ETV Bharat / sports

Ind vs Aus 1st T20: ರಾಹುಲ್​, ಹಾರ್ದಿಕ್​ ಅರ್ಧಶತಕ.. ಆಸ್ಟ್ರೇಲಿಯಾಗೆ 209 ರನ್​ ಬೃಹತ್​ ಗುರಿ

author img

By

Published : Sep 20, 2022, 9:09 PM IST

Updated : Sep 20, 2022, 10:07 PM IST

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾಗೆ 208 ರನ್​ಗಳ ಬೃಹತ್​ ಮೊತ್ತದ ಗುರಿ ನೀಡಿದೆ. ಹಾರ್ದಿಕ್​ ಪಾಂಡ್ಯಾ, ಕೆ ಎಲ್​ ರಾಹುಲ್​ ಅರ್ಧಶತಕ ಬಾರಿಸಿದರು.

india-vs-australia
ಆಸ್ಟ್ರೇಲಿಯಾಗೆ 208 ರನ್​ ಬೃಹತ್​ ಗುರಿ

ಮೊಹಾಲಿ, ಪಂಜಾಬ್​: ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ, ಸೂರ್ಯಕುಮಾರ್​ ಯಾದವ್​​, ಕೆಎಲ್​ ರಾಹುಲ್​ರ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ಮೊಹಾಲಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 208 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ.

ಟಾಸ್​ ಸೋತರೂ ಮೊದಲು ಬ್ಯಾಟ್​ ಮಾಡಲು ಅವಕಾಶ ಪಡೆದ ಭಾರತ ತವರಿನಲ್ಲಿ ಅಬ್ಬರಸಿ ಬೊಬ್ಬಿರಿಯಿತು. ಆರಂಭದಲ್ಲಿ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ವಿಕೆಟ್​ ಬೇಗನೇ ಕಳೆದುಕೊಂಡರೂ ಧೃತಿಗೆಡದ ರಾಹುಲ್, ಸೂರ್ಯಕುಮಾರ್​ ಯಾದವ್​ ಭರ್ಜರಿ ಬ್ಯಾಟ್​ ಬೀಸಿದರು.

ಸ್ಟ್ರೈಕ್​ರೇಟ್​ ಕಾರಣಕ್ಕಾಗಿ ಟೀಕೆಗೆ ಗುರಿಯಾಗಿರುವ ಕನ್ನಡಿಗ ಕೆ ಎಲ್​ ರಾಹುಲ್​ ಕೇವಲ 35 ಎಸೆತಗಳಲ್ಲಿ 55 ರನ್​ ಬಾರಿಸಿದರು. ಇದರಲ್ಲಿ 3 ಸಿಕ್ಸರ್​, 4 ಬೌಂಡರಿಗಳಿದ್ದವು. ಈ ಮೂಲಕ ರಾಹುಲ್​ ಟೀಕಾಕಾರಿಗೆ ಬ್ಯಾಟ್​ ಎತ್ತುವ ಮೂಲಕವೇ ಉತ್ತರ ನೀಡಿದರು. ಕೊನೆಗೆ ದೊಡ್ಡ ಹೊಡೆತಕ್ಕೆ ಮುಂದಾಗಿ ಹೇಜಲ್​ವುಡ್​ಗೆ ವಿಕೆಟ್​ ಒಪ್ಪಿಸಿದರು.

ಇನ್ನು ಏಷ್ಯಾಕಪ್​ನಲ್ಲಿ ಮಿಂಚು ಹರಿಸಲು ವಿಫಲವಾಗಿದ್ದ ಸೂರ್ಯಕುಮಾರ್​ ಯಾದವ್​ ಆಸ್ಟ್ರೇಲಿಯನ್ನರ ವಿರುದ್ಧ ಸವಾರಿ ಮಾಡಿದರು. 4 ಸಿಕ್ಸರ್​, 2 ಬೌಂಡರಿ ಸಮೇತ 46 ರನ್​ ಗಳಿಸಿ ಔಟಾಗಿ ಅರ್ಧಶತಕದಿಂದ ತಪ್ಪಿಸಿಕೊಂಡರು.

ಹಾರ್ದಿಕ್​ ಪಾಂಡ್ಯಾ ವೀರಾವೇಶ: ಭರ್ಜರಿ ಫಾರ್ಮ್​ನಲ್ಲಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಆಸೀಸ್​​ ಬೌಲರ್​ಗಳ ಬೆವರಿಳಿಸಿದರು. ಕೊನೆಯವರೆಗೂ ಔಟಾಗದೇ ಉಳಿದ ಹಾರ್ದಿಕ್​ 71 ರನ್​ ಗಳಿಸಿದರು. ಇದರಲ್ಲಿ 5 ಸಿಕ್ಸರ್​, 7 ಬೌಂಡರಿಗಳಿದ್ದವು. ಬಳಸಿದ್ದು 30 ಎಸೆತ ಮಾತ್ರ. ಸಿಕ್ಸ್​, ಫೋರ್​ಗಳಿಂದಲೇ ಪಾಂಡ್ಯಾ 58 ರನ್​ ಗಳಿಸಿದ್ದು ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಆಸ್ಟ್ರೇಲಿಯಾ ಪರವಾಗಿ ಜೋಸ್​ ಹೇಜಲ್​ವುಡ್​ 2, ನಾಥನ್​ ಎಲ್ಲಿಸ್​ 3, ಕ್ಯಾಮರನ್​ ಗ್ರೀನ್​ 1 ವಿಕೆಟ್​ ಗಳಿಸಿದರು.

ಓದಿ: ಪ್ರತಿ ಬಾರಿ 200ರ ಸ್ಟ್ರೈಕ್​ರೇಟಲ್ಲಿ ಆಡಲಾಗದು.. ಬ್ಯಾಟಿಂಗ್​ ಸರಾಸರಿ ಟೀಕೆಗೆ ಕೆಎಲ್​ ರಾಹುಲ್​ ಉತ್ತರ

Last Updated : Sep 20, 2022, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.