ETV Bharat / sports

ಆಸೀಸ್​ ವಿರುದ್ಧದ ಸೆಮಿಫೈನಲ್​ಗೂ ಮುನ್ನವೇ ಪಾಕಿಸ್ತಾನದ ಇಬ್ಬರು ಆಟಗಾರರಿಗೆ ಜ್ವರ!

author img

By

Published : Nov 11, 2021, 1:33 AM IST

Pakistan's Malik, Rizwan suffer from flu
ಪಾಕಿಸ್ತಾನ ಆಟಗಾರರಿಗೆ ಜ್ವರ

ಸಮಾಧಾನಕರ ವಿಷಯವೆಂದರೆ ಇಬ್ಬರಿಗೂ ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್ ಬಂದಿದ್ದು, ನಾಳಿನ ಪಂದ್ಯಕ್ಕೂ ಮುನ್ನ ಫಿಟ್​ನೆಸ್​ ನೋಡಿ ಅವರಿಬ್ಬರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಪಿಸಿಬಿ ಮೀಡಿಯಾ ಮ್ಯಾನೇಜರ್ ತಿಳಿಸಿದ್ದಾರೆಂದು ವರದಿಗಳಿದು ಬಂದಿದೆ.

ದುಬೈ: ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್​ ಸೆಮಿಫೈನಲ್​ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅತ್ಯುತ್ತಮ ಫಾರ್ಮ್​​ನಲ್ಲಿರುವ ವಿಕೆಟ್​ ಕೀಪರ್​ ಬ್ಯಾಟರ್​ ಮೊಹಮ್ಮದ್ ರಿಜ್ವಾನ್​ ಮತ್ತು ಶೋಯಬ್​ ಮಲಿಕ್​ಗೆ ಜ್ವರ ಕಾಣಿಸಿಕೊಂಡಿದ್ದು ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿ ಪರಿಣಿಸಿದೆ.

ಎರಡನೇ ಸೆಮಿಫೈನಲ್​ ಪಂದ್ಯ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿದೆ. ವರದಿಗಳ ಪ್ರಕಾರ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ರಿಜ್ವಾನ್ ಹಾಗೂ ಕಳೆದ ಪಂದ್ಯದಲ್ಲಿ ಮಿಂಚಿದ್ದ ಅನುಭವಿ ಶೋಯಬ್ ಮಲಿಕ್ ಬುಧವಾರ ತಂಡ ಮಾಡುವ ಸಂದರ್ಭದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅವರಿಬ್ಬರಿಗೆ ​ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಪಿಸಿಬಿ ಮಾಧ್ಯಮ ವ್ಯವಸ್ಥಾಪಕ ಇಬ್ಬರು ಆಟಗಾರರಿಗೆ ಜ್ವರ ಇರುವುದನ್ನ ಖಾತ್ರಿ ಪಡಿಸಿದ್ದಾರೆ.

ಸಮಾಧಾನಕರ ವಿಷಯವೆಂದರೆ ಇಬ್ಬರಿಗೂ ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್ ಬಂದಿದ್ದು, ನಾಳಿನ ಪಂದ್ಯಕ್ಕೂ ಮುನ್ನ ಫಿಟ್​ನೆಸ್​ ನೋಡಿ ಅವರಿಬ್ಬರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಪಿಸಿಬಿ ಮೀಡಿಯಾ ಮ್ಯಾನೇಜರ್ ತಿಳಿಸಿದ್ದಾರೆಂದು ವರದಿಗಳಿದು ಬಂದಿದೆ.

ಮೊಹಮ್ಮದ್ ರಿಜ್ವಾನ್​ 2021ರಲ್ಲಿ ಅದ್ಭುತ ಫಾರ್ಮ್​ನಲ್ಲಿ ಟಿ20 ಕ್ರಿಕೆಟ್​ನಲ್ಲಿ 1650 ರನ್​ಗಳಿಸಿದ್ದಾರೆ. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​ನಲ್ಲಿ 5 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಿತ 214 ರನ್​ಗಳಿಸಿದ್ದಾರೆ. ಮಲಿಕ್ 3 ಇನ್ನಿಂಗ್ಸ್​ಗಳಿಂದ 99 ರನ್​ಗಳಿಸಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ 18 ಎಸೆತಗಳಲ್ಲಿ 54 ರನ್​ ಸಿಡಿಸಿದ್ದರು.

ಇದನ್ನೂ ಓದಿ:T20I world cup: ಇಂಗ್ಲೆಂಡ್ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಕಿವೀಸ್​

ಯಶಸ್ಸಿನ ಶಿಖರದಲ್ಲಿ ಕಿವೀಸ್: ಸತತ 3 ಐಸಿಸಿ ಟೂರ್ನಿಗಳಲ್ಲಿ ಫೈನಲ್​ ತಲುಪಿದ ವಿಲಿಯಮ್ಸನ್​ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.