ETV Bharat / sports

ಸತತ 8ನೇ ಬಾರಿ ಇಂಗ್ಲೆಂಡ್​ನಲ್ಲಿ ಟಾಸ್​ ಸೋತ ಕೊಹ್ಲಿ!: ಟಾಸ್​ ಸೋತವರಿಗೂ ಅವಾರ್ಡ್​ ಕೊಡಿ ಎಂದ ಅಭಿಮಾನಿಗಳು

author img

By

Published : Aug 12, 2021, 9:09 PM IST

ಆಸಕ್ತಿಕರ ವಿಷಯವೆಂದರೆ ಕೊಹ್ಲಿ 2018ರ ಪ್ರವಾಸದಲ್ಲಿ ಎಲ್ಲ 5 ಪಂದ್ಯಗಳಲ್ಲೂ ಟಾಸ್​ ಸೋಲು ಕಂಡಿದ್ದರು. ಇದೀಗ ಪ್ರಸ್ತುತ ಪ್ರವಾಸದಲ್ಲೂ ಮೊದಲೆರಡು ಪಂದ್ಯಗಳಲ್ಲಿ ಟಾಸ್​ ಕಳೆದುಕೊಳ್ಳುವ ಮೂಲಕ ನಿರಾಸೆಯನುಭವಿಸಿದ್ದಾರೆ.

Kohli loses 8th straight toss in England
ವಿರಾಟ್​ ಕೊಹ್ಲಿ

ಲಂಡನ್​: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಟೆಸ್ಟ್​ ಪಂದ್ಯದ ವೇಳೆ ಇಂಗ್ಲೆಂಡ್​ ನೆಲದಲ್ಲಿ ​ಸತತ 8ನೇ ಬಾರಿ ಟಾಸ್​ ಸೋಲು ಕಂಡಿದ್ದಾರೆ. ಗುರುವಾರದಿಂದ ಆರಂಭವಾದ ಪಂದ್ಯದಲ್ಲೂ ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಆಸಕ್ತಿಕರ ವಿಷಯವೆಂದರೆ ಕೊಹ್ಲಿ 2018ರ ಪ್ರವಾಸದಲ್ಲಿ ಎಲ್ಲ 5 ಪಂದ್ಯಗಳಲ್ಲೂ ಟಾಸ್​ ಸೋಲು ಕಂಡಿದ್ದರು. ಇದೀಗ ಪ್ರಸ್ತುತ ಪ್ರವಾಸದಲ್ಲೂ ಮೊದಲೆರಡು ಪಂದ್ಯಗಳಲ್ಲಿ ಟಾಸ್​ ಕಳೆದುಕೊಳ್ಳುವ ಮೂಲಕ ನಿರಾಸೆಯನುಭವಿಸಿದ್ದಾರೆ.

ಒಟ್ಟಾರೆ ಇಂಗ್ಲೆಂಡ್​ ವಿರುದ್ಧ 16 ಟೆಸ್ಟ್​ಗಳಲ್ಲಿ ಕೇವಲ 2 ಬಾರಿ ಮಾತ್ರ ಗೆದ್ದಿದ್ದಾರೆ. ಉಳಿದೆಲ್ಲಾ ಟೆಸ್ಟ್​ ಪಂದ್ಯಗಳಲ್ಲಿ ಟಾಸ್​ ಸೋತಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಕೊಹ್ಲಿ ಟಾಸ್​ ಹಿಂದುಳಿದಿದ್ದಾರೆ. 85 ಪಂದ್ಯಗಳಲ್ಲಿ ಟಾಸ್​ ಗೆದ್ದಿದ್ದರೆ, 118 ಪಂದ್ಯಗಳಲ್ಲಿ ಟಾಸ್​ ಸೋಲು ಕಂಡಿದ್ದಾರೆ.

  • ICC should start awarding this prestigious Award to whichever captain loses most tosses in a year
    ICC Best Toss loser of the year, I bet kohli will keep wining this till he retires!

    — Ashwinator (@Ashwinator1) August 12, 2021 " class="align-text-top noRightClick twitterSection" data=" ">

ಭಾರತ ತಂಡದ ಟಾಸ್​ ಸೋಲುತ್ತಿದ್ದಂತೆ ಟ್ವಿಟರ್​ನಲ್ಲಿ ತಮಾಷೆಯ ಟ್ವೀಟ್​ಗಳು ಹರಿದಾಡುತ್ತಿವೆ. ಕೆಲವರು ಐಸಿಸಿ ಆದಷ್ಟು ಬೇಗ ಅತಿ ಹೆಚ್ಚು ಟಾಸ್​ ಗೆದ್ದ ನಾಯಕ ಮತ್ತು ಐಸಿಸಿ ಅತ್ಯುತ್ತಮ ಟಾಸ್​ ಸೋತ ನಾಯಕ ಎಂಬ ಪ್ರಶಸ್ತಿಗಳನ್ನು ನೀಡಬೇಕು. ಅದರಲ್ಲಿ ಭಾರತ ತಂಡದ ನಾಯಕ ಕೊಹ್ಲಿಗೆ ಖಂಡಿತ ಆ ಪ್ರಶಸ್ತಿ ಲಭಿಸಲಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನು ಓದಿ: ರೋಹಿತ್ ​ ರಾಹುಲ್​ 120ರನ್​ಗಳ ಜೊತೆಯಾಟ​..10 ವರ್ಷದ ನಂತರ ಈ ದಾಖಲೆ ಬರೆದ ಆರಂಭಿಕ ಜೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.