ETV Bharat / sports

5 ವಿಕೆಟ್​ ಪಡೆದು ಮಿಂಚಿದ ಆ್ಯಂಡರ್ಸನ್​: ಟೀಂ ಇಂಡಿಯಾ 364 ರನ್​ಗಳಿಗೆ ಆಲೌಟ್​

author img

By

Published : Aug 13, 2021, 7:30 PM IST

ಎರಡನೇ ಟೆಸ್ಟ್​ ಪಂದ್ಯದ 2ನೇ ದಿನವಾದ ಇಂದು ಇಂಗ್ಲೆಂಡ್​ ವೇಗಿ ಆ್ಯಂಡರ್ಸನ್​ ಬೌಲಿಂಗ್​ನಲ್ಲಿ ಮಿಂಚು ಹರಿಸಿದ್ದು, ಇಂಡಿಯಾ ಬ್ಯಾಟ್ಸಮನ್​ಗಳಿಗೆ ವಿಲನ್​ ಆಗಿ ಕಾಡಿದರು.

Anderson
Anderson

ಲಾರ್ಡ್ಸ್​​(ಲಂಡನ್​): ಕ್ರಿಕೆಟ್ ಕಾಶಿ ಲಾರ್ಡ್ಸ್​​​ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್​ - ಭಾರತದ ನಡುವೆ ಎರಡನೇ ಟೆಸ್ಟ್​​ ಪಂದ್ಯ ನಡೆಯುತ್ತಿದ್ದು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಮೊದಲ ಇನ್ನಿಂಗ್ಸ್​​ 364ರನ್​ಗಳಿಕೆ ಮಾಡಿದೆ. ನಿನ್ನೆ ಮೂರು ವಿಕೆಟ್​ನಷ್ಟಕ್ಕೆ 276ರನ್​ಗಳಿಸಿದ್ದ ಭಾರತ ಇಂದು 88ರನ್​ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.

KL Rahul
ಶತಕ ಸಿಡಿಸಿ ಮಿಂಚಿದ ರಾಹುಲ್​​​

ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್​ ಶರ್ಮಾ(83) ಹಾಗೂ ರಾಹುಲ್​(129) ತಂಡಕ್ಕೆ ಮೊದಲ ದಿನವೇ ಬದ್ರಬುನಾದಿ ಹಾಕಿಕೊಟ್ಟರು. ರೋಹಿತ್​ ವಿಕೆಟ್​ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ಪೂಜಾರಾ (9ರನ್​) ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಇದಾದ ಬಳಿಕ ರಾಹುಲ್​​ ಜೊತೆಗೂಡಿದ ಕ್ಯಾಪ್ಟನ್​ ಕೊಹ್ಲಿ(42) ತಂಡಕ್ಕೆ ಚೇತರಿಕೆ ನೀಡಿದರು. ಇವರ ವಿಕೆಟ್ ಬಿದ್ದ ನಂತರ ನೈಟ್​ ವಾಚ್​ಮ್ಯಾನ್​ ಆಗಿ ಬಂದಿದ್ದ ರಹಾನೆ(1)ರನ್​ಗಳಿಕೆ ಮಾಡಿ ಆಟ ಕಾಯ್ದಿರಿಸಿಕೊಂಡಿದ್ದರು.

Pant
ವಿಕೆಟ್ ಕೀಪರ್​ ರಿಷಭ್ ಪಂತ್​ ಬ್ಯಾಟಿಂಗ್​

ಇದನ್ನೂ ಓದಿರಿ: ಭಾರತಕ್ಕೆ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಉನ್ಮುಕ್ತ್​​ ಚಾಂದ್ ಕ್ರಿಕೆಟ್​ಗೆ ನಿವೃತ್ತಿ

ಎರಡನೇ ದಿನ ಇಂಗ್ಲೆಂಡ್ ಬೌಲರ್​ಗಳ ಮೆಲುಗೈ

ಎರಡನೇ ದಿನದಾಟ ಆರಂಭಗೊಳ್ಳುತ್ತಿದ್ದಂತೆ ಇಂಗ್ಲೆಂಡ್​ ಬೌಲರ್​ಗಳು ಮೆಲುಗೈ ಸಾಧಿಸಿದರು. ಅರಂಭದಲ್ಲೇ ರಾಹುಲ್​(129), ರಹಾನೆ(1) ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ರಿಷಬ್​ ಪಂತ್​(37), ಜಡೇಜಾ(40) ರನ್​ಗಳಿಕೆ ಮಾಡಿ ತಂಡ 300ರ ಗಡಿ ದಾಟುವಂತೆ ಮಾಡಿದರು. ಇದಾದ ಬಳಿಕ ಶಮಿ(0), ಶರ್ಮಾ(8) ಹಾಗೂ ಬುಮ್ರಾ(0)ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇಂಗ್ಲೆಂಡ್​ ಪರ ಬೌಲಿಂಗ್​ನಲ್ಲಿ ಮಿಂಚಿದ ಆ್ಯಂಡರ್ಸನ್​ 5 ವಿಕೆಟ್ ಕಬಳಿಸಿದರೆ, ರಾಬಿನ್ಸ್​ನ ಹಾಗೂ ಮಾರ್ಕ್​ ವುಡ್​ ತಲಾ 2ವಿಕೆಟ್ ಹಾಗೂ ಮೊಯಿನ್​ ಅಲಿ 1 ವಿಕೆಟ್​ ಪಡೆದುಕೊಂಡರು. ಲಾರ್ಡ್ಸ್​ ಮೈದಾನದಲ್ಲಿ ಅನೇಕ ಸಲ ಭಾರತೀಯ ಬ್ಯಾಟ್ಸಮನ್​ಗಳಿಗೆ ವಿಲನ್​ ಆಗಿ ಕಾಡಿದ ಆ್ಯಂಡರ್ಸನ್​ ಮತ್ತೊಮ್ಮೆ 5ವಿಕೆಟ್​ ಪಡೆದು ಮಿಂಚಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ ದಾಖಲೆಯ 31ನೇ ಸಲ 5 ವಿಕೆಟ್​ ಪಡೆದುಕೊಂಡು ಇಂಗ್ಲೆಂಡ್ ವೇಗಿ ಆ್ಯಂಡರ್ಸನ್​ ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.