WFI ಅಧ್ಯಕ್ಷರ ವಿರುದ್ಧ ಭಾರತೀಯ ಒಲಂಪಿಕ್​ ಅಸೋಸಿಯೇಷನ್​ ಅಧ್ಯಕ್ಷೆ ಪಿಟಿ ಉಷಾಗೆ ಪತ್ರ ಬರೆದ ಕುಸ್ತಿಪಟುಗಳು

author img

By

Published : Jan 20, 2023, 3:44 PM IST

Updated : Jan 20, 2023, 8:57 PM IST

WFI ಅಧ್ಯಕ್ಷರ ವಿರುದ್ಧ ಭಾರತೀಯ ಒಲಂಪಿಕ್​ ಅಸೋಸಿಯೇಷನ್​ ಅಧ್ಯಕ್ಷರಾದ ಪಿಟಿ ಉಷಾಗೆ ಪತ್ರ ಬರೆದ ಕುಸ್ತಿಪಟುಗಳು
wrestlers-wrote-to-indian-olympic-association-president-pt-usha-against-wfi-president ()

ಮೂರನೇ ದಿನಕ್ಕೆ ಕಾಲಿಟ್ಟ ಕುಸ್ತಿಪಟುಗಳು ಪ್ರತಿಭಟನೆ- WFI ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು- ಕುಸ್ತಿಪಟುಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಕೇಂದ್ರ ಕ್ರೀಡಾ ಸಚಿವರು

ನವದೆಹಲಿ: ರಾಷ್ಟ್ರೀಯ ಫೆಡರೇಶನ್​ ಅಧ್ಯಕ್ಷ (ಡಬ್ಲ್ಯೂಎಫ್​ಐ) ಬಿಜ್​ ಭೂಷಣ್​ ವಿರುದ್ಧ ಜಂತರ್​ ಮಂತರ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಸ್ಟಾರ್ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಅವರು ಕೂಡ ಪ್ರತಿಭಟನೆಗೆ ಸಾಥ್​ ನೀಡಿದ್ದು, ಈ ಸಂಬಂಧ ಭಾರತೀಯ ಒಲಂಪಿಕ್​ ಅಸೋಸಿಯೇಷನ್​ ಅಧ್ಯಕ್ಷರಾಗಿರುವ ಪಿಟಿ ಉಷಾ ಅವರಿಗೆ ದೂರು ಸಲ್ಲಿಸಿದ್ದಾರೆ. ಡಬ್ಲ್ಯೂಎಫ್​ಐ ಮುಖ್ಯಸ್ಥ ಸೇರಿದಂತೆ ಅನೇಕ ಕೋಚ್​ಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಟಿ ಉಷಾ ಅವರಿಗೆ ಸಲ್ಲಿರುವ ದೂರಿನ ಪ್ರತಿಯನ್ನು ಒಲಂಪಿಕ್​ ವಿಜೇತ ವಿಘ್ನೇಶ್​ ಪೋಗಟ್​​​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಅವರನ್ನು ಕೂಡ ಟ್ಯಾಗ್​ ಮಾಡಿದ್ದಾರೆ. ದೂರಿನಲ್ಲಿ ಅವರು ಪ್ರಕರಣದ ಗಂಭೀರತೆ ಕುರಿತು ತಿಳಿಸಿದ್ದು, ​ದೌರ್ಜನ್ಯದ ಕುರಿತು ಹಲವಾರು ಯುವ ಕುಸ್ತಿಪಟುಗಳು ಕೂಡ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಪತ್ರಕ್ಕೆ ಟೊಕಿಯೋ ಒಲಂಪಿಕ್​ ಪದಕ ವಿಜೇತರಾದ ರವಿ ದಹಿಹಾ ಮತ್ತು ಬಜರಂಗ್​ ಪುನಿಯಾ, ಸಾಕ್ಷಿ ಮಲಿಕ್​ ಕಂಚಿನ ಪದಕ ವಿಜೇತ ರಿಯೋ ಗಣೇಶ್​​ ಮತ್ತು ವರ್ಲ್ಡ್​​ ಚಾಂಪಿಯನ್​ಶಿಪ್​ ಪದಕ ವಿಜೇತರಾಗಿರುವ ವಿಘ್ನೇಶ್​ ಪೋಗಟ್​​ ಮತ್ತು ದೀಪಕ್​ ಪುನಿಯಾ ಸಹಿ ಹಾಕಿದ್ದಾರೆ.

