ETV Bharat / sports

ಭಾರತ-ವೆಸ್ಟ್ ಇಂಡೀಸ್​ ಸರಣಿ: ದಿನೇಶ್ ರಾಮ್​ದಿನ್ ಬೆನ್ನಲ್ಲೇ ಸ್ಟಾರ್​ ಪ್ಲೇಯರ್​ ನಿವೃತ್ತಿ ಘೋಷಣೆ

author img

By

Published : Jul 19, 2022, 3:25 PM IST

ವೆಸ್ಟ್​ ಇಂಡೀಸ್ ತಂಡದ ಮಾಜಿ ಕ್ಯಾಪ್ಟನ್​ ದಿನೇಶ್ ರಾಮ್​ದಿನ್ ಹಾಗೂ ಸ್ಟಾರ್ ಬ್ಯಾಟರ್​ ಸಿಮನ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.

Lendl Simmons
Lendl Simmons

ಆಂಟಿಗುವಾ(ವೆಸ್ಟ್ ಇಂಡೀಸ್​): ಭಾರತ-ವೆಸ್ಟ್ ಇಂಡೀಸ್ ನಡುವೆ ಜುಲೈ 22ರಿಂದ ಕ್ರಿಕೆಟ್ ಆರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ನಿನ್ನೆಯಷ್ಟೇ ವೆಸ್ಟ್​ ಇಂಡೀಸ್ ತಂಡ ಪ್ರಕಟಗೊಂಡಿದೆ. ಇದರ ಬೆನ್ನಲ್ಲೇ ಕೆರಿಬಿಯನ್​ ತಂಡದ ಇಬ್ಬರು ಪ್ಲೇಯರ್ಸ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ದಿನೇಶ್​ ರಾಮ್​ದಿನ್ ವಿದಾಯ ಘೋಷಣೆ ಬೆನ್ನಲ್ಲೇ ಮತ್ತೋರ್ವ ಕ್ರಿಕೆಟಿಗ ಲೆಂಡ್ಲಿ ಸಿಮನ್ಸ್​ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಸ್ಟಾರ್​ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದ ಸಿಮನ್ಸ್​ ವೆಸ್ಟ್ ಇಂಡೀಸ್ ಪರ 8 ಟೆಸ್ಟ್​, 68 ಏಕದಿನ ಹಾಗೂ 68 ಟಿ-20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​​ನಲ್ಲಿ ಎರಡು ಶತಕ ಹಾಗೂ 16 ಅರ್ಧಶತಕ ಸಿಡಿಸಿದ್ದು,ಎಲ್ಲ ಮಾದರಿ ಕ್ರಿಕೆಟ್​​ನಿಂದ 3,763 ರನ್​​​ಗಳಿಕೆ ಮಾಡಿದ್ದಾರೆ.

ಟಿ-20 ಸ್ಪೆಷಲಿಸ್ಟ್​​ ಆಗಿದ್ದ ಸಿಮನ್ಸ್​​ 2016ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನ ಎರಡನೇ ಸಲ ಟಿ-20 ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಟೀಂ ಇಂಡಿಯಾ ವಿರುದ್ಧ 51 ಎಸೆತಗಳಲ್ಲಿ 82ರನ್​​ಗಳಿಕೆ ಮಾಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನೂ 2021ರಲ್ಲಿ ನಡೆದ ಟಿ20 ವಿಶ್ವಕಪ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇವರು ಕೊನೆಯ ಟಿ-20 ಪಂದ್ಯವನ್ನಾಡಿದ್ದರು.

ವಿವಿಧ ಫ್ರಾಂಚೈಸಿಗಳ ಕ್ರಿಕೆಟ್​ ಲೀಗ್​​ನಲ್ಲಿ ಸಿಮನ್ಸ್ ಬ್ಯಾಟ್​ ಬೀಸಲಿದ್ದಾರೆ. ಈಗಾಗಲೇ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಇವರು ಕಣಕ್ಕಿಳಿದಿದ್ದರು. 2015 ಹಾಗೂ 2017ರಲ್ಲಿ ತಂಡದ ಪರ ಆಡಿದ್ದಾರೆ. 2011ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಕ್ರಿಕೆಟ್​ನಲ್ಲಿ ಇವರು 122ರನ್​​ಗಳಿಕೆ ಮಾಡಿದ್ದು, ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿದೆ.

ಇದನ್ನೂ ಓದಿರಿ: ಇಂಡಿಯಾ ವಿರುದ್ಧದ ODI ಸರಣಿಗೆ ಬಲಿಷ್ಠ ಕೆರಿಬಿಯನ್​​ ತಂಡ ಪ್ರಕಟ.. 18 ತಿಂಗಳ ಬಳಿಕ ಹೋಲ್ಡರ್​ಗೆ ಚಾನ್ಸ್​

ಇನ್ನೂ 37 ವರ್ಷದ ದಿನೇಶ್ ರಾಮ್​ದಿನ್​ ಸಹ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್​ ಆಗಿದ್ದ ಇವರು ವೆಸ್ಟ್ ಇಂಡೀಸ್ ಪರ 74 ಟೆಸ್ಟ್, 139 ಏಕದಿನ ಹಾಗೂ 71 ಟಿ20 ಪಂದ್ಯಗಳನ್ನಾಡಿದ್ದಾರೆ. ಮೂರು ಮಾದರಿ ಕ್ರಿಕೆಟ್​ನಿಂದ 5500ಕ್ಕೂ ಅಧಿಕ ರನ್​ಗಳಿಕೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.