ETV Bharat / sports

"ರನ್​ ಬರ ಮುಂದುವರೆದಿದೆ, ಪ್ರತಿಭಾವಂತರಿಗೆ ಅನ್ಯಾಯ ಆಗ್ತಿದೆ": ಮತ್ತೆ ರಾಹುಲ್​ ವಿರುದ್ಧ ವೆಂ'ಕಿಡಿ'

author img

By

Published : Feb 19, 2023, 8:19 AM IST

ಎರಡನೇ ಟೆಸ್ಟ್​ನಲ್ಲೂ ರನ್​ ಗಳಿಸಲು ಕೆ.ಎಲ್.ರಾಹುಲ್​ ವಿಫಲವಾದ ನಂತರ ಸರಣಿ ಟ್ವೀಟ್​ ಮಾಡಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​, ಇದು​ ಕಳೆದ 20 ವರ್ಷಗಳಲ್ಲೇ ಕಳಪೆ ಆರಂಭಿಕ ಪ್ರದರ್ಶನ ಎಂದು ಜರಿದಿದ್ದಾರೆ.

venkatesh prasad
ಮತ್ತೆ ರಾಹುಲ್​ ವಿರುದ್ಧ ವೆಂಕಿ ಕಿಡಿ

ನವದೆಹಲಿ: ಕೆ.ಎಲ್.ರಾಹುಲ್​ ರನ್​ ಬರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಮುಂದುವರೆದಿದೆ. ಆದರೂ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಮೊದಲ ಟೆಸ್ಟ್​ನಲ್ಲಿ ಕೆಎಲ್​​ಆರ್​ ವೈಫಲ್ಯಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಟ್ವೀಟ್​ ಮಾಡಿ ಆಯ್ಕೆಗಾರರ ಮೇಲೆ ಅಸಮಾಧಾನ ಹೊರಹಾಕಿದ್ದರು. ಇದೀಗ ಎರಡನೇ ಟೆಸ್ಟ್​​ನಲ್ಲೂ ಮತ್ತೆ ಅವರು ಎಡವಿದ್ದಾರೆ. ಹೀಗಾಗಿ, "ರಾಹುಲ್ ತಂಡ ಸೇರ್ಪಡೆಯಿಂದ ಅನೇಕ ಯುವ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ" ಎಂದು ವೆಂಕಟೇಶ್ ಪ್ರಸಾದ್ ಕಿಡಿ ಕಾರಿದ್ದಾರೆ.

ಲೋಕೇಶ್ ರಾಹುಲ್ ಅವರು ಪ್ರಸಕ್ತ ಸಾಲಿನ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಮೊದಲ ಪಂದ್ಯದಲ್ಲಿ 71 ಎಸೆತ​ಗಳನ್ನು ಎದುರಿಸಿ ಕೇವಲ 20 ರನ್​ಗಳಿಸಿದ್ದರು. ಎರಡನೇ ಮ್ಯಾಚ್​ನ ಮೊದಲ ಇನ್ನಿಂಗ್ಸ್​ನಲ್ಲಿ 41 ಚೆಂಡುಗಳಲ್ಲಿ ಒಂದು ಸಿಕ್ಸ್​ ಸಹಿತ 17 ರನ್​ಗಳಿಸಿ ಔಟಾಗಿದ್ದರು. 2022 ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್​ನಲ್ಲಿ ಅರ್ಧಶತಕ ಗಳಿಸಿದ್ದರು. ಅದೇ ಸರಣಿಯಲ್ಲಿ ಶತಕ ದಾಖಲಿಸಿದ್ದರು. ಇದಾದ ನಂತರ ಅವರ ಬ್ಯಾಟ್‌ನಿಂದ ಹೆಚ್ಚು ರನ್ ಹರಿದುಬಂದಿಲ್ಲ. ಸುಮಾರು ಒಂದು ವರ್ಷದಿಂದೀಟೆಗೆ ಅವರು ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವುತ್ತಿದ್ದಾರೆ.

ಹೀಗಾಗಿ, ರಾಹುಲ್‌ಗೆ​ ನೀಡಲಾಗುತ್ತಿರುವ ಅವಕಾಶಗಳಿಗೆ ಟೀಕೆಗಳು ಹೆಚ್ಚಾಗುತ್ತಿವೆ. ಫಾರ್ಮ್​ನಲ್ಲಿರುವ ಬ್ಯಾಟರ್​ಗಳಿಗೆ ಟೀಂ​ನಲ್ಲಿ ಸ್ಥಾನವೇ ಸಿಗುತ್ತಿಲ್ಲ ಎಂದು ಆಯ್ಕೆಗಾರರ ನಡೆಯನ್ನು ಟೀಕಿಸಲಾಗುತ್ತಿದೆ. 47 ಟೆಸ್ಟ್​ ಆಡಿರುವ ರಾಹುಲ್​ 2,641 ರನ್​ಗಳಿಸಿದ್ದು, 33.08 ರ ಸರಾಸರಿಯಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ. 51 ಸ್ಟ್ರೈಕ್​ ರೇಟ್​ನಲ್ಲಿ 7 ಶತಕ ಮತ್ತು 13 ಅರ್ಧಶತಕ ದಾಖಲಿಸಿದ್ದಾರೆ.