ಪತ್ರದಲ್ಲಿ ಇದೇ ವೇಳೆ ಕುಸ್ತಿಪಟುಗಳ ಫೆಡರೇಶನ್​ನಲ್ಲಿ ನಡೆಯುತ್ತಿರುವ ಹಣಕಾಸಿನ ಅವ್ಯವಹಾರದ ಆರೋಪದ ಕುರಿತು ಕೂಡ ತಿಳಿಸಲಾಗಿದೆ. ಟಾಟಾ ಮೋಟರ್ಸ್​ನಿಂದ ಕಳೆದ ಕೆಲವು ವರ್ಷಗಳಿಂದ ಹಲವು ಹಿರಿಯ ಕುಸ್ತಿಪಟುಗಳು ಸ್ಪಾನ್ಸರ್​ಶಿಪ್​ ಅಡಿ ಕಂಟ್ರಾಕ್ಟ್​ ಪೇಮೆಂಟ್​​ಗೆ ಅನುಮತಿ ನೀಡಲಾಗಿದೆ. ಆದರೆ, ಈ ಹಣ ಪಾವತಿಯಲ್ಲಿ ಒಂದಿಷ್ಟು ಭಾಗವನ್ನು ಮಾತ್ರ ಡಬ್ಲ್ಯೂಎಫ್​ಐ ಮಾಡುತ್ತಿದೆ ಎಂದು ಕೂಡ ತಿಳಿಸಲಾಗಿದೆ.

ಮಾನಸಿಕ ದೌರ್ಜನ್ಯದ ಆರೋಪ: ಟೋಕಿಯೋದಲ್ಲಿ ಒಲಂಪಿಕ್​ ಪದಕ ಕೈ ತಪ್ಪಿದ ಹಿನ್ನಲೆ ಡಬ್ಲ್ಯೂಎಫ್​ಐ ಅಧ್ಯಕ್ಷರು ತಮ್ಮನ್ನು ಮಾನಸಿಕವಾಗಿ ದೌರ್ಜನ್ಯ ನಡೆಸಿದರು ಎಂದು ವಿನೇಶ್​ ಪೋಗಟ್​ ತಿಳಿಸಿದ್ದಾರೆ. ಅವರ ದೌರ್ಜನ್ಯದಿಂದ ಕಡೆಗೆ ಆತ್ಮಹತ್ಯೆ ಯತ್ನವನ್ನು ನಡೆಸಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೋಚ್​ಗಳು ಮತ್ತು ಕ್ರೀಡಾ ವಿಜ್ಞಾನ ಸಿಬ್ಬಂದಿಗಳು, ಡಬ್ಲ್ಯೂಎಫ್​ಐ ಅಧ್ಯಕ್ಷರು ಮೆರಿಟ್​ ಬದಲು ಯೋಗ್ಯವಲ್ಲದವರಿಗೆ ರಾಷ್ಟ್ರೀಯ ಕ್ಯಾಪ್​ ನಡೆಸಿದ್ದಾರೆ. ನ್ಯಾಷನಲ್​ ಕ್ಯಾಪ್​ನಲ್ಲಿ ಕೆಟ್ಟ ಪರಿಸ್ಥಿತಿ ಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಭಾರತೀಯ ಒಲಂಪಿಕ್​ ಅಸೋಸಿಯೇಷನ್​ ತಕ್ಷಣವೇ ಸಮಿತಿಯನ್ನು ರಚಿಸಿ, ಲೈಂಗಿಕ ದೌರ್ಜನ್ಯದ ದೂರಿನ ಆಧಾರದ ಅನುಸಾರ ತನಿಖೆಗೆ ಮುಂದಾಗಬೇಕು. ಡಬ್ಲ್ಯೂಎಫ್​ಐ ಅಧ್ಯಕ್ಷರು ತಕ್ಷಣವೇ ರಾಜೀನಾಮೆ ನೀಡಬೇಕು. ಕುಸ್ತಿಪಟು ಫೆಡರೇಷನ್​ ಅನ್ನು ರದ್ದುಗೊಳಿಸಿ, ಕುಸಿಪಟುಗಳ ಜೊತೆಗೆ ಡಬ್ಲ್ಯೂಎಫ್​ ಸಮಾಲೋಚನೆಗೆ ಹೊಸ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಣ್ಣೀರು ಹಾಕಿದ ಪ್ರತಿಭಟನಾಕಾರರು: ಡಬ್ಲ್ಯೂಎಫ್​ಐ ಅಧ್ಯಕ್ಷರ ವಿರುದ್ಧ ಕುಸ್ತಿಪಟುಗಳು ಎಲ್ಲಾ ಒಟ್ಟಾಗಿ ಈ ರೀತಿ ಪ್ರತಿಭಟನೆ ನಡೆಸಬೇಕು ಎಂದರೆ ಸಾಕಷ್ಟು ಧೈರ್ಯ ಬೇಕು. ನಾವು ಈಗ ಜೀವ ಭಯದಲ್ಲಿ ಬದುಕುತ್ತಿದ್ದೇವೆ. ಅವರನ್ನು ಈ ಸ್ಥಾನದಿಂದ ಕಿತ್ತೊಗೆಯದಿದ್ದರೆ, ನಮ್ಮ ಜೊತೆ ಪ್ರತಿಭಟನೆಗೆ ಕುಳಿತ ಯುವ ಕುಸ್ತಿಪಟುಗಳ ವೃತ್ತಿ ನಾಶವಾಗತ್ತದೆ ಎಂದು ಕಣ್ಣೀರಾಗಿ ಸಹಾಯವನ್ನು ಯಾಚಿಸಿದ್ದಾರೆ.

