ETV Bharat / sports

Virat Kohli: ನನ್ನ ಸಂಪಾದನೆ ಬಗ್ಗೆ ಹರಿದಾಡುತ್ತಿರುವ ಅಂಕಿ ಅಂಶ ಸುಳ್ಳು: ವಿರಾಟ್​ ಕೊಹ್ಲಿ

author img

By

Published : Aug 12, 2023, 12:58 PM IST

Virat Kohli on reported social media earning: ಸಾಮಾಜಿಕ ಜಾಲತಾಣದಲ್ಲಿ ವಿರಾಟ್​ ಕೋಟಿ ಗಟ್ಟಲೆ ಸಂಪಾದಿಸುತ್ತಾರೆ ಎಂದು ಹಾಪರ್​ ಸಂಸ್ಥೆ ನೀಡಿರುವ ಅಂಕಿ - ಅಂಶ ಸುಳ್ಳು ಎಂದು ಸ್ವತಃ ಕೊಹ್ಲಿ ಸ್ಪಷ್ಟ ಪಡಿಸಿದ್ದಾರೆ.

Virat Kohli
ವಿರಾಟ್​ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಇನ್​ಸ್ಟಾಗ್ರಾಮ್​ ಒಂದು ಪೋಸ್ಟ್​ಗೆ ಗಳಿಸುವ ಮೊತ್ತ ಎಷ್ಟು ಗೊತ್ತೇ ಎಂದು ಹಾಪರ್​ ಎಂಬ ಸಂಸ್ಥೆ ನೀಡಿದ ಅಂಕಿ ಅಂಶದ ಮೇಲೆ ಕಳೆದೆರಡು ದಿನ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಸ್ವತಃ ವಿರಾಟ್​ ಪ್ರತಿಕ್ರಿಯಿಸಿದ್ದು, ಅದು ಸರಿಯಾದ ಅಂಕಿ ಅಂಶ ಅಲ್ಲ ಸುಳ್ಳು ಎಂದು ಹೇಳಿಕೊಂಡಿದ್ದಾರೆ.

ಸುಮಾರು 256 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿರುವ ವಿರಾಟ್​ ವಿಶ್ವದ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು. ಕಿಂಗ್​ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತುಂಬಾ ಆ್ಯಕ್ಟೀವ್​ ಆಗಿರುತ್ತಾರೆ. ಜಾಹೀರಾತು ಸಂಬಂಧಿತ ಪೋಸ್ಟ್​ಗಳು, ವಿಶೇಷ ಸಂದರ್ಭಗಳ ಬಗ್ಗೆ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ತಮ್ಮ ದಿನದ ಕೆಲ ಸಮಯದ ಬಗ್ಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವ ಚಿತ್ರಗಳನ್ನು ಪೊಸ್ಟ್​ ಮಾಡುತ್ತಾರೆ. ಹಾಗೇ ಪತ್ನಿ ಅನುಷ್ಕಾ ಅವರ ಜೊತೆ ಹೊರಗಡೆ ಟ್ರಿಪ್​ಗಳನ್ನು ಮಾಡಿದಾಗ ವಿಶೇಷ ಕ್ಷಣದ ಪೋಟೋವನ್ನು ಹಂಚಿಕೊಳ್ಳುತಾರೆ.

  • While I am grateful and indebted to all that I’ve received in life, the news that has been making rounds about my social media earnings is not true. 🙏

    — Virat Kohli (@imVkohli) August 12, 2023 " class="align-text-top noRightClick twitterSection" data=" ">

ಹಾಪರ್​ ಎಂಬ ಸಂಸ್ಥೆ ವಿರಾಟ್​ ಈ ರೀತಿ ತಮ್ಮ ಇನ್​ಸ್ಟಾಗ್ರಾಮ್​ನ ಖಾತೆಯಲ್ಲಿ ಹಂಚಿಕೊಳ್ಳುವ ಫೋಟೋ ಒಂದಕ್ಕೆ 11 ಕೋಟಿ ರೋಪಾಯಿ ಗಳಿಸುತ್ತಾರೆ. ಅವರು ಕ್ರೀಡಾ ಪಟುಗಳ ಪಟ್ಟಿಯಲ್ಲಿ ಮೂರನೇ ಅತಿ ಹೆಚ್ಚು ಸಂಪಾದಿಸುವ ಆಟಗಾರ, ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಪೋಸ್ಟ್​ಗೆ 26.7 ಕೋಟಿ ಮತ್ತು ಲಿಯೊನೆಲ್‌ ಮೆಸ್ಸಿ 21.5 ಕೋಟಿ ಗಳಿಸುತ್ತಾರೆ ಎಂದು ವರದಿ ಮಾಡಿತ್ತು. ಇದರ ಆಧಾರದಲ್ಲಿ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು.

