ETV Bharat / sports

Shreyas Iyer: ಯೋ-ಯೋ ಟೆಸ್ಟ್‌ನ ರಿಸಲ್ಟ್​ ನೋಡಿ ನಾನೇ ಆಶ್ಚರ್ಯಚಕಿತನಾದೆ.. ಕಮ್​​ಬ್ಯಾಕ್​ ಬಗ್ಗೆ ಅಯ್ಯರ್​​ ಮನದಾಳ

author img

By ETV Bharat Karnataka Team

Published : Aug 27, 2023, 8:04 PM IST

Shreyas Iyer return from injury: ಏಷ್ಯಾಕಪ್​ ತಂಡಕ್ಕೆ ಗಾಯದಿಂದ ಚೇತರಿಸಿಕೊಂಡು ಮರಳಿರುವ ಶ್ರೇಯಸ್​ ಅಯ್ಯರ್​ ಶಸ್ತ್ರ ಚಿಕಿತ್ಸೆಗೆ ಒಳಗಾದ ಸಮಯದಲ್ಲಿ ಅನುಭವನ್ನು ಬಿಸಿಸಿಐ ಟಿವಿಯಲ್ಲಿ ಹಂಚಿಕೊಂಡಿದ್ದು ಹೀಗೆ..

Shreyas Iyer
Shreyas Iyer

ಬೆಂಗಳೂರು: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡದ ಭಾಗವಾಗಿರುವುದರ ಬಗ್ಗೆ ಬಿಸಿಸಿಐ ಟಿವಿಯಲ್ಲಿ ಹಂಚಿಕೊಂಡಿದ್ದಾರೆ. ಗಾಯದಿಂದ ವೇಗವಾಗಿ ಚೇತರಿಸಿಕೊಂಡಿರುವುದರ ಬಗ್ಗೆ ಸ್ವತಃ ಅಯ್ಯರ್​ ಅವರೇ ಸಂತೋಷ ವ್ಯಕ್ತಪಡಿಸಿದ್ದಾರೆ. ಆಗಸ್ಟ್​ 30ರಿಂದ ಪ್ರಾರಂಭವಾಗಲಿರುವ ಏಷ್ಯಾಕಪ್​ ಮೂಲಕ ತಂಡಕ್ಕೆ ಅಯ್ಯರ್​ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಸದ್ಯ ಏಷ್ಯಾಕಪ್​ ಹಿನ್ನೆಲೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ವಿರಾಟ್​ ಮತ್ತು ಅಯ್ಯರ್​ 3 ಮತ್ತು ನಾಲ್ಕನೇ ಸ್ಥಾನಕ್ಕಾಗಿ ಜೊತೆಯಾಟ ಆಡುವ ಸಾಧ್ಯತೆ ಹೆಚ್ಚಿದೆ.

ಬಿಸಿಸಿಐ ಟಿವಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಯ್ಯರ್​, "ತಂಡಕ್ಕೆ ಮರು ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಎಲ್ಲರೂ ಕಮ್​ಬ್ಯಾಕ್​ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಎಲ್ಲಾ ಆಟಗಾರರು ತೋರಿದ ಸಹಾನುಭೂತಿ ಅದ್ಭುತವಾಗಿದೆ. ತಮ್ಮ ತಂಡದಲ್ಲಿ ಆಡಲು ರೋಮಾಂಚನಗೊಂಡಿದ್ದೇನೆ" ಎಂದಿದ್ದಾರೆ.

  • A journey of excruciating pain, patience and recovery 👏👏@ShreyasIyer15 highlights the contributions of trainer Rajini and Nitin Patel at the NCA in his inspirational comeback from injury 👌👌 - By @RajalArora #TeamIndia | @VVSLaxman281

    Full interview 🎥🔽

    — BCCI (@BCCI) August 27, 2023 " class="align-text-top noRightClick twitterSection" data=" ">

"ನಾನು ಸ್ಲಿಪ್ ಡಿಸ್ಕ್ ನಿಂದ ಬಳಲುತ್ತಿದ್ದೆ, ಅದು ನನ್ನ ನರವನ್ನು ಸಂಕುಚಿತಗೊಳಿಸುತ್ತಿತ್ತು ಮತ್ತು ನೋವು ಪಾದಗಳಲ್ಲಿ ನೋವನ್ನು ಅನುಭವಿಸುತ್ತಿದ್ದೆ. ಆ ಸಮಯದಲ್ಲಿ ಅಸಹನೀಯ ನೋವನ್ನು ಅನುಭವಿಸಿದೆ. ಆದರೆ ಇದರ ಬಗ್ಗೆ ಯಾರಲ್ಲೂ ಹೇಳಿಕೊಂಡಿರಲಿಲ್ಲ. ಆಗ ಆಟವಾಡಲು ಕಷ್ಟವಾಗುತ್ತಿತ್ತು. ನೋವಿನ ಉಪಶಮನಕ್ಕೆ ಮಾತ್ರೆ ಅಥವಾ ಚುಚ್ಚು ಮದ್ದನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ನಂತರ ಪಡೆದ ಸಲಹೆಯಂತೆ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅಗತ್ಯ ಎಂದು ಫಿಸಿಯೋ ಹೇಳಿದ್ದರು. ನಂತರ ಮನೆಗೆ ತೆರಳಿ ಹತ್ತು ದಿನದ ವಿಶ್ರಾಂತಿ ಮಾಡಿದೆ. ವೈದ್ಯರೊಬ್ಬರು ಮೈದಾನಕ್ಕಳಿಯಬಹುದು ಆದರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದರು. ಅದರಂತೆ ನಿರ್ಧಾರ ಮಾಡಿ ಇಂಗ್ಲೆಂಡ್​ಗೆ ತೆರಳಿದೆ."

