ETV Bharat / sports

ಎರಡು ಹಂತಗಳಲ್ಲಿ ರಣಜಿ ಪಂದ್ಯಗಳನ್ನ ಆಡಿಸಲು ನಿರ್ಧಾರ: ಬಿಸಿಸಿಐ

author img

By

Published : Jan 28, 2022, 12:23 PM IST

ಕಳೆದ ಬಾರಿ ರದ್ದಾಗಿದ್ದ ರಣಜಿ ಟ್ರೋಫಿ, ಈ ವರ್ಷವೂ ಮುಂದೂಡಿಕೆಯಾಗಿದ್ದು, ಎರಡು ಹಂತಗಳಲ್ಲಿ ಪಂದ್ಯಗಳನ್ನು ಆಡಿಸಲು ಬಿಸಿಸಿಐ ನಿರ್ಧಾರ ಮಾಡಿದೆ.

Ranji Trophy conducted in two phases: bcci
ಎರಡು ಹಂತಗಳಲ್ಲಿ ರಣಜಿ ಪಂದ್ಯಗಳನ್ನ ಆಡಿಸಲು ನಿರ್ಧಾರ: ಬಿಸಿಸಿಐ

ಮುಂಬೈ: ಕೊರೊನಾ ಕಾರಣಕ್ಕೆ ಮುಂದೂಡಿಕೆಯಾದ ರಣಜಿ ಟ್ರೋಫಿ ಪಂದ್ಯಾವಳಿಗಳನ್ನು ಎರಡು ಹಂತಗಳಲ್ಲಿ ಆಡಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ ಎಲ್ಲ ಲೀಗ್ ಪಂದ್ಯಗಳನ್ನು ಆಡಿಸಲಾಗುತ್ತದೆ. ಎರಡನೇ ಹಂತದಲ್ಲಿ ನಾಕೌಟ್ ಪಂದ್ಯಗಳನ್ನು ಜೂನ್​​ನಲ್ಲಿ ಆಡಿಸಲಾಗುತ್ತದೆ ಎಂದು ಜಯ್ ಶಾ ಹೇಳಿದ್ದು, ಕೊರೊನಾ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಬಿಸಿಸಿಐ ಕೊರೊನಾದಿಂದ ಉಂಟಾಗುವ ಯಾವುದೇ ರೀತಿಯ ದುಷ್ಪರಿಣಾಮವನ್ನು ತಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದ ಜಯ್ ಶಾ ರಣಜಿ ಟ್ರೋಫಿಯು ನಮ್ಮ ಅತ್ಯಂತ ಪ್ರತಿಷ್ಠಿತ ದೇಶೀಯ ಸ್ಪರ್ಧೆಯಾಗಿದ್ದು, ಟೀಂ ಇಂಡಿಯಾಗೆ ಪ್ರತಿಭೆಗಳನ್ನು ಒದಗಿಸಲು ಇದು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಳೆದ ಬಾರಿಯೂ ರಣಜಿ ಟ್ರೋಫಿ ಕೋವಿಡ್​ನಿಂದ ರದ್ದುಗೊಂಡಿದ್ದು, ಈ ಬಾರಿ ಜನವರಿಯಿಂದ ಟೂರ್ನಿ ಪ್ರಾರಂಭವಾಗಬೇಕಿತ್ತು. ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್ ಮತ್ತು ತಿರುವನಂತಪುರಂ ಸೇರಿ ಆರು ನಗರಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದವು.

ಇದನ್ನೂ ಓದಿ: ಎಸ್‌ಸಿ/ಎಸ್‌ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ವಿಚಾರ: ಮಾನದಂಡ ರೂಪಿಸಲು ಸುಪ್ರೀಂ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.