ETV Bharat / sports

ಆರ್‌ಸಿಬಿಯಲ್ಲಿ ಉಳಿಯುವ ಕುರಿತು ಎರಡನೇ ಆಲೋಚನೆಯೇ ಮಾಡಿಲ್ಲ - ವಿರಾಟ್‌ ಕೊಹ್ಲಿ

author img

By

Published : Dec 1, 2021, 12:07 PM IST

ಆರ್‌ಸಿಬಿಯ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್‌ ಕೊಹ್ಲಿ, ಮುಂದಿನ ಮೂರು ಆವೃತ್ತಿಗಳಲ್ಲಿ ತಂಡದಲ್ಲೇ ಇರುತ್ತೇನೆ. ಈ ಬಗ್ಗೆ ಎರಡನೇ ಆಲೋಚನೆಯೇ ಮಾಡಿಲ್ಲ. ತಂಡಕ್ಕೆ ನನ್ನಿಂದ ಇನ್ನೂ ಉತ್ತಮವಾದ ಕೊಡುಗೆ ನೀಡಬೇಕೆಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ..

Did not have any second thoughts on staying with RCB, have renewed energy: Kohli
ಆರ್‌ಸಿಬಿಯಲ್ಲಿ ಉಳಿಯುವ ಕುರಿತು ಎರಡನೇ ಆಲೋಚನೆಯೇ ಮಾಡಿಲ್ಲ - ವಿರಾಟ್‌ ಕೊಹ್ಲಿ

ಬೆಂಗಳೂರು : ಐಪಿಎಲ್‌ನಲ್ಲಿ ಮುಂದಿನ ಮೂರು ಆವೃತ್ತಿಗಳಲ್ಲಿ ಆರ್‌ಸಿಬಿಯಲ್ಲೇ ಉಳಿಯಲಿದ್ದೇನೆ. ಈ ಬಗ್ಗೆ ಎರಡನೇ ಆಲೋಚನೆಯೇ ಇಲ್ಲ ಎಂದು ಟೀಂ ಇಂಡಿಯಾದ ಟೆಸ್ಟ್‌ ಹಾಗೂ ಏಕದಿನ ತಂಡದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್‌ ಮೂಲಕ ಕೊಹ್ಲಿ, ಗ್ಲೇನ್‌ ಮ್ಯಾಕ್ಸ್‌ವೆಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಅವರನ್ನು ಉಳಿಸಿಕೊಂಡ ಮರುದಿನವೇ ಕೊಹ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಆರ್‌ಸಿಬಿಯೊಂದಿಗಿನ ನನ್ನ ಈ ಪ್ರಯಾಣ ಹೀಗೆ ಮುಂದುವರಿಯುತ್ತದೆ. ರಿಟೈನ್‌ಗೂ ಮುನ್ನ ಆರ್‌ಸಿಬಿ ಆಡಳಿತ ಮಂಡಳಿ ಸಂಪರ್ಕಿಸಿದಾಗ ನನ್ನಲ್ಲಿ ಎರಡನೇ ಆಲೋಚನೆಯೇ ಇರಲಿಲ್ಲ. ರಾಯಲ್‌ ಚಾಲೆಂಜರ್ಸ್‌ನೊಂದಿಗೆ ಪ್ರಯಾಣ ಅದ್ಬುತವಾಗಿದೆ.

ಫ್ರಾಂಚೈಸಿಯೊಂದಿಗೆ ಇನ್ನೂ ಮೂರು ವರ್ಷ ಉಳಿಯಲಿದ್ದೇನೆ. ನನ್ನಿಂದ ತಂಡಕ್ಕೆ ಉತ್ತಮವಾದದ್ದು ಇನ್ನೂ ಬರಬೇಕಿದೆ. ಮುಂದಿನ ಆವೃತ್ತಿಗಳಲ್ಲಿ ಏನಾಗುತ್ತೆ ಎಂಬುದರ ಬಗ್ಗೆ ನನಗೆ ವಿಶೇಷ ಭಾವನೆ ಇದೆ ಎಂದು ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

ನಮ್ಮ ಅಭಿಮಾನಿ ಬಳಗವು ಅದ್ಭುತವಾಗಿದೆ. ಮ್ಯಾನೇಜ್ಮೆಂಟ್‌ ನನ್ನೊಂದಿಗೆ ಹಾಗೂ ಇತರ ಎಲ್ಲ ಆಟಗಾರರೊಂದಿಗೆ ಉತ್ತಮವಾಗಿದೆ. ಆರ್‌ಸಿಬಿಗಾಗಿ ನನ್ನ ಹೃದಯ ಮತ್ತು ಆತ್ಮದೊಂದಿಗೆ ಇರುತ್ತೇನೆ ಎಂದು ವಿರಾಟ್‌ ತನ್ನ ಮನದ ಮಾತನ್ನು ಹಂಚಿಕೊಂಡಿದ್ದಾರೆ.

2022ರ ಐಪಿಎಲ್‌ನ 15ನೇ ಆವೃತ್ತಿಯಿಂದ ಆರ್‌ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್‌ ಘೋಷಿಸಿಕೊಂಡಿದ್ದರು. ಆರಂಭದಿಂದಲೂ ತಂಡದಲ್ಲಿರುವ ಕೊಹ್ಲಿ ಅವರಿಗೆ 15 ಕೋಟಿ ರೂ. ನೀಡಿ ಉಳಿಸಿಕೊಳ್ಳಲಾಗಿತ್ತು.

ಕಳೆದ ಆವೃತ್ತಿಯಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದ ಮ್ಯಾಕ್ಸ್‌ವೆಲ್‌ಗೆ 11 ಕೋಟಿ ರೂ. ನೀಡಲಾಗಿತ್ತು. 2018ರಿಂದ ತಂಡದಲ್ಲಿರುವ ಮೊಹಮ್ಮದ್‌ ಸಿರಾಜ್‌ 7 ಕೋಟಿ ರೂ. ಪಡೆದಿದ್ದಾರೆ.

ಇದನ್ನೂ ಓದಿ: IPL Retention: ಕೊಹ್ಲಿ, ಮ್ಯಾಕ್ಸ್​ವೆಲ್​​, ಸಿರಾಜ್​​ ಉಳಿಸಿಕೊಂಡ ಆರ್​ಸಿಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.