"ಶಸ್ತ್ರಚಿಕಿತ್ಸೆಯ ನಂತರ, ನಾನು ಮೂರು ವಾರಗಳ ಕಾಲ ಲಂಡನ್‌ನಲ್ಲಿದ್ದೆ. ವೈದ್ಯರು ನನ್ನ ಪ್ರಗತಿಯನ್ನು ಸ್ವಲ್ಪ ಸಮಯದವರೆಗೆ ಪರಿಶೀಲಿಸಬೇಕಾಗಿತ್ತು. ಮೂರು ವಾರಗಳ ನಂತರ, ಅವರು ನನ್ನನ್ನು ಹಿಂತಿರುಗಲು ಹೇಳಿದರು. ನಂತರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಯ ಫಿಸಿಯೋಗಳು ನನ್ನ ಚೇತರಿಕೆಗೆ ಒತ್ತು ಕೊಟ್ಟರು. ನೋವು ಮೂರು ತಿಂಗಳ ಕಾಲ ಇತ್ತು ಮತ್ತು ನಂತರ ಅದು ಕಡಿಮೆಯಾಗಲು ಪ್ರಾರಂಭಿಸಿತು. ಫಿಸಿಯೋಸ್ ನನ್ನ ಕಮ್​ಬ್ಯಾಕ್​ಗೆ ಬೇಕಾದ ತಯಾರಿಗೆ ಗಮನಹರಿಸಿದರು. ಕ್ರೀಡಾಪಟುವಾಗಿ ಪುನರ್ವಸತಿಗೆ ಹೋದಾಗ ನೋವು ಕಡಿಮೆಯಾಗುವುದಿಲ್ಲ ಇನ್ನಷ್ಟು ಕಾಡುತ್ತದೆ. ಆದರೆ ನನ್ನ ಸುತ್ತಲೂ ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಉತ್ತಮ ಸ್ನೇಹಿತರು, ಸಹಾಯಕ ಸಿಬ್ಬಂದಿ ಮತ್ತು ಕುಟುಂಬ ನನ್ನ ಜೊತೆಗಿದ್ದಿತು. ನಾನು ಭಯಭೀತನಾಗಿದ್ದೆ, ಆದರೆ ಈ ಹಂತದಲ್ಲಿ ತಾಳ್ಮೆ ಮುಖ್ಯವಾಗಿದೆ. ನಾನು ಮರಳಿರುವುದು ನಿಜವಾಗಿಯೂ ಸಂತೋಷವಾಗಿದೆ. ಏಕೆಂದರೆ ನಾನು ಇಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ,"ಎಂದು ಅವರು ಹೇಳಿದರು.

"ಆರಂಭದ ಹಂತದಲ್ಲಿ ಅತ್ಯಂತ ಕಠಿಣ ಎನಿಸುತ್ತಿತ್ತು. ಆದರೆ ಫಿಸಿಯೋಗಳು ವಿಶ್ವಾಸ ಹೊಂದಿದ್ದರು. ನಿಧಾನವಾಗಿ ಒಂದೊಂದೇ ಪರೀಕ್ಷೆಗಳು ದಾಟಲು ಸಾಧ್ಯವಾಯಿತು. ಯೋ-ಯೋ ಟೆಸ್ಟ್, ಟ್ರಯಲ್ಸ್ ಮತ್ತು ಕ್ರಮೇಣ ಪಂದ್ಯವನ್ನು ಆಡಿದೆ. ಯೋ-ಯೋ ಟೆಸ್ಟ್‌ನಲ್ಲಿ ನಾನೇ ಆಶ್ಚರ್ಯಚಕಿತನಾದೆ. ಸದ್ಯ ಎಲ್ಲಾ ಅಭ್ಯಾಸಗಳನ್ನು ಮಾಡುತ್ತಿದ್ದೇನೆ. ಯಾವುದೇ ನೋವಿಲ್ಲದೇ ತಂಡಕ್ಕೆ ಮರಳಿದ್ದೇನೆ. ಇದು ನಿಜಕ್ಕೂ ತುಂಬಾ ಆನಂದವನ್ನು ನೀಡುತ್ತಿದೆ" ಎಂದು ಅಯ್ಯರ್ ಹೇಳಿದ್ದಾರೆ. (ಎಎನ್​ಐ)

ಇದನ್ನೂ ಓದಿ: ಮಹಾರಾಜ ಟ್ರೋಫಿ: ಮಂಗಳೂರಿನ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ ಹಾಲಿ ಚಾಂಪಿಯನ್ ಗುಲ್ಬರ್ಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.