ETV Bharat / sports

ಮುಂದಿನ ವರ್ಷದ ಐಪಿಎಲ್​​ನಲ್ಲಿ ಆರ್​ಸಿಬಿ ತಂಡಕ್ಕೆ ಮರಳಲಿದ್ದೇನೆ.. ಖಚಿತ ಪಡಿಸಿದ ಎಬಿ ಡಿವಿಲಿಯರ್ಸ್​

author img

By

Published : May 24, 2022, 4:12 PM IST

AB de Villiers set to return for IPL
AB de Villiers set to return for IPL

ನಾನು ಅರ್ಧ ಭಾರತೀಯ. ಅರ್ಧ ದಕ್ಷಿಣ ಆಫ್ರಿಕಾದವನು. ಭಾರತ ನನ್ನ ಹೃದಯದಲ್ಲಿ ವಿಶೇಷವಾಗಿ ನೆಲೆಸಿದೆ ಎಂದು ಎಬಿಡಿ ಹೇಳಿದ್ದಾರೆ. ನಾನು ಕೊನೆಯವರೆಗೂ ಆರ್​ಸಿಬಿಯನ್​ ಆಗಿರುತ್ತೇನೆಂದು ಹೇಳಿಕೊಂಡಿದ್ದ ಎಬಿಡಿ, ಇದೀಗ ಬೆಂಗಳೂರು ತಂಡಕ್ಕೆ ಮತ್ತೊಮ್ಮೆ ಮರಳಲು ಸಜ್ಜಾಗಿದ್ದಾರೆ.

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಭಾಗವಾಗಿ ಮುಂದಿನ ವರ್ಷ ಮರಳಲಿದ್ದೇನೆಂದು ಮಿ.360 ಖ್ಯಾತಿಯ ಎಬಿ ಡಿವಿಲಿಯರ್ಸ್ ಖಚಿತ ಪಡಿಸಿದ್ದಾರೆ. ಈ ಮೂಲಕ 2023ರ ಐಪಿಎಲ್​​ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​ ಅವರನ್ನ​​ ಕಣ್ತುಂಬಿಕೊಳ್ಳುವ ಅವಕಾಶ ಮತ್ತೊಮ್ಮೆ ಪ್ರೇಕ್ಷಕರಿಗೆ ಸಿಗಲಿದೆ. ಭಾರತದಲ್ಲಿ ಕೋಟ್ಯಂತರ ಅಭಿಮಾನಿ ಹೊಂದಿರುವ ಎಬಿಡಿ, ಆರ್​ಸಿಬಿ ತಂಡದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.

  • "I would love to return in IPL in next year and I'm looking forward to it. And there might be some games in my second home town in Chinnaswamy Bangalore." - Ab De Villiers (To VUSport)

    — CricketMAN2 (@ImTanujSingh) May 24, 2022 " class="align-text-top noRightClick twitterSection" data=" ">

