ETV Bharat / sports

ರಾಜವರ್ಧನ್​ ಹ್ಯಾಟ್ರಿಕ್​ ಸಿಕ್ಸರ್​ಗೆ 'ನಿಸಾನ್​ ಟೂರ್ನಿ ಶ್ರೇಷ್ಠ ಆಟ' ಗೌರವ

author img

By

Published : Feb 8, 2022, 8:03 PM IST

ನಾಯಕ ಯಶ್​ ಧುಲ್​, ಉಪನಾಯಕ ರಶೀದ್ ಸೇರಿದಂತೆ ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಇಳಿದಿತ್ತು. ಆರಂಭಿಕ ಬ್ಯಾಟರ್ ಅಂಗ್​ಕೃಶ್​​ ರಘವಂಶಿ(79) ಮತ್ತು ಹರ್ನೂರ್​ ಸಿಂಗ್(88) ಮೊದಲ ವಿಕೆಟ್​ಗೆ 164 ರನ್​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಇವರ ನಂತರ ಬಂದ ರಾಜ್ ಬಾವಾ 42, ನಾಯಕ ನಿಶಾಂತ್ ಸಿಂಧು 36 ರನ್​ಗಳಿಸಿ ಔಟಾಗಿದ್ದರು..

Rajvardhan Hangargekar
ರಾಜವರ್ಧನ್​ ಹಂಗರ್ಗೆಕರ್

ದುಬೈ : ಭಾರತ ಅಂಡರ್-19 ತಂಡದ​ ರಾಜವರ್ಧನ್​ ಹಂಗರ್ಗೆಕರ್ ​ಅವರಿಗೆ 2022ರ ಕಿರಿಯರ್ ವಿಶ್ವಕಪ್​ನ 2ನೇ ಲೀಗ್​ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಸಿಡಿಸಿದ ಆಟಕ್ಕೆ ನಿಸಾನ್​ ಟೂರ್ನಿ ಶ್ರೇಷ್ಠ ಪ್ರಶಸ್ತಿ ಗೌರವ ಒಲಿದು ಬಂದಿದೆ.

ನಾಯಕ ಯಶ್​ ಧುಲ್​, ಉಪನಾಯಕ ರಶೀದ್ ಸೇರಿದಂತೆ ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್‌ಗೆ ಇಳಿದಿತ್ತು. ಆರಂಭಿಕ ಬ್ಯಾಟರ್ ಅಂಗ್​ಕೃಶ್​​ ರಘವಂಶಿ(79) ಮತ್ತು ಹರ್ನೂರ್​ ಸಿಂಗ್(88) ಮೊದಲ ವಿಕೆಟ್​ಗೆ 164 ರನ್​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಇವರ ನಂತರ ಬಂದ ರಾಜ್ ಬಾವಾ 42, ನಾಯಕ ನಿಶಾಂತ್ ಸಿಂಧು 36 ರನ್​ಗಳಿಸಿ ಔಟಾಗಿದ್ದರು.

ಆದರೆ, ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ರಾಜವರ್ಧನ್​ 17 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು ಒಂದು ಬೌಂಡರಿ ಸಹಿತ 39 ರನ್​ಗಳಿಸಿದ್ದರು. ಅದರಲ್ಲೂ ಕೊನೆಯ ಓವರ್​ನಲ್ಲಿ ಐರ್ಲೆಂಡ್​ನ ಮುಜಾಮಿಲ್ ಶೆರಾಜ್​ ಅವರ ಓವರ್​ನಲ್ಲಿ ಮುಗಿಲೆತ್ತರದ 3 ಸಿಕ್ಸರ್​ಗಳ ಸಹಿತ 23 ರನ್​ ಚಚ್ಚಿದ್ದರು. ಈ ಆಟಕ್ಕೆ ಐಸಿಸಿ ನಿಸಾನ್​ ಪ್ಲೇ ಆಫ್​ ದ ಟೂರ್ನಮೆಂಟ್​ ಲಭಿಸಿದೆ.

ಭಾರತ ಆ ಪಂದ್ಯದಲ್ಲಿ 307 ರನ್​ಗಳಿಸಿದರೆ, ಇದಕ್ಕುತ್ತರವಾಗಿ ಐರ್ಲೆಂಡ್​ 133 ರನ್​ಗಳಿಗೆ ಆಲೌಟ್ ಆಗುವ ಮೂಲಕ 174 ರನ್​ಗಳಿಂದ ಸೋಲು ಕಂಡಿತ್ತು. ಭಾರತದ ಯುವ ಆಟಗಾರರು ಲೀಗ್​ನಲ್ಲಿ ಎಲ್ಲಾ ಮೂರು ಪಂದ್ಯ ಮತ್ತು ಕ್ವಾರ್ಟರ್​ನಲ್ಲಿ ಬಾಂಗ್ಲಾದೇಶ, ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಹಾಗೂ ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ 5ನೇ ಬಾರಿ ದೇಶಕ್ಕೆ ಕಿರಿಯರ ವಿಶ್ವಕಪ್ ತಂದುಕೊಟ್ಟಿತ್ತು.

ಇದನ್ನೂ ಓದಿ:ಕ್ರಿಕೆಟ್​ ಬಿಟ್ಟು ನಿಮ್ಮಪ್ಪನ ಜೊತೆ ಆಟೋ ಓಡಿಸ್ಕೊಂಡಿರು ಎಂದಿದ್ರು.. ಧೋನಿ ಮಾತು ನನ್ನಲ್ಲಿ ವಿಶ್ವಾಸ ತರಿಸಿದವು: ಸಿರಾಜ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.