
Siraj rested for ODIs against West Indies as precautionary measure, flies back home

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್‌ಗೆ ಪಾದದ ನೋವು ಕಾಣಿಸಿಕೊಂಡಿದೆ. ಹಾಗಾಗಿ ಇಂದಿನಿಂದ ಆರಂಭಗೊಳ್ಳುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಗುರುವಾರ ತಿಳಿಸಿದೆ. ಸೂಪರ್ ಫಾರ್ಮ್‌ನಲ್ಲಿರುವ ಸಿರಾಜ್ ಅವರಿಗೆ ವಿಶ್ರಾಂತಿ ತುಂಬಾ ಅವಶ್ಯಕವಿದೆ. ಆದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಿಂದ ಅವರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಮೊದಲ ಏಕದಿನದ ಪಂದ್ಯಕ್ಕೂ ಮುನ್ನ ಮಾಧ್ಯಮ ಪ್ರಕಟಣೆ ತಿಳಿಸಿದೆ.

  • Mohd. Siraj has been released from Team India’s ODI squad ahead of the three-match series against the West Indies. The right-arm pacer has a sore ankle & as a precautionary measure has been advised rest by the BCCI medical team. The team has not called for a replacement player… pic.twitter.com/FrbNCEeya4

    — ANI (@ANI) July 27, 2023 " class="align-text-top noRightClick twitterSection" data=" ">

ಟೆಸ್ಟ್ ಸರಣಿಯ ಭಾಗವಾಗಿದ್ದ ಆರ್ ಅಶ್ವಿನ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿ ಅವರೊಂದಿಗೆ ಸಿರಾಜ್‌ ಕೂಡ ಭಾರತಕ್ಕೆ ಮರಳಿದ್ದು, ಇವರ ಅನುಪಸ್ಥಿತಿಯಲ್ಲಿ ಗುರುವಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡ ಎದುರಿಸಲಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಮೊಹಮ್ಮದ್ ಶಮಿಯಂತಹ ಹಿರಿಯರ ಅನುಪಸ್ಥಿತಿ ಸರಿದೂಗಿಸಿದ್ದರು. ಅಲ್ಲದೇ ತಮ್ಮ ಮಾರಕ ಬೌಲಿಂಗ್​ ದಾಳಿಯಿಂದ ಎದುರಾಳಿ ತಂಡದ ಹಲವು ವಿಕೆಟ್​ ಪಡೆದು ಲಯ ಕಂಡುಕೊಂಡಿದ್ದರು. ಎರಡನೇ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳೊಂದಿಗೆ (5/60) ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಗುರುವಾರ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯ ಸೇರಿದಂತೆ ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿಗೆ ಸಿರಾಜ್ ಅನುಪಸ್ಥಿತಿ ಕಾಡಲಿದೆ. ಅವರ ಜಾಗದಲ್ಲಿ ಜಯದೇವ್ ಉನದ್ಕತ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಮತ್ತು ಅನ್ ಕ್ಯಾಪ್ಡ್ (ODIಗಳಲ್ಲಿ) ಮುಖೇಶ್ ಕುಮಾರ್ ಈ ನಾಲ್ವರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ಇದರ ಹೊರತಾಗಿಯೂ ಆಯ್ಕೆ ಸಮಿತಿ ಬೇರೆ ದಾರಿ ಕಂಡುಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಆದರೂ ಸಿರಾಜ್ ಅನುಪಸ್ಥಿತಿ ತಂಡಕ್ಕೆ ​ನಷ್ಟ ಉಂಟು ಮಾಡಬಹುದು ಎಂದು ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದಾರೆ.

"ಸಿರಾಜ್ ಐಪಿಎಲ್‌ನಿಂದಲೂ ನಿರಂತರವಾಗಿ ಆಡುತ್ತಿದ್ದಾರೆ. ಶ್ರೀಲಂಕಾ, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಹಾಗೂ ODI ಸರಣಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಮುಂಬರುವ ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ತಯಾರಿಯಾಗಬೇಕು. ಅವರ ಫಿಟ್​ನೆಸ್ ತಂಡಕ್ಕೆ​ ತುಂಬಾ ಅವಶ್ಯಕ. ಹಾಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ಬಿಸಿಸಿಐ ಮೂಲಗಳು ಗುರುವಾರ ತಿಳಿಸಿವೆ.

14ನೇ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಸಿರಾಜ್, 19 ವಿಕೆಟ್​ಗಳನ್ನು ಪಡೆಸಿದ್ದಾರೆ. ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಆಡಿದ್ದರು. ಇತ್ತೀಚೆಗಷ್ಟೆ ನಡೆದ ವೆಸ್ಟ್ ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಯ ದ್ವಿತೀಯ ಟೆಸ್ಟ್​ನ ಪ್ರಥಮ ಇನಿಂಗ್ಸ್​ನಲ್ಲಿ ಮಾರಕ ಬೌಲಿಂಗ್ ಪ್ರದರ್ಶಿಸಿದ ಸಿರಾಜ್, ಟೆಸ್ಟ್ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು. ಹಾಗಾಗಿ ಅವರು ಭಾರತದ ಭರವಸೆಯ ಬೌಲರ್ ಆಗಿದ್ದಾರೆ.

ಇದನ್ನೂ ಓದಿ: 'ಸದ್ಯ ಭಾರತ ತಂಡ ಉತ್ತಮ ಸ್ಥಿತಿಯಲ್ಲಿದೆ'.. ಆಟಗಾರರ ಪ್ರದರ್ಶನಕ್ಕೆ ನಾಯಕ ರೋಹಿತ್​ ಶರ್ಮಾ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.