ETV Bharat / sports

4ನೇ ಟೆಸ್ಟ್​: ಈ ವಿಶೇಷ ದಾಖಲೆಗಾಗಿ ಕೊಹ್ಲಿಗೆ ಬೇಕು 1ರನ್​, ರೋಹಿತ್​ಗೆ 22 ರನ್​

author img

By

Published : Sep 2, 2021, 1:56 PM IST

India vs England Oval test
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

32 ವರ್ಷದ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ12,169, ಟೆಸ್ಟ್​ ಕ್ರಿಕೆಟ್​ನಲ್ಲಿ 7671 ಮತ್ತು ಟಿ20ಯಲ್ಲಿ 3159 ರನ್ ​ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಒಂದು ರನ್ ಗಳಿಸಿದರೆ 23 ಸಾವಿರ ಅಂತಾರಾಷ್ಟ್ರೀಯ ರನ್​ ಗಳಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ.

ಲಂಡನ್: ಇಂಗ್ಲೆಂಡ್​ ಎದುರು ಭಾರತ ಇಂದು ಓವಲ್​ನಲ್ಲಿ ನಾಲ್ಕನೇ ಟೆಸ್ಟ್​ ಪಂದ್ಯವನ್ನಾಡಲಿದೆ. ಈ ಟೆಸ್ಟ್​ ಪಂದ್ಯದ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ ಅವರಿಗೆ ಮಹತ್ವದ್ದಾಗಿದೆ.

ವಿರಾಟ್​ ಕೊಹ್ಲಿ 23,000 ರನ್

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ 4ನೇ ಟೆಸ್ಟ್​ ಪಂದ್ಯದಲ್ಲಿ ಕೇವಲ 1 ರನ್ ​ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 23,000 ರನ್​ ಪೂರ್ಣಗೊಳಿಸಲಿದ್ದಾರೆ. ರನ್​ಮಷಿನ್ ಖ್ಯಾತಿಯ ವಿರಾಟ್​ 434 ಅಂತಾರಾಷ್ಟ್ರೀಯ ಪಂದ್ಯಗಳಿಂದ 22,999 ರನ್​ ಗಳಿಸಿದ್ದಾರೆ.

32 ವರ್ಷದ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ12,169, ಟೆಸ್ಟ್​ ಕ್ರಿಕೆಟ್​ನಲ್ಲಿ 7671 ಮತ್ತು ಟಿ20ಯಲ್ಲಿ 3159 ರನ್​ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಒಂದು ರನ್ ಗಳಿಸಿದರೆ 23 ಸಾವಿರ ಅಂತಾರಾಷ್ಟ್ರೀಯ ರನ್ ​ಗಳಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ.

  • ಸಚಿನ್ ತೆಂಡೂಲ್ಕರ್- 34,357 ರನ್
  • ಕುಮಾರ್ ಸಂಗಕ್ಕಾರ- 28,016
  • ರಿಕಿ ಪಾಂಟಿಂಗ್ -27,483
  • ಮಹೇಲಾ ಜಯವರ್ದನೆ- 25,927
  • ಜಾಕ್ ಕಾಲೀಸ್​- 25,534
  • ರಾಹುಲ್ ದ್ರಾವಿಡ್ -24,208
  • ವಿರಾಟ್​ ಕೊಹ್ಲಿ- 22,999

ರೋಹಿತ್ ಶರ್ಮಾ 15,000 ರನ್​

ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 22 ರನ್ ​ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 15 ಸಾವಿರ ಮೈಲಿಗಲ್ಲನ್ನು ತಲುಪಲಿದ್ದಾರೆ. ರೋಹಿತ್ ಪ್ರಸ್ತುತ 380 ಅಂತಾರಾಷ್ಟ್ರೀಯ ಪಂದ್ಯಗಳಿಂದ 14,978 ರನ್​ ಗಳಿಸಿದ್ದಾರೆ. ಹಿಟ್​ಮ್ಯಾನ್​ 227 ಏಕದಿನ ಪಂದ್ಯಗಳಲ್ಲಿ 9205ರನ್​​, 42 ಟೆಸ್ಟ್​ ಪಂದ್ಯಗಳಿಂದ 2909ರನ್​ ಮತ್ತು 111 ಟಿ20 ಪಂದ್ಯಗಳಿಂದ 2864 ರನ್ ​ಗಳಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ 100 ವಿಕೆಟ್

ವೇಗಿ ಜಸ್ಪ್ರೀತ್ ಬುಮ್ರಾ 3ನೇ ಟೆಸ್ಟ್​ ಪಂದ್ಯದಲ್ಲಿ 3 ವಿಕೆಟ್​ ಪಡೆದರೆ ವೇಗವಾಗಿ 100 ವಿಕೆಟ್​ ಪಡೆದ ಭಾರತ ವೇಗದ ಬೌಲರ್ ಎಂಬ ದಾಖಲೆಯನ್ನು ಸೃಷ್ಟಿಸಲಿದ್ದಾರೆ.

27 ವರ್ಷದ ವೇಗಿ 23 ಪಂದ್ಯಗಳಿಂದ 97 ವಿಕೆಟ್​ ಪಡೆದಿದ್ದಾರೆ. ಇದರಲ್ಲಿ SENA ಮತ್ತು ವಿಂಡೀಸ್​ ಪ್ರವಾಸದಲ್ಲೇ 91 ವಿಕೆಟ್ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.