ETV Bharat / sports

Asia Cup 2023: ಏಷ್ಯಾ ಕಪ್​ ರೀತಿಯಲ್ಲೇ ವಿಶ್ವಕಪ್​ನ್ನು ಹೈಬ್ರಿಡ್​ ಮಾದರಿಯಲ್ಲಿ ಆಡಬೇಕು: ಪಾಕಿಸ್ತಾನ ಕ್ರೀಡಾ ಸಚಿವ ಅಹ್ಸಾನ್ ಮಜಾರಿ

author img

By

Published : Jul 9, 2023, 7:44 PM IST

ಪಾಕಿಸ್ತಾನದ ಕ್ರೀಡಾ ಸಚಿವ ಅಹ್ಸಾನ್ ಮಜಾರಿ ವಿಶ್ವಕಪ್​ಅನ್ನು ಏಷ್ಯಾಕಪ್​ನಂತೆ ಹೈಬ್ರಿಡ್​ ಮಾದರಿಯಲ್ಲೇ ನಡೆಸಬೇಕು ಎಂದು ಹೇಳಿದ್ದಾರೆ.

Pakistan Sports minister on India playing Asia Cup at neutral venue
Pakistan Sports minister on India playing Asia Cup at neutral venue

ನವದೆಹಲಿ: ಭಾರತ ಆತಿಥ್ಯ ವಹಿಸಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅತ್ಯಂತ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ ಎಂಬಂತಾಗಿದೆ. ಶನಿವಾರ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು 2023 ರ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಭಾಗವಹಿಸುವಿಕೆಯ ಬಗ್ಗೆ ನಿರ್ಧರಿಸಲು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಇದೀಗ ಭಾನುವಾರ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಪಾಕಿಸ್ತಾನದ ಕ್ರೀಡಾ ಸಚಿವ ಅಹ್ಸಾನ್ ಮಜಾರಿ ಭಾರತಕ್ಕೆ ಹೋಗಿ ಆಡುವ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಹ್ಸಾನ್ ಮಜಾರಿ,"ನನ್ನ ವೈಯಕ್ತಿಕ ಅಭಿಪ್ರಾಯ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನನ್ನ ಸಚಿವಾಲಯದ ಅಡಿಯಲ್ಲಿ ಬರುವುದರಿಂದ, ಭಾರತವು ತಮ್ಮ ಏಷ್ಯಾಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಬೇಕೆಂದು ಒತ್ತಾಯಿಸಿದರೆ, ನಾವು ಭಾರತದಲ್ಲಿನ ನಮ್ಮ ವಿಶ್ವಕಪ್ ಪಂದ್ಯಗಳಿಗೂ ಅದೇ ಬೇಡಿಕೆಯನ್ನು ಇಡುತ್ತೇವೆ. ಸಮಿತಿಯ ನೇತೃತ್ವವನ್ನು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಹಿಸಲಿದ್ದಾರೆ. ಆ ಸಮಿತಿಯಲ್ಲಿ ಭಾಗವಾಗಿರುವ 11 ಸಚಿವರಲ್ಲಿ ನಾನಿದ್ದೇನೆ. ನಾವು ಸಮಸ್ಯೆ ಕುರಿತು ಚರ್ಚಿಸುತ್ತೇವೆ ಮತ್ತು ಪಿಸಿಬಿಯ ಪೋಷಕ-ಮುಖ್ಯಸ್ಥರೂ ಆಗಿರುವ ಪ್ರಧಾನಿಗೆ ನಮ್ಮ ಶಿಫಾರಸುಗಳನ್ನು ನೀಡುತ್ತೇವೆ. ಪ್ರಧಾನಮಂತ್ರಿಯವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದಿದ್ದಾರೆ.

  • Pakistan Sports minister said - "My personal opinion, since the PCB comes under my ministry, is that if India demands to play their Asia Cup games at a neutral venue, we should also demand the same for our World Cup games in India". (To Indian Express) pic.twitter.com/fBeuTErmYx

    — CricketMAN2 (@ImTanujSingh) July 9, 2023 " class="align-text-top noRightClick twitterSection" data=" ">

"ಪಾಕಿಸ್ತಾನ ಆತಿಥ್ಯ ವಹಿಸುತ್ತದೆ, ಪಾಕಿಸ್ತಾನದಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸುವ ಹಕ್ಕಿದೆ. ಕ್ರಿಕೆಟ್ ಪ್ರೇಮಿಗಳು ಬಯಸುವುದು ಅದನ್ನೇ, ನನಗೆ ಹೈಬ್ರಿಡ್ ಮಾದರಿ ಬೇಡ" ಎಂದು ಅವರು ಏಷ್ಯಾಕಪ್​ನ ಬಗ್ಗೆ ಮಾತನಾಡಿದರು.

