ETV Bharat / sports

ಪ್ಯಾಟ್​ ಕಮಿನ್ಸ್​ಗೆ ಮಾತೃ ವಿಯೋಗ: ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ ಆಸಿಸ್​ ಟೀಂ

author img

By

Published : Mar 10, 2023, 3:26 PM IST

ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪ್ಯಾಟ್​ ಕಮಿನ್ಸ್​ ತಾಯಿ ನಿನ್ನೆ ರಾತ್ರಿ ಸಿಡ್ನಿಯಲ್ಲಿ ವಿಧಿವಶ - ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ ಆಸಿಸ್​ ಟೀಂ - ಐಸಿಸಿಯಿಂದ ಮಾರಿಯಾ ಕಮಿನ್ಸ್​ಗೆ ಸಂತಾಪ

Pat Cummins mother passes away
ಪ್ಯಾಟ್​ ಕಮಿನ್ಸ್​ಗೆ ಮಾತೃ ವಿಯೋಗ

ಅಹಮದಾಬಾದ್ (ಗುಜರಾತ್): ದೀರ್ಘಕಾಲದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ಯಾಟ್ ಕಮಿನ್ಸ್ ಅವರ ತಾಯಿ ಮಾರಿಯಾ ಕಮಿನ್ಸ್ ಗುರುವಾರ ರಾತ್ರಿ ಸಿಡ್ನಿಯಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಅಹಮದಾಬಾದ್‌ನಲ್ಲಿ ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಮಿನ್ಸ್​ ತಾಯಿ ನಿಧನದ ಗೌರವಾರ್ಥವಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತೋಳಿಗೆ ಕಪ್ಪು ಪಟ್ಟಿ ಧರಿಸಿ ಇಂದು ಕಣಕ್ಕಳಿದಿದೆ.

"ರಾತ್ರೋರಾತ್ರಿ ಮಾರಿಯಾ ಕಮ್ಮಿನ್ಸ್ ಅವರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಆಸ್ಟ್ರೇಲಿಯನ್ ಕ್ರಿಕೆಟ್ ಪರವಾಗಿ, ಪ್ಯಾಟ್ ಕಮಿನ್ಸ್​, ಕಮಿನ್ಸ್​ ಕುಟುಂಬ ಮತ್ತು ಅವರ ಸ್ನೇಹಿತರಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಆಸ್ಟ್ರೇಲಿಯನ್ ಪುರುಷರ ತಂಡವು ಇಂದು ಗೌರವಾರ್ಥವಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಲಿದೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಐಸಿಸಿ ಟ್ವಿಟ್​ ಮಾಡಿ ಕಮಿನ್ಸ್​ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಟ್ವಿಟ್​ನಲ್ಲಿ "ಪ್ಯಾಟ್ ಕಮ್ಮಿನ್ಸ್ ಅವರ ತಾಯಿ ಮಾರಿಯಾ ಅವರ ನಿಧನಕ್ಕೆ ಪ್ಯಾಟ್​ ಮತ್ತು ಅವರ ಕುಟುಂಬಕ್ಕೆ ಸಂತಾಪ" ಎಂದು ಬರೆದುಕೊಂಡಿದೆ.

  • We are deeply saddened at the passing of Maria Cummins overnight. On behalf of Australian Cricket, we extend our heartfelt condolences to Pat, the Cummins family and their friends. The Australian Men's team will today wear black armbands as a mark of respect.

    — Cricket Australia (@CricketAus) March 10, 2023 " class="align-text-top noRightClick twitterSection" data=" ">

ಎರಡನೇ ಟೆಸ್ಟ್​ ನಂತರ ಆಸಿಸ್​ಗೆ ಮರಳಿದ್ದ ಕಮಿನ್ಸ್​: ಬಾರ್ಡರ್ - ಗವಾಸ್ಕರ್ ಸರಣಿಯ ಎರಡನೇ ಮತ್ತು ಮೂರನೇ ಟೆಸ್ಟ್​ ನಡುವೆ 9 ದಿನಗಳ ಅಂತರ ಇತ್ತು. ಈ ವೇಳೆ ಆಸಿಸ್​ ನಾಯಕ ಪ್ಯಾಟ್​ ಕಮಿನ್ಸ್​ ತಾಯಿಯ ಅನಾರೋಗ್ಯದ ಹಿನ್ನೆಲೆ ತವರಿಗೆ ಮರಳಿದ್ದರು. ಎರಡು ಟೆಸ್ಟ್​ ನಡುವೆ ಬಿಡುವಿದ್ದ ಕಾರಣ ಇಂದೋರ್​ನ ಟೆಸ್ಟ್​ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಮಿನ್ಸ್​ ತಾಯಿಯ ಅನಾರೋಗ್ಯ ಬಿಗಡಾಯಿಸಿದ ಕಾರಣ ಮೂರನೇ ಟೆಸ್ಟ್​ನಿಂದ ಹೊರಗುಳಿದಿದ್ದರು.

