ETV Bharat / sports

ಮೊಹಮ್ಮದ್​ ರಿಜ್ವಾನ್ ದಾಖಲೆ​: ಟಿ20 ಕ್ರಿಕೆಟ್​ನಲ್ಲಿ ಒಂದೇ ವರ್ಷ 1000 ರನ್​ ಬಾರಿಸಿದ ಏಕೈಕ ಬ್ಯಾಟರ್

author img

By

Published : Nov 12, 2021, 4:20 AM IST

Mohammad Rizwan becomes 1st batter to achieve  1000 runs in T20
ಮೊಹಮ್ಮದ್​ ರಿಜ್ವಾನ್ ದಾಖಲೆ

ಮೊದಲು ರಿಜ್ವಾನ್​ ಕ್ರಿಸ್​ ಗೇಲ್(1665)​ ಹೆಸರಿನಲ್ಲಿದ್ದ ವರ್ಷದಲ್ಲಿ ಟಿ20 ಪಂದ್ಯಗಳಲ್ಲಿ ಹೆಚ್ಚು ರನ್​ಗಳಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಗೇಲ್​ ವರ್ಷವೊಂದರಲ್ಲಿ 1665 ರನ್​ಗಳಿಸಿದ ದಾಖಲೆ ಹೊಂದಿದ್ದರು. ರಿಜ್ವಾನ್​ ಇದೀಗ 2021 ಮುಗಿಯುವ ಮುನ್ನವೇ 1743 ರನ್​ಗಳಿಸಿದ್ದಾರೆ.

ದುಬೈ: ಪಾಕಿಸ್ತಾನ ವಿಕೆಟ್ ಕೀಪರ್ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್ 2021ರಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದು, ಟಿ20 ಕ್ರಿಕೆಟ್​ನಲ್ಲಿ ಈ ವರ್ಷ 1000 ರನ್​ಗಳ ಗಡಿ ದಾಟಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ಗಡಿದಾಟಿದ ವಿಶ್ವಕಪ್ ಮೊದಲ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.

ಟಿ20 ವಿಶ್ವಕಪ್​ನಲ್ಲಿ 6 ಪಂದ್ಯಗಳಿಂದ 3 ಅರ್ಧಶತಕ ಸಹಿತ 281 ರನ್​​ಗಳಿಸಿದ್ದಾರೆ. ಒಟ್ಟಾರೆ 2021ರಲ್ಲಿ ಅವರು 23 ಪಂದ್ಯಗಳಿಂದ 10 ಅರ್ಧಶತಕ ಮತ್ತು ಒಂದು ಶತಕದ ನೆರವಿನಿಂದ 1033 ರನ್​ಗಳಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಕ್ಯಾಲೆಂಡರ್​ ವರ್ಷದಲ್ಲಿ ಸಾವಿರ ಗಡಿದಾಟಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಇವರ ಜೊತೆಗಾರ ಬಾಬರ್ ಅಜಮ್ 2ನೇ ಸ್ಥಾನದಲ್ಲಿದ್ದು, 23 ಪಂದ್ಯಗಳಿಂದ 826 ರನ್​ಗಳಿಸಿದ್ದಾರೆ. ಇವರೂ ಕೂಡ 1 ಶತಕ ಮತ್ತು 8 ಅರ್ಧಶತಕ ಸಿಡಿಸಿದ್ದಾರೆ. ಈ ಮೊದಲು ಈ ದಾಖಲೆ ಐರ್ಲೆಂಡ್​ನ ಪಾಲ್ ಸ್ಟಿರ್ಲಿಂಗ್​(748) ಹೆಸರಿನಲ್ಲಿತ್ತು.

ಇದಕ್ಕು ಮೊದಲು ರಿಜ್ವಾನ್​ ಕ್ರಿಸ್​ ಗೇಲ್(1665)​ ಹೆಸರಿನಲ್ಲಿದ್ದ ವರ್ಷದಲ್ಲಿ ಟಿ20 ಪಂದ್ಯಗಳಲ್ಲಿ ಹೆಚ್ಚು ರನ್​ಗಳಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಗೇಲ್​ ವರ್ಷವೊಂದರಲ್ಲಿ 1665 ರನ್​ಗಳಿಸಿದ ದಾಖಲೆ ಹೊಂದಿದ್ದರು. ರಿಜ್ವಾನ್​ ಇದೀಗ 2021 ಮುಗಿಯುವ ಮುನ್ನವೇ 1743 ರನ್​ಗಳಿಸಿದ್ದಾರೆ.

ಇದನ್ನು ಓದಿ:​ ಫೈನಲ್​ಗೆ ಮುನ್ನ ಕಿವೀಸ್​ಗೆ ಆಘಾತ; ಬ್ಯಾಟ್​ಗೆ ಗುದ್ದಿ ಕೈಬೆರಳು ಮುರಿದಕೊಂಡ ಕಾನ್ವೆ ವಿಶ್ವಕಪ್​ನಿಂದ ಔಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.