ETV Bharat / sports

ರನೌಟ್​ ಮಾಡುವಾಗ ಚೇಷ್ಟೆ ಮಾಡಿ ನಾಯಕನಿಂದ ಬೈಸಿಕೊಂಡ ಪಂತ್: ವಿಡಿಯೋ

author img

By

Published : Aug 7, 2022, 2:28 PM IST

ಮೈದಾನದಲ್ಲಿದ್ದಾಗ ರಿಷಬ್​ ಪಂತ್​ ಚೇಷ್ಟೆ ಮಾಡುವುದು ಸಹಜ. ಅದು ಬಿಗುವಿನ ಪರಿಸ್ಥಿತಿ ಇದ್ದರೂ ಸರಿ. ವಿಂಡೀಸ್​ ವಿರುದ್ಧದ 4ನೇ ಟಿ20ಯಲ್ಲಿ ಹೀಗೆ ಮಾಡಲು ಹೋಗಿ ನಾಯಕ ರೋಹಿತ್​ ಕೋಪಕ್ಕೆ ತುತ್ತಾಗಿದ್ದಾರೆ.

captain-rohit-sharma-furious-on-rishab-pant
ರನೌಟ್​ ಮಾಡುವಾಗ ಚೇಷ್ಟೆ ಮಾಡಿ ನಾಯಕನಿಂದ ಬೈಸಿಕೊಂಡ ಪಂತ್

ವೆಸ್ಟ್​ ಇಂಡೀಸ್​ ಮತ್ತು ಭಾರತ ನಡುವಿನ 4ನೇ ಟಿ20 ಪಂದ್ಯದಲ್ಲಿ ವಿಕೆಟ್​ ಕೀಪರ್​ ರಿಷಬ್​ ಪಂತ್​ ಮೇಲೆ ನಾಯಕ ರೋಹಿತ್ ಶರ್ಮಾ ರನೌಟ್​ ವಿಚಾರದಲ್ಲಿ ಸಿಟ್ಟಾದ ಘಟನೆ ನಡೆಯಿತು. ವಿಂಡೀಸ್​ನ ನಿಕೋಲಸ್​ ಪೂರನ್​ ಮತ್ತು ಕೈಲ್​ ಮೇಯರ್ಸ್​ ಬಿರುಸಾದ ಬ್ಯಾಟ್ ಬೀಸುತ್ತಿದ್ದರು. ಈ ವೇಳೆ ಅಕ್ಸರ್​ ಪಟೇಲ್​ ಬೌಲಿಂಗ್​ನಲ್ಲಿ ರನ್​ ಗಳಿಸಲು ಪೂರನ್​ ಕವರ್​ ಪಾಯಿಂಟ್​ನಲ್ಲಿ ಚೆಂಡನ್ನು ತಳ್ಳಿ ಒಂಟಿ ರನ್​ಗಾಗಿ ಓಡಿದರು.

ಈ ವೇಳೆ ಅಲ್ಲಿಯೇ ಇದ್ದ ಸಂಜು ಸ್ಯಾಮ್ಸನ್​ ಚುರುಕಾದ ಕ್ಷೇತ್ರರಕ್ಷಣೆ ಮಾಡಿ ಚೆಂಡನ್ನು ವಿಕೆಟ್​ ಹಿಂದಿದ್ದ ರಿಷಬ್​ ಪಂತ್​ಗೆ ಎಸೆದರು. ಸಮನ್ವಯ ಕೊರತೆಯಿಂದ ಪೂರನ್​ ಪಿಚ್​ ದಾಟಿ ಮುಂದೆ ಸಾಗಿದ್ದರು. ಇದರಿಂದ ಸುಲಭವಾಗಿ ರನೌಟ್​ ಆಗುವಂತಿತ್ತು. ಈ ವೇಳೆ ರಿಷಬ್​ ಪಂತ್​ ಬಾಲನ್ನು ವಿಕೆಟ್​ಗೆ ತಾಗಿಸದೇ ತಮಾಷೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಅಲ್ಲಿಗೆ ಓಡಿ ಬಂದ ರೋಹಿತ್​ ಶರ್ಮಾ ಔಟ್​ ಮಾಡುವಂತೆ ಗದರಿಸಿದರು. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿಕೋಲಸ್​ ಪೂರನ್​ 2 ಭರ್ಜರಿ ಸಿಕ್ಸರ್​​ ಸಿಡಿಸಿ ಆಕ್ರಮಣಕಾರಿಯಾಗುವ ಸುಳಿವು ನೀಡಿದ್ದರು. ಔಟಾಗುವ ಅವಕಾಶ ಬಂದಾಗ ಪಂತ್​ ಚೇಷ್ಟೆ ಮಾಡಿದ್ದು ನಾಯಕನಿಗೆ ಸ್ವಲ್ಪ ಕೋಪ ತರಿಸಿತು. ಪಂದ್ಯದಲ್ಲಿ ರಿಷಬ್​ ಪಂತ್​ ಭರ್ಜರಿ ಬ್ಯಾಟ್​ ಬೀಸಿ 44 ರನ್​ ಮಾಡಿದರು. ವೆಸ್ಟ್ ಇಂಡೀಸ್ ವಿರುದ್ಧ ಭಾರತ 59 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: WI vs IND 4th T20: ವಿಂಡೀಸ್​ ವಿರುದ್ಧ 59 ರನ್​ ವಿಕ್ರಮ; ಭಾರತದ ತೆಕ್ಕೆಗೆ ಸರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.