ಪ್ರಾಕ್ಟಿಸ್​ ಬಿಟ್ಟು ಈ ರೀತಿ ಪ್ರತಿಭಟನೆ ನಡೆಸುವುದು ನಿಜಕ್ಕೂ ದುರದೃಷ್ಟಕರವಾಗಿದೆ. ನಮ್ಮ ಹೋರಾಟ ಕೇವಲ ಭಾರತೀಯ ಕುಸ್ತಿಪಟು ಫೆಡರೇಷನ್​ ವಿರುದ್ಧ. ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೇ, ಪ್ರಧಾನಿಗಳು, ಗೃಹಸಚಿವರು ಮತ್ತು ಕೇಂದ್ರ ಕ್ರೀಡಾ ಸಚಿವರು ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಬಜರಂಗ್​​ ಪುನಿಯಾ ತಿಳಿಸಿದ್ದಾರೆ.

ಹರಿಯಾಣ ಸಚಿವರಿಂದ ಹಿಡಿದು ಡಬ್ಲ್ಯುಎಫ್‌ಐ ಅಧ್ಯಕ್ಷರವರೆಗೆ ಎಲ್ಲರೂ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಆದರೆ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳಾ ಆಟಗಾರರನ್ನು ರಕ್ಷಿಸುವುದರ ಬದಲಾಗಿ ಈ ಸರ್ಕಾರ ಮತ್ತು ಪಕ್ಷ ತಮ್ಮ ನಾಯಕರ ರಕ್ಷಣೆಗೆ ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್​ ಮೂಲಕ ದೆಹಲಿ ಸಿಎಂ ಅರವಿಂದ್​ ಕೇಜ್ರೀವಾಲ್​ ಆಕ್ರೋಶ ಹೊರ ಹಾಕಿದ್ದಾರೆ.

ಈ ಮಧ್ಯ ಕೆಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​, ಶುಕ್ರವಾರ ಕುಸ್ತಿಪಟಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಗುರುವಾರ ರಾತ್ರ ನಡೆದ ಮಾತುಕತೆಯಲ್ಲಿ ಕುಸ್ತಿಪಟುಗಳು ಯಾವುದೇ ರಾಜಿಗೆ ಬಾರದೆ ಅವರು ಡಬ್ಲ್ಯೂ ಎಫ್​ಐ ಮುಖ್ಯಸ್ಥರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: WFI ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: 72 ಗಂಟೆಯೊಳಗೆ ವಿವರಣೆ ನೀಡಲು SAI ಸೂಚನೆ

Last Updated :Jan 20, 2023, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.