ETV Bharat / sports

ಮುಂದುವರಿದ ಪೂಜಾರ ವೈಫಲ್ಯ: ಕಳೆದ 10 ಇನ್ನಿಂಗ್ಸ್​ಗಳಿಂದ ಅರ್ಧಶತಕವೇ ಇಲ್ಲ, 21 ಗರಿಷ್ಠ ರನ್​!

author img

By

Published : Aug 12, 2021, 10:36 PM IST

ಪೂಜಾರ ಕಳೆದ 10 ಇನ್ನಿಂಗ್ಸ್​ಗಳಲ್ಲಿ 15,21, 7,0,17,8,15,4,12*,9 ರನ್​ಗಳಿಸಿದ್ದಾರೆ. ಇನ್ನು ಕಳೆದ 2 ವರ್ಷಗಳಲ್ಲಿ ಒಂದೂ ಶತಕ ಬಾರಿಸಿಲ್ಲ. ಕಳೆದ 25 ಇನ್ನಿಂಗ್ಸ್​ಗಳಲ್ಲಿ 5 ಅರ್ಧಶತಕ ಮಾತ್ರಗಳಿಸಿದ್ದಾರೆ.

India vs England test:
ಚೇತೇಶ್ವರ್ ಪೂಜಾರ

ಲಂಡನ್​: ಒಂದು ಕಾಲದಲ್ಲಿ ಭಾರತದ 2ನೇ ವಾಲ್​ ಎಂದೇ ಕರೆಸಿಕೊಳ್ಳುತ್ತಿದ್ದ ಚೇತೇಶ್ವರ್​ ಪೂಜಾರ ದಯನೀಯ ವೈಫಲ್ಯ ಅನುಭವಿಸುತ್ತಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ ಅರ್ಧಶತಕವಿಲ್ಲದೇ ಸತತ 10 ಇನ್ನಿಂಗ್ಸ್​ ಕಳೆದಿದ್ದಾರೆ.

ಮೊದಲ ಪಂದ್ಯದಲ್ಲಿ 4 ರನ್​ಗೆ ವಿಕೆಟ್​ ಒಪ್ಪಿಸಿದ್ದ ಪೂಜಾರ ಇಂದಿನ ಪಂದ್ಯದಲ್ಲಿ ಕೇವಲ 9 ರನ್​ಗಳಿಗೆ ವಿಕೆಟ್​ ಒಪ್ಪಿಸಿ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇದಲ್ಲದೇ ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ 8 ಮತ್ತು 15 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು.

ಅವರು ಕಳೆದ 10 ಇನ್ನಿಂಗ್ಸ್​ಗಳಲ್ಲಿ 15,21, 7,0,17,8,15,4,12*,9 ರನ್​ಗಳಿಸಿದ್ದಾರೆ. ಇನ್ನು ಕಳೆದ 2 ವರ್ಷಗಳಲ್ಲಿ ಒಂದೂ ಶತಕ ಬಾರಿಸಿಲ್ಲ. ಕಳೆದ 25 ಇನ್ನಿಂಗ್ಸ್​ಗಳಲ್ಲಿ 5 ಅರ್ಧಶತಕ ಮಾತ್ರಗಳಿಸಿದ್ದಾರೆ.

ಈಗಾಗಲೇ ನಿಧಾನಗತಿ ಇನ್ನಿಂಗ್ಸ್​ನಿಂದ ಟೀಕೆಗೆ ಗುರಿಯಾಗಿರುವ ಚೇತೇಶ್ವರ್​ ಪೂಜಾರ ಇದೀಗ ಸತತ ವೈಫಲ್ಯ ಅನುಭವಿಸುತ್ತಿರುವುದರಿಂದ ತಂಡದಲ್ಲಿ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಟೀಮ್​ ಮ್ಯಾನೇಜ್​ಮೆಂಟ್​ ಸೂರ್ಯಕುಮಾರ್ ಯಾದವ್​ ಅವರನ್ನು ಕೂಡ ಮಧ್ಯಮ ಕ್ರಮಾಂಕಕ್ಕೆಂದು ಇಂಗ್ಲೆಂಡ್​ಗೆ ಕರೆಸಿಕೊಂಡಿದೆ. ಅಲ್ಲದೇ ಹನುಮ ವಿಹಾರಿ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪೂಜಾರ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೆ ಮುಂದಿನ ಪಂದ್ಯಗಳಲ್ಲಿ ತಂಡದಿಂದ ಹೊರಬೀಳಲಿದ್ದಾರೆ ಎನ್ನುವುದರಲ್ಲಿ ಯಾವುದೇ ಅಶ್ಚರ್ಯವಿಲ್ಲ.

ಇದನ್ನು ಓದಿ:ಸತತ 8ನೇ ಬಾರಿ ಇಂಗ್ಲೆಂಡ್​ನಲ್ಲಿ ಟಾಸ್​ ಸೋತ ಕೊಹ್ಲಿ!: ಟಾಸ್​ ಸೋತವರಿಗೂ ಅವಾರ್ಡ್​ ಕೊಡಿ ಎಂದ ಅಭಿಮಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.