ಕಳೆದ ಕೆಲ ತಿಂಗಳ ಹಿಂದೆ ಎಲ್ಲ ರೀತಿಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ಎಬಿಡಿ, 2022ರ ಐಪಿಎಲ್​​​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರ ಬೆನ್ನಲ್ಲೇ ಮಾತನಾಡಿರುವ ಅವರು, ಮುಂದಿನ ವರ್ಷ ನಾನು ಖಂಡಿತವಾಗಿ ಐಪಿಎಲ್​ನಲ್ಲಿ ಇರಲಿದ್ದೇನೆ. ನನ್ನ ಎರಡನೇ ತವರು ಮನೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಲು ಇಷ್ಟಪಡುತ್ತಿದ್ದೇನೆ. ಆದರೆ, ಯಾವ ಪಾತ್ರದ ಮೂಲಕ ಕಮ್​​ಬ್ಯಾಕ್​ ಮಾಡಲಿದ್ದೇನೆ ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ಡಿವಿಲಿಯರ್ಸ್​ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಪರ 228 ಏಕದಿನ ಪಂದ್ಯಗಳನ್ನಾಡಿರುವ ಎಬಿಡಿ, 9,577ರನ್​​​ಗಳಿಕೆ ಮಾಡಿದ್ದು, 2008 ರಿಂದಲೂ ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಭಾಗವಾಗಿದ್ದರು. ಆದರೆ, ಈ ವರ್ಷದ ಆವೃತ್ತಿಯಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಇಲ್ಲಿಯವರೆಗೆ ಐಪಿಎಲ್​ನಲ್ಲಿ 157 ಪಂದ್ಯಗಳನ್ನಾಡಿರುವ ಇವರು, 4,522 ರನ್​​ಗಳಿಕೆ ಮಾಡಿದ್ದಾರೆ. ಆರ್​​ಸಿಬಿ ಪರ ಸುಮಾರು 11 ವರ್ಷಗಳ ಕಾಲ(2011-2021) ಆಡಿರುವ ಎಬಿಡಿ ಅನೇಕ ಪಂದ್ಯಗಳಲ್ಲಿ ತಂಡಕ್ಕೆ ಜಯದ ಕಾಣಿಕೆ ನೀಡಿದ್ದಾರೆ.

AB de Villiers set to return for IPL
ವಿರಾಟ್​ ಜೊತೆ ಅಬ್ಬರಿಸಿದ್ದ ಎಬಿ ಡಿವಿಲಿಯರ್ಸ್​​

ಇದನ್ನೂ ಓದಿ: 'ಹಾಲ್​ ಆಫ್​ ಫೇಮ್'​ ಗೌರವಕ್ಕೆ ಎಬಿಡಿ,ಗೇಲ್​.. IPL ಇತಿಹಾಸದಲ್ಲಿ ವಿಶೇಷ ಪ್ರಶಸ್ತಿ ಪರಿಚಯಿಸಿದ ಆರ್​ಸಿಬಿ

ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸಾಲಿನ ಐಪಿಎಲ್​ನಿಂದ ವಿಶೇಷ ಪ್ರಶಸ್ತಿ ನೀಡಲು ಆರಂಭಿಸಿದೆ. ತಂಡದ ಪರ ಅತಿ ಹೆಚ್ಚು ವರ್ಷಗಳ ಕಾಲ ಆಟವಾಡಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ ಹಾಗೂ ಕೆರಿಬಿಯನ್​ ದೈತ್ಯ ಕ್ರಿಸ್​ ಗೇಲ್​​​ ಅವರು ಚೊಚ್ಚಲ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. 'ಹಾಲ್​ ಆಫ್​ ಫೇಮ್​​' ಎಂಬ ಹೆಸರಿನಲ್ಲಿ ಪ್ರಶಸ್ತಿ ಪರಿಚಯ ಮಾಡಿದೆ. ಗೇಲ್ ಹಾಗೂ ಎಬಿಡಿಗೆ ಮುಂದಿನ ವರ್ಷದ ಐಪಿಎಲ್ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪ್ರಶಸ್ತಿ ನೀಡುವ ಕಾರ್ಯಕ್ರಮ ಆಯೋಜನೆ ಮಾಡಿದೆ.

ಆತ್ಮೀಯ ಗೆಳೆಯ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿ ವಿಲಿಯರ್ಸ್​​​​​​ ಮುಂದಿನ ವರ್ಷ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡಕ್ಕೆ ಮರಳಲಿದ್ದಾರೆ ಎಂದು ಭಾರತದ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ ಕಳೆದ ಕೆಲ ದಿನಗಳ ಹಿಂದೆ ವಿಶ್ವಾಸ ವ್ಯಕ್ತಪಡಿಸಿದ್ದರು. ಎಬಿ ಡಿ ವಿಲಿಯರ್ಸ್​​​​​​​​ ಆರ್​​​​ಸಿಬಿ ಕುಟುಂಬದ ದೊಡ್ಡ ಸದಸ್ಯರಾಗಿದ್ದು, ಎಬಿಡಿಯನ್ನು ತಾವು ಸಾಕಷ್ಟು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.