ETV Bharat / sports

ಲೆಜೆಂಡ್ಸ್ ಲೀಗ್ ಕ್ರಿಕೆಟ್​​: ಯೂಸುಫ್ ಪಠಾಣ್​​​ ಆರ್ಭಟಕ್ಕೆ ಬೆಚ್ಚಿದ ವರ್ಲ್ಡ್​​ ಜೈಂಟ್ಸ್​​

author img

By

Published : Sep 17, 2022, 6:44 AM IST

ಕೋಲ್ಕತ್ತಾ ಈಡನ್ ಗಾರ್ಡನ್​ ಮೈದಾನದಲ್ಲಿ ನಡೆದ ಲೆಜೆಂಡ್ಸ್​ ಲೀಗ್​ ಕ್ರಿಕೆಟ್​​​ ಪಂದ್ಯದಲ್ಲಿ ವರ್ಲ್ಡ್​ ಜೈಂಟ್ಸ್ ವಿರುದ್ಧ ಇಂಡಿಯಾ ಮಹಾರಾಜಾಸ್​ 6 ವಿಕೆಟ್​​ಗಳ ಗೆಲುವು ದಾಖಲು ಮಾಡಿದೆ.

India Maharajas Beat World Giants
India Maharajas Beat World Giants

ಕೋಲ್ಕತ್ತಾ: ಲೆಜೆಂಡ್ಸ್ ಲೀಗ್​ ಕ್ರಿಕೆಟ್​​ನ ಮೊದಲ ಪಂದ್ಯದಲ್ಲಿ ವರ್ಲ್ಡ್​ ಜೈಂಟ್ಸ್​ ವಿರುದ್ಧ ಇಂಡಿಯಾ ಮಹಾರಾಜಾಸ್​​ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ತಂಡದ ಪರ ಯೂಸುಫ್ ಪಠಾಣ್​​, ಪಂಕಜ್​ ಸಿಂಗ್​​ ಅದ್ಭುತ ಪ್ರದರ್ಶನ ನೀಡಿದ್ದು, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.

ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ವಿಶೇಷ ಚಾರಿಟಿ ಪಂದ್ಯ ಆಯೋಜನೆ ಮಾಡಲಾಗಿತ್ತು. ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ಯೂಸುಫ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ವರ್ಲ್ಡ್​ ಜೈಂಟ್ಸ್ ತಂಡ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 170ರನ್​​​ಗಳಿಕೆ ಮಾಡಿತು. ಮಹಾರಾಜಾಸ್ ಪರ ಬೌಲಿಂಗ್​ನಲ್ಲಿ ಮಿಂಚಿದ ಪಂಕಜ್ ಸಿಂಗ್ 5 ವಿಕೆಟ್ ಪಡೆದು ಗಮನ ಸೆಳೆದರು.

India Maharajas Beat World Giants
ವರ್ಲ್ಡ್​​ ಜೈಂಟ್ಸ್​​ ವಿರುದ್ಧ ಗೆದ್ದ ಇಂಡಿಯಾ ಮಹಾರಾಜಾಸ್​​

ಇದನ್ನೂ ಓದಿ: ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್: ಗಂಗೂಲಿ ಭಾರತ ತಂಡದ ನಾಯಕ, ಪಂದ್ಯ ಎಲ್ಲಿ? ಯಾವಾಗ?

171ರನ್​​ಗಳ ಸವಾಲಿನ ಗುರಿ ಬೆನ್ನತ್ತಿದ ಮಹಾರಾಜಾಸ್ ಕೇವಲ 50ರನ್​​​​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಒಂದಾದ ಯೂಸುಫ್​​ ಹಾಗೂ ತನ್ಮಯ್​ ಶ್ರೀವಾಸ್ತವ್​​​ ತಂಡಕ್ಕೆ 103ರನ್​​​ಗಳ ಜೊತೆಯಾಟವಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಯೂಸುಪ್ ಕೇವಲ 35 ಎಸೆತಗಳಲ್ಲಿ 2 ಸಿಕ್ಸರ್​, ಐದು ಬೌಂಡರಿ ಸಮೇತ 50ರನ್​​​ಗಳಿಸಿದರು. ಹೀಗಾಗಿ ತಂಡ 18.4 ಓವರ್​​​ಗಳಲ್ಲಿ ಗೆಲುವಿನ ದಡ ಸೇರಿಸಿದರು.

ನಿನ್ನೆ ಪಂದ್ಯದಲ್ಲಿ ಮಹಾರಾಜಾಸ್ ತಂಡವನ್ನ ವಿರೇಂದ್ರ ಸೆಹ್ವಾಗ್ ಮುನ್ನಡೆಸಿದರೆ, ವರ್ಲ್ಡ್​​ ಜೈಂಟ್ಸ್ ತಂಡದ ನಾಯಕತ್ವ ಜವಾಬ್ದಾರಿ ಜಾಕ್​ ಕಾಲೀಸ್ ಹೊತ್ತುಕೊಂಡಿದ್ದರು. ಎರಡು ತಂಡಗಳಲ್ಲಿ ದಿಗ್ಗಜ ಆಟಗಾರರಾದ ಶೇನ್​ ವ್ಯಾಟ್ಸನ್​, ಸೇಲ್​ ಸ್ಟೇನ್​, ಮುತ್ತಯ್ಯ ಮುರಳೀಧರನ್​, ಮೊಹಮ್ಮದ್ ಕೈಫ್​, ಸ್ಟುವರ್ಟ್​ ಬಿನ್ನಿ, ಪಾರ್ಥಿವ್ ಪಟೇಲ್​, ಎಸ್ ಬದ್ರಿನಾಥ್​ ಸೇರಿದಂತೆ ಅನೇಕರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.