ETV Bharat / sports

ಕಿರಿಯರ ವಿಶ್ವಕಪ್​​ ಗೆದ್ದ ಯಶ್​ ಧುಲ್​ಗೆ ಕೊಹ್ಲಿಯಂತೆ ಬ್ಯಾಟರ್, ಧೋನಿಯಂತೆ ನಾಯಕನಾಗುವ ಆಸೆ

author img

By

Published : Feb 7, 2022, 8:49 PM IST

2022ರ U19 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸುವ ​ ಮೂಲಕ ತಮಗೆ ಸ್ಫೂರ್ತಿಯಾಗಿರುವ ಕೊಹ್ಲಿ ಹೆಸರಿರುವ ಪಟ್ಟಿಯಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ. ಭಾರತ ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ಗಳ ರೋಚಕ ಜಯ ಸಾಧಿಸುವ ಮೂಲಕ ವಿವಿಯನ್​ ರಿಚರ್ಡ್ಸ್​ ಸ್ಟೇಡಿಯಂನಲ್ಲಿ 5ನೇ ಬಾರಿ ಕಿರಿಯರ ವಿಶ್ವಕಪ್​​ ಎತ್ತಿ ಹಿಡಿದಿತ್ತು..

yash Dhull bat like virat, as a captain think like a Dhoni, says his coach Nagar
ಯಶ್​ ಧುಲ್ , ವಿರಾಟ್ ಕೊಹ್ಲಿ, ಎಂಎಸ್ ಧೋನಿ

ನವದೆಹಲಿ : ವೆಸ್ಟ್​ ಇಂಡೀಸ್​ನಲ್ಲಿ ನಡೆದ ಅಂಡರ್​-19 ವಿಶ್ವಕಪ್​ನಲ್ಲಿ ಭಾರತಕ್ಕೆ 5ನೇ ಟ್ರೋಫಿ ತಂದು ಕೊಟ್ಟಿರುವ ಯುವ ನಾಯಕ ಯಶ್​ ಧುಲ್, ತಾವು ವಿರಾಟ್​ ಕೊಹ್ಲಿಯಂತೆ ಬ್ಯಾಟರ್ ಆಗುವುದಾಗಿ ಶಾಲಾ ದಿನಗಳಿಂದಲೂ ಹೇಳುತ್ತಿದ್ದರು ಎಂದು ಅವರ ಕೋಚ್​​ ರಾಜೇಶ್ ನಗರ್​ ಹೇಳಿದ್ದಾರೆ.

2022ರ U19 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸುವ ​ ಮೂಲಕ ತಮಗೆ ಸ್ಫೂರ್ತಿಯಾಗಿರುವ ಕೊಹ್ಲಿ ಹೆಸರಿರುವ ಪಟ್ಟಿಯಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ. ಭಾರತ ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ಗಳ ರೋಚಕ ಜಯ ಸಾಧಿಸುವ ಮೂಲಕ ವಿವಿಯನ್​ ರಿಚರ್ಡ್ಸ್​ ಸ್ಟೇಡಿಯಂನಲ್ಲಿ 5ನೇ ಬಾರಿ ಕಿರಿಯರ ವಿಶ್ವಕಪ್​​ ಎತ್ತಿ ಹಿಡಿದಿತ್ತು.

ವಿಶ್ವಕಪ್​ನಲ್ಲಿ ನಾಯಕತ್ವವಹಿಸಿ ದೇಶಕ್ಕೆ ಟ್ರೋಫಿ ಗೆದ್ದುಕೊಟ್ಟಿರುವ ತಮ್ಮ ಶಿಷ್ಯನನ್ನು ನೋಡುವುದಕ್ಕೆ ಎದುರು ನೋಡುತ್ತಿರುವುದಾಗಿ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಗರ್ ತಿಳಿಸಿದ್ದಾರೆ.

