ETV Bharat / sports

ದಕ್ಷಿಣ ಆಫ್ರಿಕಾದಲ್ಲಿ 3 ದಶಕಗಳಿಂದ ಗೆಲ್ಲಲಾಗದಿರುವ ಟೆಸ್ಟ್​ ಸರಣಿ.. ಈ ಬಾರಿ ಕೊಹ್ಲಿ ಬಳಗದಿಂದ ಛಿದ್ರ: ರವಿಶಾಸ್ತ್ರಿ ಭವಿಷ್ಯ

author img

By

Published : Dec 23, 2021, 5:19 PM IST

Updated : Dec 23, 2021, 5:38 PM IST

ತಮ್ಮ ಶಕ್ತಿ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಲು ಇದಕ್ಕಿಂತ ಒಳ್ಳೆಯ ಸಮಯ ಭಾರತಕ್ಕೆ ಸಿಗುವುದಿಲ್ಲ. ವಿರಾಟ್​ ಕೊಹ್ಲಿ ಧೋಷರಹಿತ ನಾಯಕ ಮತ್ತು ಅವರು ತಮ್ಮ ಜೊತೆಗೆ ಪ್ರತಿಭಾನ್ವಿತ ತಂಡವನ್ನು ಹೊಂದಿದ್ದಾರೆ ಎಂದು ಮುಂಬರುವ ಸರಣಿಯ ಬಗ್ಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

former Indian Coach
ಭಾರತದ ಮಾಜಿ ಕೋಚ್​ ರವಿಶಾಸ್ತ್ರಿ

ಮುಂಬೈ: ತವರಿನಂಗಳದಲ್ಲಿ ದಕ್ಷಿಣ ಆಫ್ರಿಕಾ ಕಡೆಗಣಿಸುವ ತಂಡವಲ್ಲ, ಆದರೆ, ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮುಂಬರುವ 3 ಪಂದ್ಯಗಳ ಟೆಸ್ಟ್​ ಸರಣಿಯನ್ನೂ ಗೆಲ್ಲಲು ಬೇಕಾದಂತಹ ಸಾಮರ್ಥ್ಯವುಳ್ಳ ಆಟಗಾರರನ್ನು ಹೊಂದಿದೆ ಎಂದು ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್​ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಟಿ-20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್​ ಸ್ಥಾನದಲ್ಲಿ ತಮ್ಮ ಅವಧಿ ಪೂರ್ಣಗೊಳಿಸಿರುವ ರವಿಶಾಸ್ತ್ರಿ ತಾವೂ ಯಾವಾಗಲೂ ಟೀಮ್ ಇಂಡಿಯಾದ ಬೆನ್ನಿಗೆ ಇರಲಿದ್ದೇನೆ ಎಂದಿದ್ದಾರೆ.

"ತಮ್ಮ ಶಕ್ತಿ ಸಾಮರ್ಥ್ಯ ಸಾಬೀತುಪಡಿಸಲು ಇದಕ್ಕಿಂತ ಒಳ್ಳೆಯ ಸಮಯ ಭಾರತಕ್ಕೆ ಸಿಗುವುದಿಲ್ಲ. ವಿರಾಟ್​ ಕೊಹ್ಲಿ ಧೋಷರಹಿತ ನಾಯಕ ಮತ್ತು ಅವರು ತಮ್ಮ ಜೊತೆಗೆ ಪ್ರತಿಭಾನ್ವಿತ ತಂಡವನ್ನು ಹೊಂದಿದ್ದಾರೆ" ಎಂದು ಮುಂಬರುವ ಸರಣಿಯ ಬಗ್ಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಾತು ಮುಂದುವರಿಸಿ," ದಕ್ಷಿಣ ಆಫ್ರಿಕಾವು ಭಾರತೀಯರು ಜಯಿಸದ ಭದ್ರಕೋಟೆಯಾಗಿ ಉಳಿದಿದೆ. ನೆನಪಿರಲಿ, ಹರಿಣಗಳು ತವರಿನಲ್ಲಿ ತಮ್ಮದೇ ಆದ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಆ ತಂಡವನ್ನು ಸರಿದೂಗಿಸುವ ಸಾಮರ್ಥ್ಯವುಳ್ಳ ಮತ್ತು ತಂತ್ರಗಾರಿಕೆಯನ್ನು ನಾವು ಪಡೆದುಕೊಂಡಿದ್ದೇವೆ. ಎಂದಿನಂತೆ, ನನ್ನ ಬೆಂಬಲ ಟೀಮ್ ಇಂಡಿಯಾ ಯಾವಾಗಲೂ ಇರುತ್ತದೆ " ಎಂದು ಭಾರತದ ಮಾಜಿ ಕೋಚ್ ಹೇಳಿದ್ದಾರೆ.

ಈ ಪ್ರವಾಸದ ಮೊದಲ ಪಂದ್ಯ ಸೆಂಚುರಿಯನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಡಿಸೆಂಬರ್ 26ರಂದು ಆರಂಭವಾಗಲಿದೆ. ನಂತರ ಜೋಹಾನ್ಸ್​ಬರ್ಗ್ ಮತ್ತು ಕೇಪ್​ ಟೌನ್​ನಲ್ಲಿ ನಡೆಯಲಿದೆ. ಆ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

1992ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ಡರ್ಬನ್​ನಲ್ಲಿ ಮೊದಲ ಪಂದ್ಯವನ್ನಾಡಿತ್ತು. ರವಿಶಾಸ್ತ್ರಿ ಅವರ ನಂತರ ಭಾರತ ತಂಡದ ಕೋಚ್​ ಆಗಿರುವ ರಾಹುಲ್​ ದ್ರಾವಿಡ್​ ನಾಯಕನಾಗಿದ್ದ ಸಂದರ್ಭದಲ್ಲಿ ಹರಿಣಗಳ ನಾಡಿನಲ್ಲಿ ಭಾರತ ತಂಡದ 2006ರಲ್ಲಿ ಮೊದಲ ಪಂದ್ಯವನ್ನು ಜಯಿಸಿತ್ತು. ಇದೀಗ ಅವರ ಕೋಚಿಂಗ್​ನಲ್ಲಿ ಭಾರತ ಮೊದಲ ಸರಣಿಯನ್ನು ಗೆಲ್ಲುವ ಉತ್ಸಾಹದಲ್ಲಿದೆ.

ಭಾರತ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, 6 ಬಾರಿ ಸರಣಿ ಸೋಲು ಕಂಡಿದೆ. 2010-11ರಲ್ಲಿ ಧೋನಿ ನೇತೃತ್ವದಲ್ಲಿ ಮೊದಲ ಬಾರಿಗೆ ಸರಣಿ ಡ್ರಾ ಸಾಧಿಸಿತ್ತು. ಒಟ್ಟು 20 ಟೆಸ್ಟ್ ಪಂದ್ಯಗಳನ್ನಾಡಿದ್ದು, ಭಾರತ 3 ಪಂದ್ಯ ಗೆದ್ದಿದ್ದರೆ, 9 ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ಇದನ್ನೂ ಓದಿ:ಭಾರತ ತಂಡ ದಕ್ಷಿಣ ಆಫ್ರಿಕಾದ ಈ ಬೌಲರ್​ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಜಾಫರ್ ಸಲಹೆ​

Last Updated : Dec 23, 2021, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.