ETV Bharat / sports

ಕ್ರಿಕೆಟ್ ಬಿಡ್ಬೇಕು ಅಂದ್ಕೊಂಡಿದ್ದ ಯುವಕ ಉಪನಾಯಕನಾಗಿ ದೇಶಕ್ಕೆ U19 ವಿಶ್ವಕಪ್ ತಂದುಕೊಟ್ಟ!

author img

By

Published : Feb 7, 2022, 9:57 PM IST

ರಶೀದ್‌ನ ತಂದೆಯ ಪ್ರಕಾರ, ರಶೀದ್ ಮೊದಲು ಆಂಧ್ರಪ್ರದೇಶದ 14 ವರ್ಷದೊಳಗಿನವರ ತಂಡಕ್ಕೆ ಮತ್ತು ನಂತರ 16 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿದ್ದರು. ಒಂದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಖಿನ್ನತೆಗೆ ಒಳಗಾಗಿದ್ದ ಯುವ ಕ್ರಿಕೆಟಿಗ, ಈ ಸಂದರ್ಭದಲ್ಲಿ ಕ್ರಿಕೆಟ್ ತ್ಯಜಿಸಲು ಕೂಡ ಬಯಸಿದ್ದರಂತೆ. ಆದರೆ, ತಂದೆಯ ಪ್ರೋತ್ಸಾಹದಿಂದ ಮತ್ತೆ ತರಬೇತಿ ಪಡೆದು ಆಂಧ್ರಪ್ರದೇಶ ತಂಡದಲ್ಲಿ ಸ್ಥಾನ ಪಡೆದರು..

shaikh rashid wanted to skip game now won under 19 world cup for country
ಭಾರತ ಕಿರಿಯರ ತಂಡದ ಉಪನಾಯಕ ಶೇಖ್ ರಶೀದ್​

ಗುಂಟೂರು (ಆಂಧ್ರಪ್ರದೇಶ) : ಭಾರತ ತಂಡ 2022ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದೆ. ಯುವ ಆಟಗಾರರ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ.

ತಂಡದಲ್ಲಿದ್ದ ಭರವಸೆಯ ಆಟಗಾರರಲ್ಲಿ ಶೇಖ್ ರಶೀದ್ ಕೂಡ ಒಬ್ಬರು. ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ 17 ವರ್ಷದ ಶೇಖ್ ರಶೀದ್ ತನ್ನದೇ ಆದ ಐಡೆಂಟಿಟಿ ಮೂಡಿಸಿದ್ದಾರೆ.

ಶೇಖ್ ರಶೀದ್ ಅಂಡರ್-19 ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿದ್ದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ಶೇಖ್ ರಶೀದ್, ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ 50, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 95, ಬಾಂಗ್ಲಾದೇಶ ವಿರುದ್ಧ ಕ್ವಾರ್ಟರ್​ ಫೈನಲ್​​ನಲ್ಲಿ 19, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ 31ರನ್ ಸೇರಿದಂತೆ 5 ಪಂದ್ಯಗಳಲ್ಲಿ 66.75 ಸರಾಸರಿಯಲ್ಲಿ 267 ರನ್ ಗಳಿಸಿದರು.

ಶೇಖ್ ರಶೀದ್ ವಿಶ್ವಕಪ್​ಗೂ ಮುನ್ನ ಯುಎಇಯಲ್ಲಿ ನಡೆದಿದ್ದ ಎಸಿಸಿ ಅಂಡರ್-19 ಏಷ್ಯಾ ಕಪ್ 2021ರ ವಿಜೇತ ತಂಡದ ಭಾಗವಾಗಿದ್ದಾರೆ. ಏಷ್ಯಾ ಕಪ್ 2021ರ ಸೆಮಿಫೈನಲ್‌ನಲ್ಲಿ ಶೇಖ್ ರಶೀದ್ ಬಾಂಗ್ಲಾದೇಶ ವಿರುದ್ಧ 108 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದ್ದರು.