"ನನಗೆ ಯಶ್​ ಭಾರತಕ್ಕಾಗಿ ವಿಶ್ವಕಪ್​ ತಂದುಕೊಡಲಿದ್ದಾರೆ ಎನ್ನುವ ವಿಶ್ವಾಸವಿತ್ತು. ಆತ ಗೆಲುವಿಗಾಗಿ ಸದಾ ಹಸಿವಿನಿಂದ ಇರುತ್ತಾನೆ. ಅವನ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ನಾನು ಹೆಮ್ಮೆಯ ಕೋಚ್​. ಆತ ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಾನೆ ಮತ್ತು ಇಡೀ ತಂಡ ಕೂಡ ಅದ್ಭುತ ಪ್ರದರ್ಶನ ತೋರಿದೆ. ಇದೊಂದು ಉತ್ತಮ ತಂಡ. ಅಂಡರ್​ 19 ವಿಶ್ವಕಪ್​ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ" ಎಂದು ನಗರ್​ ತಿಳಿಸಿದ್ದಾರೆ.

ವಿರಾಟ್​ ಅಗ್ರೆಸಿವ್​ ಬ್ಯಾಟಿಂಗ್​​, ಧೋನಿಯ ಕೂಲ್ ಕ್ಯಾಪ್ಟೆನ್ಸಿ ​

ನೀವು ಗಮನಿಸಿರಬಹುದುಸ ಯಶ್​ನಲ್ಲಿ ವಿರಾಟ್​ ಕೊಹ್ಲಿಯ ಕೆಲವು ಲಕ್ಷಣಗಳಿವೆ. ಬ್ಯಾಟಿಂಗ್ ಮಾಡುವ ವೇಳೆ ಆಕ್ರಮಣಕಾರಿಯಾಗಿರುತ್ತಾರೆ. ಅವರು ಚೆಂಡನ್ನು ಆಕ್ರಮಣಕಾರಿಯಾಗಿ ದಂಡಿಸುತ್ತಾರೆ. ಅವರಿಗೆ ಆ ಸಾಮರ್ಥ್ಯವಿದೆ. ಇನ್ನು ನೀವು ಫೀಲ್ಡಿಂಗ್​ನಲ್ಲೂ ಕೂಡ ಅವರಲ್ಲಿ ವಿರಾಟ್​ ಕೊಹ್ಲಿಯ ಛಾಯೆಗಳನ್ನು ಕಾಣಬಹುದು. ಆತನ ಫೀಲ್ಡಿಂಗ್​ನಲ್ಲಿ ಯಾವುದೇ ಅವಕಾಶಗಳನ್ನು ಕೈಚೆಲ್ಲುವುದಿಲ್ಲ. ಆತ ಯಾವಾಗಲೂ ನಾನು ವಿರಾಟ್​ ಭಯ್ಯಾ ಅವರಂತೆ ಕ್ರಿಕೆಟರ್​ ಆಗುಬೇಕು ಎನ್ನುತ್ತಿರುತ್ತಾರೆ ಎಂದು ನಗರ್​ ಹೇಳಿದ್ದಾರೆ.

ಆದರೆ, ನಾಯಕತ್ವದ ವಿಚಾರದಲ್ಲಿ ಅವರು ಧೋನಿಯಂತೆ ಶಾಂತತೆ ಮತ್ತು ಸಂಯೋಜನೆಯನ್ನು ಹೊಂದಿದ್ದಾರೆ. ಆತ ಕೂಡ ತನ್ನ ಸಹ ಆಟಗಾರರನ್ನು ಬೆಂಬಲಿಸುತ್ತಾರೆ, ಯಾವಾಗಲೂ ಅವರ ಬೆನ್ನಿಗೆ ನಿಲ್ಲುತ್ತಾರೆ ಮತ್ತು ಸಲಹೆ ನೀಡುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಅವನು ತುಂಬಾ ತಾಳ್ಮೆ ವಹಿಸುತ್ತಾನೆ. ಹಾಗಾಗಿ, ಯಶ್,​ ಧೋನಿ ಮತ್ತು ವಿರಾಟ್​ ಕೊಹ್ಲಿ ಸಂಯೋಜನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಐಸಿಸಿ U19 ವಿಶ್ವಕಪ್ 'ಅತ್ಯಂತ ಮೌಲ್ಯಯುತ ತಂಡ'ಕ್ಕೆ ಯಶ್​ ಧುಲ್ ನಾಯಕ, 3 ಭಾರತೀಯರಿಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.