ಈಗ ವಿರಾಟ್​ ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿದ್ದು, ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವ ಸುದ್ದಿ ಸುಳ್ಳೆಂದು ಎಕ್ಸ್​ ಆ್ಯಪ್​ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಎಕ್ಸ್​ ಆ್ಯಪ್​ ಖಾತೆಯಲ್ಲಿ "ನಾನು ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ, ನನ್ನ ಸಾಮಾಜಿಕ ಮಾಧ್ಯಮ ಗಳಿಕೆಯ ಬಗ್ಗೆ ಸುತ್ತುತ್ತಿರುವ ಸುದ್ದಿ ನಿಜವಲ್ಲ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಾಮಾಜಿಕ ಜಾಲತಾಣದಿಂದ ಅಷ್ಟು ಸಂಪಾದನೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವೆಸ್ಟ್​ ಇಂಡೀಸ್​ನ ಪ್ರವಾಸ ಮುಗಿಸಿರುವ ವಿರಾಟ್​ ಆಗಸ್ಟ್​​ 30ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್​ ಮತ್ತು 2023ರ ವಿಶ್ವಕಪ್​ನ ಸಿದ್ಧತೆಯಲ್ಲಿದ್ದಾರೆ. ವಿಶ್ವಕಪ್​ ಭಾರತದಲ್ಲಿ ಅಕ್ಟೋಬರ್​ 5 ರಿಂದ ನವೆಂಬರ್​ 19ರ ವರೆಗೆ ನಡೆಯಲಿದೆ. ವಿಶ್ವಕಪ್​ ನಡುವೆ ಆಸ್ಟ್ರೇಲಿಯಾದ ಜೊತೆಗೆ ಏಕದಿನ ಸರಣಿಯನ್ನು ವಿರಾಟ್​ ಆಡಲಿದ್ದಾರೆ. ವಿಂಡೀಸ್​ನಲ್ಲಿ ಎರಡು ಟೆಸ್ಟ್​ನಲ್ಲಿ ಮಾತ್ರ ಆಡಿದ್ದರು. ಏಕದಿನ ಕ್ರಿಕೆಟ್​ನಲ್ಲಿ ತಮ್ಮ ಸ್ಥಾನವನ್ನು ಯುವ ಆಟಗಾರರಿಗೆ ಬಿಟ್ಟುಕೊಟ್ಟಿದ್ದರು. ಎರಡು ಏಕದಿನ ಪಂದ್ಯದಿಂದ ಅವರು ಸಂಪೂರ್ಣ ಹೊರಗುಳಿದಿದ್ದರು.

111 ಟೆಸ್ಟ್‌ಗಳಲ್ಲಿ ತಲಾ 29 ಶತಕ ಮತ್ತು 29 ಅರ್ಧಶತಕಗಳೊಂದಿಗೆ 8,676 ರನ್, 275 ಏಕದಿನದಲ್ಲಿ 46 ಶತಕಗಳು ಮತ್ತು 65 ಅರ್ಧಶತಕ ಸಹಿತ 12,898 ರನ್​, 115 ಟಿ20 ಗಳಲ್ಲಿ 1 ಶತಕ ಮತ್ತು 37 ಅರ್ಧಶತಕಗಳೊಂದಿಗೆ 4,008 ರನ್​ಗಳನ್ನು ಮಾಡಿರುವ ವಿರಾಟ್​ ಟೀಮ್​ ಇಂಡಿಯಾದ ಸಾರ್ವಕಾಲಿಕ ಯಶಸ್ವಿ ಬ್ಯಾಟರ್​ ಆಗಿದ್ದಾರೆ. ಪ್ರಸ್ತುತ 25,000 ಅಂತಾರಾಷ್ಟ್ರೀಯ ರನ್‌ ಮತ್ತು 76 ಶತಕಗಳನ್ನು ಹೊಂದಿರುವ ವಿರಾಟ್​ ಸಚಿನ್​ ಅವರ ದಾಖಲೆಯನ್ನು ಮುರಿಯುತ್ತಾರಾ ಎಂಬುದನ್ನು ಅಭಿಮಾನಿಗಳು ಕಾತರದಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ: Virat Kohli: ಸಾವಿರ ಕೋಟಿಗೆ ಒಡೆಯ ವಿರಾಟ್​.. ಒಂದು ಇನ್​ಸ್ಟಾಗ್ರಾಮ್​​ ಪೋಸ್ಟ್​ನಿಂದ ಕೊಹ್ಲಿ ಎಷ್ಟು ಸಂಪಾದಿಸ್ತಾರೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.