ETV Bharat / sports

ರೋ'ಹಿಟ್'​ ಅಬ್ಬರ: ಸಚಿನ್​ ದಾಖಲೆ ಸರಿಗಟ್ಟಿದ ಶರ್ಮಾ; ಸಿಕ್ಸ್​ನಲ್ಲಿ ಎಬಿಡಿ ರೆಕಾರ್ಡ್​ ಉಡೀಸ್​

author img

By ETV Bharat Karnataka Team

Published : Nov 12, 2023, 4:11 PM IST

India vs Netherlands Match: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರೋಹಿತ್​ ಶರ್ಮಾ ಆಡಿದ ಅರ್ಧಶತಕದ ಇನ್ನಿಂಗ್ಸ್​ನಲ್ಲಿ ಹಲವಾರು ದಾಖಲೆಗಳು ನಿರ್ಮಾಣ ಆಗಿವೆ. ಅವುಗಳ ಪಟ್ಟಿ ಇಂತಿದೆ.

Rohit Sharma records
ಸಚಿನ್​ ದಾಖಲೆ ಸರಿಗಟ್ಟಿದ ಶರ್ಮಾ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಟೀಮ್ ಇಂಡಿಯಾ ಒತ್ತಡ ರಹಿತವಾಗಿ ಡಚ್ಚರ ವಿರುದ್ಧ ಆಡುತ್ತಿದೆ. 2023ರ ವಿಶ್ವಕಪ್​ನ ಕೊನೆಯ ಲೀಗ್​ ಪಂದ್ಯವನ್ನು ರೋಹಿತ್​ ಪಡೆ ನೆದರ್ಲೆಂಡ್ಸ್​ ವಿರುದ್ಧ ಆಡುತ್ತಿದೆ. ಇದು ಎರಡೂ ತಂಡಕ್ಕೆ ಔಪಚಾರಿಕ, ಆದ್ದರಿಂದ ಫಲಿತಾಂಶದಿಂದ ಯಾವುದೇ ತಂಡಕ್ಕೆ ಲಾಭ - ನಷ್ಟ ಉಂಟಾಗುವುದಿಲ್ಲ. ಭಾರತ ಟೇಬಲ್​ ಟಾಪ್​ ತಂಡವಾಗಿ ಸೆಮೀಸ್​ ಪ್ರವೇಶಿಸಿದ್ದು, ನ. 15 ರಂದು ಕಿವೀಸ್ ವಿರುದ್ಧ ಮುಂಬೈನಲ್ಲಿ ಸೆಣಸಲಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಟೀಮ್​ ಇಂಡಿಯಾ ಉತ್ತಮ ಆರಂಭವನ್ನು ಪಡೆಯಿತು. ಅರ್ಧಶತಕ ಗಳಿಸಿ ಇಬ್ಬರು ಆರಂಭಿಕರು ವಿಕೆಟ್​ ಕೊಟ್ಟರು. ಶುಭಮನ್​ ಗಿಲ್​ 51 ರನ್​ ಮಾಡಿದರೆ, ರೋಹಿತ್​ ಶರ್ಮಾ 61 ರನ್​ ಔಟ್​ ಆದರು. ಇನ್ನಿಂಗ್ಸ್​ನಲ್ಲಿ ರೋಹಿತ್ 8 ಬೌಂಡರಿ ಮತ್ತು 2 ಸಿಕ್ಸ್​ ಬಾರಿಸಿದ್ದಾರೆ.

100 ಅರ್ಧಶತಕ: ನೆದರ್ಲೆಂಡ್ಸ್​ ವಿರುದ್ಧ ನಡೆಯುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಭಾರತ ತಂಡ ನಾಯಕ ರೋಹಿತ್​ ಶರ್ಮಾ ಶತಕ ಅರ್ಧಶತಕ ಗಳಿಸಿದ ದಾಖಲೆ ಮಾಡಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ ಬ್ಯಾಟ್​ನಿಂದ ನೂರನೇ ಅರ್ಧಶತಕ ದಾಖಲಾಗಿದೆ. ಏಕದಿನ ಕ್ರಿಕೆಟ್​ನಲ್ಲಿ 55ನೇ ಅರ್ಧಶತಕವನ್ನು ಇಂದು (ನ.12 ಭಾನುವಾರ) ಗಳಿಸಿದರು. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100ನೇ ಶತಕ ದಾಖಲಾಯಿತು. ರೋಹಿತ್​ ಟೆಸ್ಟ್​ನಲ್ಲಿ 16 ಮತ್ತು ಟಿ 20 29 ಅರ್ಧಶತಕ ಗಳಿಸಿದ್ದಾರೆ.

  • Rohit Sharma today:

    First Indian captain to score 500 runs in a World Cup edition.

