ETV Bharat / sports

ಜೋಸ್​ ಬಟ್ಲರ್​ ಶತಕ.. ಮುಂಬೈ ಇಂಡಿಯನ್ಸ್​ಗೆ 194 ರನ್​ಗಳ ಗುರಿ ನೀಡಿದ ರಾಜಸ್ತಾನ ರಾಯಲ್ಸ್​

author img

By

Published : Apr 2, 2022, 5:37 PM IST

ಐಪಿಎಲ್​ನ 15 ನೇ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ ರಾಜಸ್ತಾನ ರಾಯಲ್ಸ್​ ತಂಡದ ಜೋಸ್ ಬಟ್ಲರ್​(100) ಬ್ಯಾಟಿಂಗ್​ ವೈಭವದಿಂದ ತಂಡ ಮುಂಬೈ ಇಂಡಿಯನ್ಸ್​ಗೆ 194 ರನ್​ಗಳ ಬೃಹತ್​ ಮೊತ್ತದ ಗುರಿ ನೀಡಿದೆ..

rajasthana-royals
ಜೋಸ್​ ಬಟ್ಲರ್

ಮುಂಬೈ : ಜೋಸ್​ ಬಟ್ಲರ್​ರ ಶತಕದ ನೆರವಿನಿಂದ ರಾಜಸ್ತಾನ ರಾಯಲ್ಸ್​ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 193 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ. ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡಿದ ರಾಯಲ್ಸ್​ ತಂಡ ಆರಂಭಿಕ ಆಘಾತ ಅನುಭವಿಸಿತು.

ಜೋಸ್​ ಬಟ್ಲರ್​ ಜೊತೆ ಕ್ರೀಸ್​ಗಿಳಿದ ಯಶಸ್ವಿ ಜೈಸ್ವಾಲ್​(1) ಒಂದಂಕಿ ಮೊತ್ತದಲ್ಲೇ ಔಟಾದರು. ಬಳಿಕ ಬಂದ ದೇವದತ್ತ ಪಡಿಕ್ಕಲ್​(7) ನಿರಾಶೆ ಮೂಡಿಸಿದರು. ಈ ವೇಳೆ, ಜೊತೆಯಾದ ನಾಯಕ ಸಂಜು ಸ್ಯಾಮ್ಸನ್​ (35) ಭರ್ಜರಿಯಾಗಿ ಬ್ಯಾಟ್​ ಬೀಸುವ ಮೂಲಕ ಬಟ್ಲರ್​ ಜೊತೆಗೂಡಿ 82 ರನ್‌ಗಳ ಜೊತೆಯಾಟವಾಡಿದರು. ಸ್ಯಾಮ್ಸನ್​ ಔಟಾದ ಬಳಿಕ ಕ್ರೀಸ್​ಗಿಳಿದ ವೆಸ್ಟ್​ ಇಂಡೀಸ್​ ದೈತ್ಯ ಶಿಮ್ರಾನ್​ ಹೆಟ್ಮಾಯರ್​ 14 ಎಸೆತಗಳಲ್ಲಿ 35 ರನ್​ ಸಿಡಿಸಿದರು. ಇದರಲ್ಲಿ 3 ಸಿಕ್ಸರ್​, 3 ಬೌಂಡರಿ ಇದ್ದವು.

ಸೀಸನ್​ನ ಮೊದಲ ಶತಕ ಸಿಡಿಸಿದ ಬಟ್ಲರ್ ​: ಇನ್ನು ಇನಿಂಗ್ಸ್​ ಆರಂಭದಿಂದಲೇ ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆವರಿಳಿಸಿದ ಜೋಸ್​ ಬಟ್ಲರ್​ ಈ ಸೀಸನ್​ ಮೊದಲ ಶತಕ ಸಾಧನೆ ಮಾಡಿದರು. 68 ಎಸೆತಗಳಲ್ಲಿ ಬರೋಬ್ಬರಿ 100 ರನ್​ ಗಳಿಸುವ ಮೂಲಕ ತಂಡ ಬೃಹತ್​ ಪೇರಿಸಲು ನೆರವಾದರು. ಬಟ್ಲರ್​ ಇನಿಂಗ್ಸ್​ಲ್ಲಿ 5 ಸಿಕ್ಸರ್​, 11 ಬೌಂಡರಿ ಇದ್ದವು.

ಬೂಮ್ರಾ ಮ್ಯಾಜಿಕ್​ : ಮುಂಬೈ ಬೌಲರ್​ಗಳು ಬಟ್ಲರ್​ ಅಬ್ಬರಕ್ಕೆ ಸುಸ್ತಾದರೆ ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬೂಮ್ರಾ 3 ಪ್ರಮುಖ ವಿಕೆಟ್​ಗಳನ್ನು ಉರುಳಿಸಿದರು. ಅದರಲ್ಲೂ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಜೋಸ್​ ಬಟ್ಲರ್​ ವಿಕೆಟ್​ ಪಡೆದು ಕಟ್ಟಿ ಹಾಕಿದರು.

ತಂಡದಲ್ಲಿ ಹೊಸದಾಗಿ ಸ್ಥಾನ ಪಡೆದ ಬಸಿಲ್​ ಥಂಪಿ ತಾವೆಸದ ಒಂದು ಓವರ್​ನಲ್ಲಿ 26 ರನ್​ ನೀಡಿ ದುಬಾರಿಯಾದರು. ಇದಲ್ಲದೇ, ಕೀರನ್​ ಪೋಲಾರ್ಡ್​ 4 ಓವರ್​ಗಳ ಕೋಟಾದಲ್ಲಿ 46 ರನ್​ ನೀಡಿದರು. ಕೊನೆಯಲ್ಲಿ ಟೈಮಲ್​ ಮಿಲ್ಸ್​ ಮಿಂಚುವ ಮೂಲಕ 3 ವಿಕೆಟ್​ ಪಡೆದರು.

ಓದಿ: 100 ಕಿಮೀ ವೇಗದಲ್ಲಿ ಸ್ಪಿನ್​ ಬೌಲ್​ ಮಾಡುವ ರಶೀದ್​ ಖಾನ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.