ETV Bharat / sports

ಉಮೇಶ್​ ಯಾದವ್ ಮಿಂಚು... 137 ರನ್​ಗಳಿಗೆ ಪಂಜಾಬ್​ ಕಿಂಗ್ಸ್​ ಆಲೌಟ್​

author img

By

Published : Apr 1, 2022, 9:28 PM IST

ಕೆಕೆಆರ್​ ತಂಡದ ಉಮೇಶ್​ ಯಾದವ್​ರ ಕರಾರುವಾಕ್​ ದಾಳಿಯಿಂದ ಪಂಜಾಬ್​ ಕಿಂಗ್ಸ್​ ತಂಡ 18.2 ಓವರ್​ಗಳಲ್ಲಿ 137 ರನ್​ಗಳ ಸಾಧಾರಣ ಗುರಿ ನೀಡಿ ಆಲೌಟ್​ ಆಗಿದೆ.

Kings match
ಪಂಜಾಬ್​ ಕಿಂಗ್ಸ್​ ಆಲೌಟ್

ಮುಂಬೈ: ಉಮೇಶ್​ ಯಾದವ್​ರ ಬೆಂಕಿ ಉಗುಳುವಂತಹ ಬೌಲಿಂಗ್​ ದಾಳಿಗೆ ತತ್ತರಿಸಿದ ಪಂಜಾಬ್​ ಕಿಂಗ್ಸ್​ ತಂಡ 18.2 ಓವರ್​ಗಳಲ್ಲಿ 137 ರನ್​ ಗಳಿಸಲು ಮಾತ್ರ ಶಕ್ತವಾಗಿ ಆಲೌಟ್​ ಆಯಿತು. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಉಮೇಶ್​ ಯಾದವ್​ ತಮ್ಮ ತೋಳ್ಬಲ ಪ್ರದರ್ಶಿಸಿ ಕಿಂಗ್ಸ್​ ಪತನಕ್ಕೆ ಕಾರಣವಾದರು. ಕೆಕೆಆರ್​ನ ಯಾವೊಬ್ಬ ಬ್ಯಾಟ್ಸಮನ್​ ಕೂಡ ಕನಿಷ್ಠ ಅರ್ಧಶತಕ ದಾಖಲಿಸಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಪಂಜಾಬ್​ ತಂಡದ ನಾಯಕ ಮಯಾಂಕ್​ ಅಗರ್​ವಾಲ್​(1) ಮೊದಲ ಓವರ್​ನಲ್ಲೇ ವಿಕೆಟ್​ ಒಪ್ಪಿಸಿ ಹೊರನಡೆದರು. ಶಿಖರ್​ ಧವನ್​(16), ಲೈಮ್​ ಲಿವಿಂಗ್​ಸ್ಟೋನ್​(19), ರಾಜ್​ ಬಾವಾ(11) ರನ್​ ಗಳಿಸಲಷ್ಟೇ ಸಾಧ್ಯವಾಯಿತು.

ರಾರಾಜಿಸಿದ ರಾಜಪಕ್ಸೆ: ಎಲ್ಲ ಬ್ಯಾಟ್ಸಮನ್​ಗಳು ಪೆವಿಲಿಯನ್​ ಪರೇಡ್​ ಮಾಡುತ್ತಿದ್ದರೆ, ಇದೇ ಮೊದಲ ಬಾರಿಗೆ ಐಪಿಎಲ್​ ಆಡುತ್ತಿರುವ ಶ್ರೀಲಂಕಾದ ಭುನುಕಾ ರಾಜಪಕ್ಸೆ(31) 3 ಬೌಂಡರಿ, 3 ಸಿಕ್ಸರ್​ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೇ ತಂಡದ ಅತ್ಯಧಿಕ ಸ್ಕೋರರ್​ ಎನಿಸಿಕೊಂಡರು.

ರಬಾಡಾ ಮಿಂಚು: ಇನ್ನು ಒಂದರ ಹಿಂದೆ ಒಂದು ವಿಕೆಟ್​ ಉರುಳುತ್ತಿದ್ದರೆ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಬಾಲಂಗೋಚಿ ಕಗಿಸೋ ರಬಾಡಾ 4 ಬೌಂಡರಿ, 1 ಭರ್ಜರಿ ಸಿಕ್ಸರ್​ ಸಮೇತ 25 ರನ್​ ಗಳಿಸಿದರು. ಕೆಕೆಆರ್​ ಪರ ಉಮೇಶ್​ ಯಾದವ್​ 23 ರನ್​ ನೀಡಿ 4 ವಿಕೆಟ್​ ಉರುಳಿಸಿದರೆ, ಟಿಮ್​ ಸೌಥಿ 2, ಸುನೀಲ್​ ನರೈನ್​ 1, ಶಿವಂ ಮಾವಿ 1, ರಸೆಲ್​ 1 ವಿಕೆಟ್​ ಪಡೆದು ಕೋಲ್ಕತ್ತಾ ಬ್ಯಾಟಿಂಗ್​ ಬೆನ್ನೆಲುಬು ಮುರಿದರು.

ಓದಿ: IPL 2022: ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.