    2nd player after Sachin to score 500+ runs in an edition twice.

    - The GOAT of the World Cups. pic.twitter.com/Hx60J9l47o

    — Mufaddal Vohra (@mufaddal_vohra) November 12, 2023 " class="align-text-top noRightClick twitterSection" data=" ">

ಸಿಕ್ಸ್​ನಲ್ಲಿ ದಾಖಲೆ: ಈ ವರ್ಷ ಒಂದರಲ್ಲೇ ರೋಹಿತ್ ​ಶರ್ಮಾ 59 ಸಿಕ್ಸ್​ ಬಾರಿಸಿದ್ದಾರೆ. ಎಬಿ ಡಿ ವಿಲಿಯರ್ಸ್​ 58 ಸಿಕ್ಸ್​ ಗಳಿಸಿದ್ದು, ಈ ಹಿಂದಿನ ದಾಖಲೆ ಆಗಿತ್ತು. ಇದನ್ನು ರೋಹಿತ್​ ಶರ್ಮಾ ನೆದರ್ಲೆಂಡ್ಸ್​ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ಸಿಕ್ಸ್​ ಬಾರಿಸುವ ಮೂಲಕ ಈ ದಾಖಲೆ ಮಾಡಿದ್ದಾರೆ.

ವಿಶ್ವಕಪ್​ ಅಧಿಕ ರನ್​ ಗಳಿಸಿಕ ನಾಯಕ: ಡಚ್ಚರ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ ಅರ್ಧಶತಕ ಗಳಿಸುವ ಮೂಲಕ ವಿಶ್ವಕಪ್​ನಲ್ಲಿ 500 ರನ್​ಗಳ ಗಡಿ ದಾಟಿದ್ದಾರೆ. ವಿಶ್ವಕಪ್​ನಲ್ಲಿ ನಾಯಕರಾಗಿ 500 ಗಡಿ ದಾಟಿದ ಮೊದಲ ನಾಯಕ ಎಂಬ ಖ್ಯಾತಿ ಗಳಿಸಿದ್ದಾರೆ. 2003 ವಿಶ್ವಕಪ್​ನಲ್ಲಿ ಸೌರವ್​ ಗಂಗೂಲಿ ಗಳಿಸಿದ್ದ 465 ರನ್​ ವಿಶ್ವಕಪ್​ನಲ್ಲಿ ಈವರೆಗೆ ನಾಯಕ ಗಳಿಸಿದ ಅತಿ ಹೆಚ್ಚಿನ ರನ್​ ಆಗಿತ್ತು.

  • " class="align-text-top noRightClick twitterSection" data="">

ಸಚಿನ್​ ದಾಖಲೆ ಸರಿಗಟ್ಟಿದ ಶರ್ಮಾ: ವಿಶ್ವಕಪ್​ನಲ್ಲಿ ಎರಡು ಬಾರಿ 500ಕ್ಕೂ ಹೆಚ್ಚು ರನ್​ ಗಳಿಸಿದ ದಾಖಲೆಯಲ್ಲಿ ರೋಹಿತ್​ ಸಚಿನ್​ ಅವರನ್ನು ಸಮ ಮಾಡಿದ್ದಾರೆ. ಸಚಿನ್​ ತೆಂಡೂಲ್ಕರ್​ 1996 ಮತ್ತು 2003ರ ವಿಶ್ವಕಪ್​ನಲ್ಲಿ 500ಕ್ಕೂ ಹೆಚ್ಚಿನ ರನ್​ ಕಲೆಹಾಕಿದ್ದರು. ರೋಹಿತ್​ ಶರ್ಮಾ ಕಳೆದ 2019 ವಿಶ್ವಕಪ್​ ಮತ್ತು ಪ್ರಸ್ತುತ ವಿಶ್ವಕಪ್​ನಲ್ಲಿ 500 ರನ್​ ಮೀರಿದ್ದಾರೆ.

ಆರಂಭಿಕರಾಗಿ 14,000 ರನ್ ಗಡಿಯನ್ನು ರೋಹಿತ್​ ಶರ್ಮಾ ಪೂರೈಸಿದ್ದಾರೆ. ಅಲ್ಲದೇ ಈ ವರ್ಷ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ 5 ಬಾರಿ 100+ ರನ್​ಗಳ ಪಾಲುದಾರಿಕೆಯನ್ನು ಆರಂಭಿಕರಾಗಿ ಮಾಡಿದ್ದಾರೆ.

ಇದನ್ನೂ ಓದಿ: ಟಾಸ್​ ಗೆದ್ದು ಉತ್ತಮ ಆರಂಭ ಪಡೆದ ರೋಹಿತ್​ ಪಡೆ; ಅರ್ಧಶತಕ ಗಳಿಸಿ ಗಿಲ್​ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.