"ಭಾರತವು ಕ್ರೀಡೆಯನ್ನು ರಾಜಕೀಯಕ್ಕೆ ತರುತ್ತದೆ. ಭಾರತ ಸರ್ಕಾರವು ಅವರ ಕ್ರಿಕೆಟ್ ತಂಡವನ್ನು ಇಲ್ಲಿಗೆ ಕಳುಹಿಸಲು ಏಕೆ ಬಯಸುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಕೆಲವು ಸಮಯದ ಹಿಂದೆ ಭಾರತದಿಂದ ಬೃಹತ್ ಬೇಸ್‌ಬಾಲ್ ತಂಡವು ಇಸ್ಲಾಮಾಬಾದ್‌ನಲ್ಲಿ ಆಡಲು ಬಂದಿತ್ತು. ಸುಮಾರು 60ಕ್ಕೂ ಹೆಚ್ಚು ಜನರಿದ್ದರು, ನಾನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದೆ. ಅವರು ಇಲ್ಲಿ ಗೆದ್ದು ಪ್ರಶಸ್ತಿಯನ್ನು ಗೆದ್ದು ಹೋದರು. ಪಾಕಿಸ್ತಾನದ ಫುಟ್‌ಬಾಲ್, ಹಾಕಿ ಮತ್ತು ಚೆಸ್ ತಂಡಗಳು ಸಹ ಭಾರತಕ್ಕೆ ಪ್ರಯಾಣಿಸುತ್ತವೆ" ಎಂದು ಮಜಾರಿ ಹೇಳಿದರು.

  • Pakistan sports minister said, "if India demands to play their Asia Cup games at a neutral venue, we would also demand the same for our World Cup games in India". (Indian Express). pic.twitter.com/JBVoyDMWGX

    — Mufaddal Vohra (@mufaddal_vohra) July 9, 2023 " class="align-text-top noRightClick twitterSection" data=" ">

"ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಬಂದು ಇತ್ತಿಚೆಗೆ ಕ್ರಿಕೆಟ್​ ಆಡಿವೆ. ಅವರಿಗೆ ಅಧ್ಯಕ್ಷರಿಗೆ ನೀಡುವ ಭದ್ರತೆ ಕೊಟ್ಟಿದ್ದೇವೆ. ಮೊನ್ನೆಯಷ್ಟೇ ಭಾರತ ತಂಡಕ್ಕೆ ಇಲ್ಲಿನ ಅಭಿಮಾನಿಗಳು ಅದ್ಧೂರಿ ಸ್ವಾಗತವನ್ನು ನೀಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಕೂಡ ನಡೆಸಿದ್ದೇವೆ. ಅದರಲ್ಲಿ ಅನೇಕ ವಿದೇಶಿ ಆಟಗಾರರು ಬಂದು ಆಡಿದ್ದಾರೆ, ಯಾರಿಗೂ ತೊಂದರೆ ಆಗಿಲ್ಲ. ಭದ್ರತೆ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ" ಎಂದು ಅವರು ಹೇಳಿದರು.

ವಿಶ್ವಕಪ್​ಗೆ ಕೆಲವೇ ದಿನ ಬಾಕಿ ಇದ್ದು, ಇನ್ನೂ ಪಾಕಿಸ್ತಾನದ ನಿರ್ಧಾರ ಅತಂತ್ರವಾಗಿದೆ. ಬಿಸಿಸಿಐ ಮತ್ತು ಐಸಿಸಿ ಈಗಾಗಲೇ ಏಕದಿನ ವಿಶ್ವಕಪ್​ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನ ತಂಡ ಭಾರತದ ಐದು ಕ್ರೀಡಾಂಗಣಗಳಲ್ಲಿ ಆಡಲಿದೆ. ಈ ಬಗ್ಗೆ ಚೆನ್ನೈ ಮತ್ತು ಬೆಂಗಳೂರು ಮೈದಾನದ ಬಗ್ಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಸೂಕ್ತ ಕಾರಣಗಳನ್ನು ನೀಡದ ಹಿನ್ನೆಲೆ ಮೈದಾನಗಳನ್ನು ಬದಲಾಯಿಸಿಲ್ಲ.

ಇದನ್ನೂ ಓದಿ: ಏಕದಿನ ವಿಶ್ವಕಪ್​: ಗಂಗೂಲಿ ಹೆಸರಿಸಿದ ಅಗ್ರ 4 ಬಲಿಷ್ಠ ತಂಡಗಳಿವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.