ಪ್ಯಾಟ್​ ಕಮಿನ್ಸ್​​ ಅನುಪಸ್ಥಿತಿಯಲ್ಲಿ ಮೂರನೇ ಟೆಸ್ಟ್​ನ ನಾಯಕತ್ವವನ್ನು ಸ್ಟೀವ್​ ಸ್ಮಿತ್​ಗೆ ವಹಿಸಿಕೊಡಲಾಗಿತ್ತು. ಮೂರನೇ ಟೆಸ್ಟ್​ನಲ್ಲಿ ಸ್ಮಿತ್​ ನಾಯಕತ್ವದಲ್ಲಿ ಇಂದೋರ್​ ಟೆಸ್ಟ್​ ಅನ್ನು ಆಸಿಸ್ ಗೆದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಪ್ರವೇಶ ಪಡೆದುಕೊಂಡಿತು. ಈ ಮೂಲಕ ಸರಣಿಯಲ್ಲಿ 1-2ರ ಜಯ ದಾಖಲಾಗಿತ್ತು.

ನಾಲ್ಕನೇ ಟೆಸ್ಟ್​ಗೆ ಕಮಿನ್ಸ್​ ತಂಡ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ತಾಯಿಯ ಅನಾರೋಗ್ಯ ಹೆಚ್ಚಾದ ಕಾರಣ, ನಾಲ್ಕನೇ ಟೆಸ್ಟ್​ನಿಂದಲೂ ದುರ ಉಳಿದಿದ್ದರು. ಈ ಕಾರಣ ನಾಲ್ಕನೇ ಟೆಸ್ಟ್​​ನ ಮುಂದಾಳತ್ವವೂ ಸ್ಟೀವ್​ ಸ್ಮಿತ್​ಗೆ ನೀಡಲಾಗಿತ್ತು. ಅಹಮದಾಬಾದ್​ನಲ್ಲಿ ನಿನ್ನೆಯಿಂದ ನಾಲ್ಕನೇ ಮತ್ತು ಸರಣಿಯ ಅಂತಿಮ ಟೆಸ್ಟ್​ ಪ್ರಾರಂಭವಾಗಿದ್ದು, ಆಸಿಸ್​ ಉತ್ತಮ ಮೊತ್ತವನ್ನು ಗಳಿಸಿದೆ.

ಆಸಿಸ್​ ಪರ ಇಬ್ಬರು ಬ್ಯಾಟರ್​ಗಳು ಶತಕ ಗಳಿಸಿದ್ದಾರೆ. ಆರಂಭಿಕ ಉಸ್ಮಾನ್​ ಖವಾಜಾ ಬ್ಯಾಟಿಂಗ್​ನಲ್ಲಿ ಹಿಡಿತ ಸಾಧಿಸಿದ್ದು, 180 ಗಳಿಸಿ ಔಟ್​ ಆದರು. ಕ್ಯಾಮೆರೂನ್​ ಗ್ರೀನ್​ ಸಹ 114 ರನ್​ ಗಳಿಸಿ ತಂಡ 400+ ರನ್​ ಗಳಿಸಲು ತಂಡಕ್ಕೆ ಸಹಕರಿಸಿದರು. ಎರಡನೇ ದಿನದ ದ್ವಿತೀಯ ಸೆಷನ್​ನಲ್ಲಿ ಭಾರತೀಯ ಬೌಲರ್​ಗಳು ತಮ್ಮ ಹಿಡಿತವನ್ನು ಸಾಧಿಸಿದರು. ಮತ್ತೆ ಆಸಿಸ್​ ಆಟಗಾರರು ಸ್ಪಿನ್ನರ್​ಗಳಿಗೆ ವಿಕೆಟ್​ ಒಪ್ಪಿಸಿದರು. ಅಶ್ವಿನ್​ ಇಂದಿನ ಎರಡನೇ ಅವಧಿಯಲ್ಲಿ ಮೂರು ವಿಕೆಟ್​ ಮತ್ತು ಅಕ್ಷರ್​ ಒಂದು ವಿಕೆಟ್​ ಪಡೆದರು. ಪ್ರಸ್ತುತ ಆಸಿಸ್​ 8 ವಿಕೆಟ್​ ಕಳೆದುಕೊಂಡು 422 ರನ್​ ಗಳಿಸಿ ಆಡುತ್ತಿದೆ.

ಇದನ್ನೂ ಓದಿ: ಅಹಮದಾಬಾದ್​ ಟೆಸ್ಟ್​: ದ್ವಿಶತಕದತ್ತ ಉಸ್ಮಾನ್‌, ಗ್ರೀನ್‌ ಶತಕದಾಟ, ಆಸೀಸ್‌ ಬಿಗಿಹಿಡಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.