ETV Bharat / sports

​5 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್.. ಲಾರ್ಡ್ಸ್​ ಟೆಸ್ಟ್​ ಗೆಲುವಿನ ಸನಿಹದಲ್ಲಿ ಭಾರತ

author img

By

Published : Aug 16, 2021, 9:23 PM IST

ಮೊಹಮ್ಮದ್ ಶಮಿ(56) ಮತ್ತು ಜಸ್ಪ್ರೀತ್​ ಬುಮ್ರಾ(34) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇವರಿಬ್ಬರ ಬ್ಯಾಟಿಂಗ್​ ನೆರವಿನಿಂದ ಕೊನೆಯ ದಿನ ಭಾರತ ತಂಡ 8 ವಿಕೆಟ್​ ಕಳೆದುಕೊಂಡು 298 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡು, ಇಂಗ್ಲೆಂಡ್​ಗೆ 272 ರನ್​ಗಳ ಗುರಿ ನೀಡಿತ್ತು.

ಲಾರ್ಡ್ಸ್​ ಟೆಸ್ಟ್​ ಗೆಲುವಿನ ಸನಿಹದಲ್ಲಿ ಭಾರತ
ಲಾರ್ಡ್ಸ್​ ಟೆಸ್ಟ್​ ಗೆಲುವಿನ ಸನಿಹದಲ್ಲಿ ಭಾರತ

ಲಂಡನ್: ಲಾರ್ಡ್ಸ್​ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ 272 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಇಂಗ್ಲೆಂಡ್​ ಭಾರತೀಯ ವೇಗಿಗಳ ದಾಳಿಗೆ ಕಂಗೆಟ್ಟು ಕೇವಲ 75ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿದೆ.

ಮೊಹಮ್ಮದ್ ಶಮಿ(56) ಮತ್ತು ಜಸ್ಪ್ರೀತ್​ ಬುಮ್ರಾ(34) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಇಂದು ಭಾರತಕ್ಕೆ ಆಸರೆಯಾಯಿತು. ಇವರಿಬ್ಬರ ಬ್ಯಾಟಿಂಗ್​ ನೆರವಿನಿಂದ ಕೊನೆಯ ದಿನ ಭಾರತ ತಂಡ 8 ವಿಕೆಟ್​ ಕಳೆದುಕೊಂಡು 298ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡು, ಇಂಗ್ಲೆಂಡ್​ಗೆ 272 ರನ್​ಗಳ ಗುರಿ ನೀಡಿತ್ತು.

ಇನ್ನು ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್​ ತಂಡ 1 ರನ್​ಗೆ ಆರಂಭಿಕರಾದ ರೋರಿ ಬರ್ನ್ಸ್​(0) ಮತ್ತು ಡೊಮಿನಿಕ್​ ಸಿಬ್ಲಿ(0) ವಿಕೆಟ್​ ಕಳೆದುಕೊಂಡಿತು. ಬರ್ನ್ಸ್​ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಸಿಬ್ಲಿ ಶಮಿ ಬೌಲಿಂಗ್​ನಲ್ಲಿ ಪಂತ್​ಗೆ ಕ್ಯಾಚ್​ ನೀಡಿದರು.

ನಂತರ ಜೊತೆ ಹಮೀದ್​ ಜೊತೆಗೂಡಿದ ಜೋರೂಟ್​ 13 ಓವರ್​ಗಳ ಜೊತೆಯಾಟದಲ್ಲಿ 43 ರನ್​ ಸೇರಿಸಿ ಚೇತರಿಕೆ ನೀಡಿದರು. ಆದರೆ, ಈ ಹಂತದಲ್ಲಿ ದಾಳಿಗಿಳಿದ ಇಶಾಂತ್ ಶರ್ಮಾ 45 ಎಸೆತಗಳಲ್ಲಿ 9 ರನ್​ಗಳಿಸಿದ್ದ ಹಮೀದ್​ರನ್ನ ಎಲ್​ಬಿ ಬಲೆಗೆ ಬೀಳಿಸಿದರು. 5ನೇ ಕ್ರಮಾಂಕದಲ್ಲಿ ಬಂದ ಬೈರ್​ಸ್ಟೋವ್ ಕೂಡ ಕೇವಲ 2 ರನ್​ಗಳಿಸಿ ಇಶಾಂತ್ ಶರ್ಮಾಗೆ 2ನೇ ಬಲಿಯಾದರು.

60 ಎಸೆಗಳಲ್ಲಿ 5 ಬೌಂಡರಿ ಸೇರಿದಂತೆ 33 ರನ್​ ಗಳಿಸಿದ್ದ ಇಂಗ್ಲೆಂಡ್​ ನಾಯಕ ಜೋ ರೂಟ್​, ಬೈರ್​ಸ್ಟೋವ್​ ವಿಕೆಟ್​ ಒಪ್ಪಿಸಿದ ನಂತರದ ಓವರ್​ನಲ್ಲೇ ಬುಮ್ರಾಗೆ ವಿಕೆಟ್​ ಒಪ್ಪಿಸಿದರು.

ಪ್ರಸ್ತು 31 ಓವರ್​ಗಳ ಆಟ ಬಾಕಿಯುಳಿದಿದ್ದು, ಇಂಗ್ಲೆಂಡ್​ಗೆ ಗೆಲ್ಲಲು 197 ರನ್​ಗಳ ಅವಶ್ಯಕತೆಯಿದೆ. ಭಾರತಕ್ಕೆ 5 ವಿಕೆಟ್​ಗಳ ಬೇಕಾಗಿವೆ. ಮೊಯೀನ್ ಅಲಿ(3) ಮತ್ತು ಬಟ್ಲರ್​(4) ಕ್ರೀಸ್​ನಲ್ಲಿದ್ದಾರೆ.

ಇದನ್ನು ಓದಿ:ಪದೇ ಪದೇ ಕೆಣಕಿದ ಆಂಗ್ಲರಿಗೆ ಬ್ಯಾಟ್​ನಿಂದಲೇ ಉತ್ತರಿಸಿದ ಶಮಿ-ಬುಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.