ಬ್ಯಾಂಕ್​ ಉದ್ಯೋಗ ತ್ಯಜಿಸಿದ್ದ ತಂದೆ

ರಶೀದ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಅವರ ತಂದೆ ಶೇಖ್ ಬಾಲಿ ಶಾ ಪಾತ್ರ ಮಹತ್ವದ್ದಾಗಿದೆ. ತನ್ನ ಮಗನ ಮೇಲಿನ ಭರವಸೆಯಿಂದ ಅವರು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ರಶೀದ್‌ಗೆ ಬ್ಯಾಟಿಂಗ್ ಅಭ್ಯಾಸ ಮಾಡಿಸುವ ಸಲುವಾಗಿ ಬ್ಯಾಂಕ್‌ ಉದ್ಯೋಗವನ್ನು ತ್ಯಜಿಸಿದ್ದರು.

ಇದೀಗ ಮಗನ ಪ್ರದರ್ಶನದಿಂದ ತುಂಬಾ ಸಂತೋಷ ಪಡುತ್ತಿದ್ದಾರೆ. ರಶೀದ್ ದಿನಕ್ಕೆ 8 ಗಂಟೆಗಳ ಕಾಲ ತರಬೇತಿ ಮಾಡುತ್ತಿದ್ದ. ಅವನ ಶ್ರಮಕ್ಕೆ ಫಲ ಸಿಕ್ಕಿದೆ ಎನ್ನುವ ಬಾಲಿ ಶಾ ಅವರು, ಮುಂದೊಂದು ದಿನ ತಮ್ಮ ಮಗ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆಯುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್​ ಬಿಡಬೇಕೆಂದುಕೊಂಡಿದ್ದ ರಶೀದ್​

ರಶೀದ್‌ನ ತಂದೆಯ ಪ್ರಕಾರ, ರಶೀದ್ ಮೊದಲು ಆಂಧ್ರಪ್ರದೇಶದ 14 ವರ್ಷದೊಳಗಿನವರ ತಂಡಕ್ಕೆ ಮತ್ತು ನಂತರ 16 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿದ್ದರು. ಒಂದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಖಿನ್ನತೆಗೆ ಒಳಗಾಗಿದ್ದ ಯುವ ಕ್ರಿಕೆಟಿಗ, ಈ ಸಂದರ್ಭದಲ್ಲಿ ಕ್ರಿಕೆಟ್ ತ್ಯಜಿಸಲು ಕೂಡ ಬಯಸಿದ್ದರಂತೆ. ಆದರೆ, ತಂದೆಯ ಪ್ರೋತ್ಸಾಹದಿಂದ ಮತ್ತೆ ತರಬೇತಿ ಪಡೆದು ಆಂಧ್ರಪ್ರದೇಶ ತಂಡದಲ್ಲಿ ಸ್ಥಾನ ಪಡೆದರು.

ಅದರ ನಂತರ ಅವರ ವೃತ್ತಿಜೀವನದಲ್ಲಿ ಹಿಂತಿರುಗಿ ನೋಡಲೇ ಇಲ್ಲ, ಅವರ ಗ್ರಾಫ್ ಏರಿಕೆಯಾಗುತ್ತಾ ಹೋಯಿತು. ನಂತರ ಅವರು ದೇಶದ 19 ವರ್ಷದೊಳಗಿನ ತಂಡಕ್ಕೂ ಆಯ್ಕೆಯಾದರು.

ಅವರು 14 ವರ್ಷ ವಯಸ್ಸಿನವರಾಗಿದ್ದಾಗ, ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ರಶೀದ್ ಅವರನ್ನು ಯುಕೆಗೆ ಕಳುಹಿಸಿತ್ತು. ಇದು ಅವರ ಆಟವನ್ನು ಸುಧಾರಿಸಲು ಕಾರಣವಾಯಿತು ಎಂದು ರಶೀದ್​ ತಂದೆ, ಮಗನ ಕ್ರಿಕೆಟ್ ಜರ್ನಿಯನ್ನು ಬಿಚ್ಚಿಟ್ಟರು. ಇದೇ ಸಂದರ್ಭದಲ್ಲಿ ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ಶುಭಾಶಯ ತಿಳಿಸಿದರು.

ಇದನ್ನೂ ಓದಿ:ಕಿರಿಯರ ವಿಶ್ವಕಪ್​​ ಗೆದ್ದ ಯಶ್​ ಧುಲ್​ಗೆ ಕೊಹ್ಲಿಯಂತೆ ಬ್ಯಾಟರ್, ಧೋನಿಯಂತೆ ನಾಯಕನಾಗುವ ಆಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.