ETV Bharat / sports

17 ಸಾವಿರ ರನ್​ ಪೂರೈಸಿದ ರೋಹಿತ್​ ಶರ್ಮಾ, ಆಸಿಸ್​ ವಿರುದ್ಧ ಪೂಜಾರ ದ್ವಿಸಹಸ್ರ ರನ್​

author img

By

Published : Mar 11, 2023, 4:17 PM IST

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 17000 ರನ್​ ಪೂರೈಸಿದ ನಾಯಕ ರೋಹಿತ್ ಶರ್ಮಾ - ಆಸಿಸ್​ ವಿರುದ್ಧ 2000 ಗಳಿಸಿದ ಪೂಜಾರ - ಟೆಸ್ಟ್​ನ ಎರಡನೇ ಶತಕ ಗಳಿಸಿದ ಶುಭವನ್​ ಗಿಲ್​

Etv Bharat
17 ಸಾವಿರ ರನ್​ ಪೂರೈಸಿದ ರೋಹಿತ್​ ಶರ್ಮಾ, ಆಸಿಸ್​ ವಿರುದ್ಧ ಪೂಜಾರ ದ್ವಿಸಹಸ್ರ ರನ್​

ಅಹಮದಾಬಾದ್​: ಆಸಿಸ್​ ವಿರುದ್ಧದ ನಾಲ್ಕನೇ ಟೆಸ್ಟ್​ನಲ್ಲಿ ಭಾರತದ ನಾಯಕ ರೋಹಿತ್​ ಶರ್ಮಾ ಮತ್ತು ಚೇತೇಶ್ವರ ಪೂಜಾರ ವಿಶಿಷ್ಟ ದಾಖಲೆಗಳನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಜೀವನದಲ್ಲಿ 17,000 ರನ್​ ರೋಹಿತ್​ ಪೂರೈಸಿದರೆ, ಚೇತೇಶ್ವರ ಪೂಜಾರ ಆಸಿಸ್​ ವಿರುದ್ಧ 2000 ರನ್​ ಗಳಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ 2023 ರ ನಾಲ್ಕನೇ ಪಂದ್ಯದಲ್ಲಿ 21 ರನ್ ಗಳಿಸಿದ ಭಾರತೀಯ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17000 ರನ್ ಮಾಡಿದ ದಾಖಲೆ ಮಾಡಿದರು. ಈ ಘಟ್ಟ ತಲುಪಿದ ಭಾರತದ 7 ನೇ ಆಟಗಾರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 28 ನೇ ಆಟಗಾರರಾಗಿದ್ದಾರೆ.

ರೋಹಿತ್ ಶರ್ಮಾ ಮೊದಲು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು ತಮ್ಮ ವೃತ್ತಿಜೀವನದಲ್ಲಿ 664 ಪಂದ್ಯಗಳಲ್ಲಿ 48.52 ರ ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದು, 34,357 ರನ್ ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ 34,357
ವಿರಾಟ್ ಕೊಹ್ಲಿ 25,047*
ರಾಹುಲ್ ದ್ರಾವಿಡ್ 24,208
ಸೌರವ್ ಗಂಗೂಲಿ 18,575
ಎಂಎಸ್ ಧೋನಿ 17,266
ವೀರೇಂದ್ರ ಸೆಹ್ವಾಗ್ 17,253
ರೋಹಿತ್ ಶರ್ಮಾ 17,000*

ರೋಹಿತ್​ ಶರ್ಮಾ ಅವರು ವೃತ್ತಿಜೀವನದ 438 ನೇ ಪಂದ್ಯವನ್ನು ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 42.95ರ ಸರಾಸರಿಯಲ್ಲಿ ಶರ್ಮಾ ರನ್​ ಗಳಿಸುತ್ತಿದ್ದಾರೆ. ಎಲ್ಲಾ ಮಾದರಿಯಿಂದ 43 ಶತಕ ಹಾಗೂ 91 ಅರ್ಧಶತಕ ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 264 ರನ್​ ಗಳಿಸಿರುವುದು ಈ ಮಾದರಿಯ ಕ್ರಿಕೆಟ್​ನ ದಾಖಲೆಯ ರನ್​ ಆಗಿದೆ.

35ಕ್ಕೆ ರೋಹಿತ್​ ಔಟ್​: 35 ರನ್​ ಗಳಿಸಿದ್ದ ರೋಹಿತ್​ ಶರ್ಮಾ ಅವರನ್ನು ಮ್ಯಾಥ್ಯೂ ಕುಹ್ನೆಮನ್ ಔಟ್​ ಮಾಡಿದರು. 58 ಎಸೆತದಲ್ಲಿ 3 ಬೌಂಡರಿ ಮತ್ತು 1 ಸಿಕ್ಸ್​ನಿಂದ 35 ರನ್​ ಗಳಿಸಿದ್ದರು. ರೋಹಿತ್​ ವಿಕೆಟ್​ ನಂತರ ಬಂದ ಪೂಜಾರ ಗಿಲ್​ ಜೊತೆಗೆ 113 ರನ್​ನ ಜೊತೆಯಾಟವಾಡಿದರು.

ಆಸಿಸ್​ ವಿರುದ್ಧ 2,000 ರನ್​ ಪೂರೈಸಿದ ಪೂಜಾರ: ಭಾರತ-ಆಸಿಸ್​ನ ಪ್ರತಿಷ್ಠಿತ ಸರಣಿಯಾಗಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಚೇತೇಶ್ವರ ಪೂಜಾರ 2000 ರನ್​ ಗಳಿಸಿದ್ದಾರೆ. ಈ ರನ್​ ದಾಖಲಿಸಿದ ಭಾರತದ ನಾಲ್ಕನೇ ಬ್ಯಾಟರ್​ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಭಾರತದ ದಿಗ್ಗಜ ಆಟಗಾರರ ಪಟ್ಟಿಗೆ ಪೂಜಾರ ಸೇರ್ಪಡೆಯಾದರು.

ಪೂಜಾರಕ್ಕಿಂತ ಮೊದಲು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಈ ಮೈಲಿಗಲ್ಲನ್ನು ತಲುಪಿದ್ದರು. ಪ್ರಸ್ತುತ ಈಗ ಮೂವರು ಕ್ರಿಕೆಟಿಗರು ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ರೋಹಿತ್​ ವಿಕೆಟ್​ ನಂತರ ಕ್ರೀಸ್​ಗೆ ಬಂದ ಚೇತೇಶ್ವರ ಪೂಜಾರ 42 ರನ್​ ಗಳಿಸಿದರು. ಆರಂಭಿಕ ಶುಭಮನ್​ ಗಿಲ್​ ಜೊತೆಗೆ ಶತಕ (113) ರನ್​ನ ಜೊತೆಯಾಟ ಮಾಡಿದರು.

ಇದನ್ನೂ ಓದಿ: ಅಹಮದಾಬಾದ್​ ಟೆಸ್ಟ್​: ಗಿಲ್​ ಶತಕ, ಟೀ ಸೆಷನ್​ ವೇಳೆಗೆ ಭಾರತ 188/2

ETV Bharat Logo

Copyright © 2024 Ushodaya Enterprises Pvt. Ltd., All Rights Reserved.