IPL Retention: ಕೊಹ್ಲಿ, ಮ್ಯಾಕ್ಸ್​ವೆಲ್​​, ಸಿರಾಜ್​​ ಉಳಿಸಿಕೊಂಡ ಆರ್​ಸಿಬಿ

author img

By

Published : Nov 30, 2021, 10:01 PM IST

Updated : Nov 30, 2021, 10:47 PM IST

RCB Retain Virat Kohli

ಇಂಡಿಯನ್​​ ಪ್ರೀಮಿಯರ್ ಲೀಗ್​​ ಟಿ-20 ಕ್ರಿಕೆಟ್​ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಇದೀಗ ರಿಲೀಸ್ ಮಾಡ್ತಿದ್ದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೂವರು ಪ್ರಮುಖ ಆಟಗಾರರಿಗೆ ಮಣೆ ಹಾಕಿದೆ.

ಹೈದರಾಬಾದ್​​: 2022ನೇ ಆವೃತ್ತಿ ಇಂಡಿಯನ್​​ ಪ್ರೀಮಿಯರ್​ ಲೀಗ್​​ಗಾಗಿ ಎಲ್ಲ ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನು ರಿಟೈನ್​ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕೆ ಇಂದು ಕೊನೆಯ ದಿನವಾಗಿರುವ ಕಾರಣ ಎಲ್ಲ ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಮಾಹಿತಿ ರಿಲೀಸ್ ಮಾಡ್ತಿವೆ. ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ತಂಡ ಮೂವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಉದಯೋನ್ಮುಖ ವೇಗಿ ಮೊಹಮ್ಮದ್​ ಸಿರಾಜ್​, ಬ್ಯಾಟರ್​​​ ವಿರಾಟ್​ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆಲ್​ರೌಂಡರ್​​​ ಗ್ಲೇನ್ ಮ್ಯಾಕ್ಸ್​ವೆಲ್​ ಅವರನ್ನು ರಿಟೈನ್ ಮಾಡಿಕೊಂಡಿದೆ.

ವಿರಾಟ್​​ ಕೊಹ್ಲಿಗೆ 15 ಕೋಟಿ ರೂ. ಗ್ಲೇನ್​​ ಮ್ಯಾಕ್ಸ್​​​ವೆಲ್​ಗೆ 11 ಕೋಟಿ ರೂ. ನೀಡಿರುವ ಆರ್​​ಸಿಬಿ ವೇಗಿ ಮೊಹಮ್ಮದ್​​ ಸಿರಾಜ್​ಗೋಸ್ಕರ 7 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಅನುಭವಿ ಸ್ಪಿನ್ನರ್​ ಯುಜ್ವೇಂದ್ರ ಚಹಲ್ ಮತ್ತು ಕರ್ನಾಟಕದ ಸ್ಟಾರ್ ಬ್ಯಾಟರ್​ ದೇವದತ್​ ಪಡಿಕ್ಕಲ್​ ಆರ್​ಸಿಬಿಯಿಂದ ಹೊರ ಬಿದ್ದಿದ್ದಾರೆ.

ಇದನ್ನೂ ಓದಿರಿ: ಐಪಿಎಲ್ ರಿಟೆನ್ಷನ್ : ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು, ಪಡೆದ ಹಣದ ಸಂಪೂರ್ಣ ವಿವರ ಇಲ್ಲಿದೆ

ಸಿರಾಜ್​ ಕಳೆದ ಮೂರು ವರ್ಷಗಳಿಂದ ಆರ್​ಸಿಬಿಯಲ್ಲಿ ಆಡುತ್ತಿದ್ದಾರೆ. ಮೊದಲ ಆವೃತ್ತಿಯಲ್ಲಿ ದುಬಾರಿಯಾದರೂ ಕಳೆದ 2 ಆವೃತ್ತಿಗಳಲ್ಲಿ ಸಿರಾಜ್​ ಆರ್​ಸಿಬಿಯ ಅಗ್ರ ಹಾಗೂ ಎಕನಾಮಿಕಲ್ ಬೌಲರ್​ ಆಗಿ ಗುರುತಿಸಿಕೊಂಡಿದ್ದಾರೆ. 2021ರ ಆವೃತ್ತಿಯಲ್ಲಿ 6.78ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದರು. 2021ರ ಐಪಿಎಲ್​​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದು ಗಮನ ಸೆಳೆದಿದ್ದ ಹರ್ಷಲ್ ಪಟೇಲ್​ ಅವರನ್ನೂ ಆರ್​​ಸಿಬಿ ಕೈಬಿಟ್ಟಿದೆ.

Last Updated :Nov 30, 2021, 10:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.