  • And the torrid run continues. More to do with rigidity of the management to persist with a player who just hasn’t looked the part. No top order batsman in atleast last 20 years of Indian cricket has played these many tests with such a low average. His inclusion is …. https://t.co/WLe720nYNJ

    — Venkatesh Prasad (@venkateshprasad) February 18, 2023 " class="align-text-top noRightClick twitterSection" data=" ">

ಟೆಸ್ಟ್​ನಲ್ಲಿ ರನ್​ಗಳಿಸಲು ವಿಫಲವಾಗಿರುವ ಕ್ರಿಕೆಟಿಗನ​ ಬಗ್ಗೆ ವೆಂಕಟೇಶ್​ ಪ್ರಸಾದ್​ ಟ್ವೀಟ್​ ಮಾಡಿ,"ಮತ್ತೆ ರನ್​ ಬರ ಮುಂದುವರಿದಿದೆ. ಕಳೆದ 20 ವರ್ಷಗಳ ಭಾರತೀಯ ಕ್ರಿಕೆಟ್‌ನಲ್ಲಿ ಯಾವುದೇ ಅಗ್ರ ಕ್ರಮಾಂಕದ ಬ್ಯಾಟರ್ ಇಷ್ಟು ಕಳಪೆ ಆಟ ಆಡಿಲ್ಲ. ತಂಡಕ್ಕೆ ಇವರ ಸೇರ್ಪಡೆಯಿಂದಾಗಿ ಬೇರೆ ಪ್ರತಿಭಾವಂತ ಆರಂಭಿಕ ಬ್ಯಾಟರ್​ಗಳಿಗೆ ಅವಕಾಶವೇ ದೊರೆಯುತ್ತಿಲ್ಲ" ಎಂದಿದ್ದಾರೆ.

"ಶಿಖರ್ ಧವನ್​ ಟೆಸ್ಟ್​ ಸರಾಸರಿ 40+ ಇದೆ, ಮಯಾಂಕ್ ಅಗರ್ವಾಲ್​ 2 ದ್ವಿಶತಕಗಳೊಂದಿಗೆ 41+ ಸರಾಸರಿ ಕಾಯ್ದುಕೊಂಡಿದ್ದಾರೆ. ಉತ್ತಮ ಫಾರ್ಮ್​ನಲ್ಲಿ ಶುಭ್‌ಮನ್ ಗಿಲ್, ಸರ್ಫರಾಜ್ ಇದ್ದಾರೆ. ಇವರಲ್ಲದೇ ಅನೇಕ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಆರಂಭಿಕರಿದ್ದಾರೆ. ಅವರ (ರಾಹುಲ್​) ಸೇರ್ಪಡೆಯು ನ್ಯಾಯದ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ"

"ನನ್ನ ಪ್ರಕಾರ, ಅವರು (ರಾಹುಲ್​) ಪ್ರಸ್ತುತ ಭಾರತದಲ್ಲಿನ 10 ಅತ್ಯುತ್ತಮ ಓಪನರ್‌ಗಳ ಸ್ಥಾನದಲ್ಲಿಲ್ಲ. ಆದರೂ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ. ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರದರ್ಶನಗಳನ್ನು ನೀಡಿದರೂ ಮುಂದಿನ ಪಂದ್ಯಕ್ಕೆ ಆಯ್ಕೆ ಮಾಡಿರಲಿಲ್ಲ" ಎಂದು ವೆಂಕಟೇಶ್​ ಪ್ರಸಾದ್​ ಸರಣಿ ಟ್ವೀಟ್‌ನಲ್ಲಿ ಆಯ್ಕೆಗಾರರಿಗೆ ಚಾಟಿ ಬೀಸಿದ್ದಾರೆ. ಮೊದಲ ಪಂದ್ಯದಲ್ಲಿ ರಾಹುಲ್​ ಕಡಿಮೆ ಮೊತ್ತಕ್ಕೆ ಔಟಾದಾಗಲೇ ವೆಂಕಟೇಶ್​ ಪ್ರಸಾದ್​ ಟ್ಟೀಟ್​ ಮಾಡಿ ಟೆಸ್ಟ್​ಗೆ ಪಾದಾರ್ಪಣೆ ಮಾಡಿ 8 ವರ್ಷ ಆದ ನಂತರ 33 ರ ಸರಾಸರಿಯಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ ಎಂದು ಗರಂ ಆಗಿದ್ದರು.

ಇದನ್ನೂ ಓದಿ: ಆರಂಭಿಕರ ಸ್ಥಾನಕ್ಕೆ ಬೇರೆ ಉತ್ತಮ ಆಟಗಾರಿದ್ದಾರೆ: ರಾಹುಲ್​ ಬಗ್ಗೆ ವೆಂಕಟೇಶ್​ ಪ್ರಸಾದ್​ ಹೀಗೆ ಹೇಳಿದ್ದು ಯಾಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.